ಪ್ಯಾಷನ್ ಮೂವಿ ಮೇರ‍್ಸ್ ಸಂಸ್ಥೆ ನಿರ್ಮಾಣ ಮಾಡಿರುವ `ಕ್ಯಾಂಪಸ್ ಕ್ರಾಂತಿ’ ಚಿತ್ರವು ಫೆಬ್ರವರಿ ೨೪ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ನಿರ್ದೇಶಕ ಸಂತೋಷ್‌ಕುಮಾರ್ ಅವರಿಗೆ ಮೂರನೇ ಚಿತ್ರವಾಗಿದ್ದು, ಕಾಲೇಜು ಹುಡುಗರು ಗಡಿ ಭಾಗದಲ್ಲಿ ನಡೆಯುವ ಕಥೆಯಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಈ ಚಿತ್ರದ ಗೀತೆಗಳು ಯಶಸ್ವಿಯಾಗಿವೆ. ವಿ. ಮನೋಹರ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಮನೋಹರ್ ಮಾತನಾಡಿ ಈ ಚಿತ್ರದಲ್ಲಿ ಅನುರಾಧಭಟ್, ಚೇತನ್ ನಾಯಕ್ ಗೀತೆಗಳನ್ನು ಹಾಡಿದ್ದಾರೆ. ಒಳ್ಳೊಳ್ಳೆ ಸಿನಿಮಾಗಳು ಪ್ರಚಾರವಿಲ್ಲದೆ ಹಾಗೆಯೇ ಮೂಲೆಗುಂಪಾಗಿರುವ ಉದಾಹರಣೆಗಳಿವೆ. ಆದರೆ, ಕ್ಯಾಂಪಸ್ ಕ್ರಾಂತಿ ಪ್ರಚಾರದಲ್ಲೂ ಮುಂದಿದೆ ಎನ್ನುತ್ತಾರೆ.

ನಟ ಅಫ್ಜಲ್ ಸೂಪರ್‌ಸ್ಟಾರ್ ಮಾತನಾಡಿ, ಕ್ಯಾಂಪಸ್ ಕ್ರಾಂತಿ ಚಿತ್ರದಲ್ಲಿ ಉಪನ್ಯಾಸಕ ಪಾತ್ರವನ್ನು ಮಾಡಿದ್ದೇನೆ. ಈ ಚಿತ್ರವು ಯುವಜನತೆಗೆ ಸಂಬAಧಿಸಿದ ಕಥಾವಸ್ತುವನ್ನು ಹೊಂದಿದೆ. ಉಪನ್ಯಾಸಕ ಪಾತ್ರವನ್ನು ನಿರ್ವಹಿಸುವಾಗ ಪ್ರೇಮಲೋಕ ಚಿತ್ರದಲ್ಲಿ ವಿಷ್ಣುವರ್ಧನ್ ನಿರ್ವಹಿಸಿದ ಉಪನ್ಯಾಸಕ ಪಾತ್ರ ತನಗೆ ಸ್ಪೂರ್ತಿಯಾಯಿತು ಎಂದರು.
