`ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ

Share

ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗು ಚಿತ್ರ ಆರ್‌ಆರ್‌ಆರ್’ನನಾಟು ನಾಟು’ ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಲಭಿಸಿದೆ. ಗೋಲ್ಡನ್ ಗ್ಲೋಬ್ಸ್೨೦೨೩ ಪ್ರಶಸ್ತಿಯ ಎರಡು ವಿಭಾಗಗಳಲ್ಲಿ ಆರ್‌ಆರ್‌ಆರ್’ ಸಿನಿಮಾ ನಾಮಿನೇಟ್ ಆಗಿತ್ತು. ಬೆಸ್ಟ್ ಒರಿಜಿನಲ್ ಸಾಂಗ್ ಹಾಗೂ ಬೆಸ್ಟ್ ನಾನ್-ಇಂಗ್ಲೀಷ್ ಭಾಷೆಯ ಚಿತ್ರ ಎಂಬ ಎರಡು ಕ್ಯಾಟಗರಿಗಳಲ್ಲಿಆರ್‌ಆರ್‌ಆರ್’ ಚಿತ್ರ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿತ್ತು. ಎಂ.ಎA.ಕೀರವಾಣಿ ಸಂಗೀತ ನಿರ್ದೇಶನದ ಕಾಲಭೈರವ ಹಾಗೂ ರಾಹುಲ್ ಸಿಪ್ಲಿಗುಂಜ್ ಹಾಡಿರುವ ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ಸ್ ೨೦೨೩ ಸಾಲಿನಬೆಸ್ಟ್ ಒರಿಜಿನಲ್ ಸಾಂಗ್’ ಪ್ರಶಸ್ತಿ ಲಭಿಸಿದೆ. ಆ ಮೂಲಕ ಅಂತಾರಾಷ್ಟಿçÃಯ ಮಟ್ಟದಲ್ಲಿ `ಆರ್‌ಆರ್‌ಆರ್’ ಸಿನಿಮಾ ವಿಶಿಷ್ಟ ಸಾಧನೆ ಮಾಡಿದೆ.

ಆರ್‌ಆರ್‌ಆರ್’ ಚಿತ್ರತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ. ನಾಟು ನಾಟು ಎಂದು ಹಾಡಿ ಕುಣಿದು ಕುಪ್ಪಳಿಸಿದವರು ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮಚರಣ್. ಈ ಹಾಡು ಮತ್ತು ನೃತ್ಯಕ್ಕೆ ಚಿತ್ರದಲ್ಲಿ ಬ್ರಿಟಿಷರು ಸೋತು ಸುಸ್ತಾಗುತ್ತಾರೆ. ಹಾಡಿನಂತೆಯೇ ವಾಸ್ತವದಲ್ಲೂ ಆಗಿದೆ. ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ದಕ್ಕಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗಮೋಹನ್‌ರೆಡ್ಡಿ, ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರುಆರ್‌ಆರ್‌ಆರ್’ ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ತೆಲುಗು ಚಿತ್ರರಂಗದವರAತೂ ಇದು ನಮ್ಮ ಹೆಮ್ಮೆ ಎಂದು ಎದೆಯುಬ್ಬಿಸುವಂತೆ ಮಾಡಿದ್ದಾರೆ ರಾಜಮೌಳಿ. ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಭಾರತೀಯ ಚಿತ್ರ `ಆರ್‌ಆರ್‌ಆರ್’. ಈ ಹಾಡಿಗೆ ಸಾಹಿತ್ಯ ಬರೆದಿದ್ದು ಚಂದ್ರಬೋಸ್, ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದವರ ಹೆಸರು ಪ್ರೇಮ್ ರಕ್ಷಿತ್. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಅಂತಾರಾಷ್ಟಿçÃಯ ಮಟ್ಟದ ಶ್ರೇಷ್ಟ ಪ್ರಶಸ್ತಿಗಳಲ್ಲೊಂದು. ಪ್ರತಿ ವರ್ಷ ಆಸ್ಕರ್ ಘೋಷಣೆಗೆ ಮುನ್ನ ಗೋಲ್ಡನ್ ಗ್ಲೋಬ್ ಘೋಷಣೆಯಾಗುತ್ತದೆ. ಆಸ್ಕರ್ ನಂತರದ ಪ್ರತಿಷ್ಠಿತ ಪ್ರಶಸ್ತಿ ಎಂದೇ ಗುರುತಿಸುತ್ತದೆ.

Leave a Comment