ಶಿಕ್ಷಣ ಅಭಿಯಾನದಲ್ಲಿ ರಶ್ಮಿಕಾ ಮಂದಣ್ಣ

Share

ಸದಾ ಒಂದಿಲ್ಲ ಒಂದು ಚರ್ಚೆಯಿಂದ ಪ್ರಚಲಿತರಾಗಿರುವ ಚಿತ್ರನಟಿ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಅಭಿಯಾನಕ್ಕೆ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಹೆಸರನ್ನು ಉಲ್ಟಾವಾಗಿ ಬರೆಯುವ ಮೂಲಕ ಟ್ರೊಲಿಗರ ಆಹಾರಕ್ಕೆ ತುತ್ತಾಗಿದ್ದಾರೆ. ಈ ಕಾರಣ ಅವರು ಯಾರೂ ಓದುವುದಕ್ಕೆ ಬರುವುದಿಲ್ಲವೋ ಅವರಿಗಾಗಿ ಹೆಸರನ್ನು ಉಲ್ಪವಾಗಿ ಬರೆದುಕೊಂಡಿದ್ದೇನೆ ಎಂಬ ಉತ್ತರವನ್ನು ನೀಡಿದ್ದಾರೆ.

ಬಹುಭಾಷಾ ನಟಿಯಾಗಿ ರಶ್ಮಿಕಾ ಮಂದಣ್ಣ ಹೆಸರಾಗಿದ್ದು, ಇತ್ತೀಚೆಗೆ ಪುಷ್ಪ ಚಿತ್ರದಿಂದ ಸಾಕಷ್ಟು ಖ್ಯಾತಿಯನ್ನು ಪಡೆದಿದ್ದರು. ಹಿಂದಿ ಚಿತ್ರನಟ ಬಿಗ್ ಬಿ ಎಂದು ಕರೆಯುವ ಅಮಿತಾಬ್ ಬಚ್ಚನ್ ಜೊತೆ ಕೂಡ ರಶ್ಮಿಕಾ ಮಂದಣ್ಣ ಗುಡ್ ಬೈ ಚಿತ್ರದಲ್ಲಿ ತೆರೆ ಹಂಚಿಕೊಡಿದ್ದು, ಆ ಚಿತ್ರವು ಅಷ್ಟೊಂದು ಯಶಸ್ಸನ್ನು ಪಡೆಯಲಿಲ್ಲ. ಅವರು ಸಿದ್ದಾರ್ಥ ಮಲೋಹೋತ್ರ ಜತೆಯಲ್ಲಿ ಮಿಷನ್ ಮಜ್ನು ಚಿತ್ರದಲ್ಲಿ ನಟಿಸಿದ್ದಾರೆ.

Leave a Comment