ಫೆ.೨೪ರಂದು `ಕ್ಯಾಂಪಸ್ ಕ್ರಾಂತಿ’ ಚಿತ್ರ ಬಿಡುಗಡೆ

Share

ಪ್ಯಾಷನ್ ಮೂವಿ ಮೇರ‍್ಸ್ ಸಂಸ್ಥೆ ನಿರ್ಮಾಣ ಮಾಡಿರುವ `ಕ್ಯಾಂಪಸ್ ಕ್ರಾಂತಿ’ ಚಿತ್ರವು ಫೆಬ್ರವರಿ ೨೪ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ನಿರ್ದೇಶಕ ಸಂತೋಷ್‌ಕುಮಾರ್ ಅವರಿಗೆ ಮೂರನೇ ಚಿತ್ರವಾಗಿದ್ದು, ಕಾಲೇಜು ಹುಡುಗರು ಗಡಿ ಭಾಗದಲ್ಲಿ ನಡೆಯುವ ಕಥೆಯಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಈ ಚಿತ್ರದ ಗೀತೆಗಳು ಯಶಸ್ವಿಯಾಗಿವೆ. ವಿ. ಮನೋಹರ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಮನೋಹರ್ ಮಾತನಾಡಿ ಈ ಚಿತ್ರದಲ್ಲಿ ಅನುರಾಧಭಟ್, ಚೇತನ್ ನಾಯಕ್ ಗೀತೆಗಳನ್ನು ಹಾಡಿದ್ದಾರೆ. ಒಳ್ಳೊಳ್ಳೆ ಸಿನಿಮಾಗಳು ಪ್ರಚಾರವಿಲ್ಲದೆ ಹಾಗೆಯೇ ಮೂಲೆಗುಂಪಾಗಿರುವ ಉದಾಹರಣೆಗಳಿವೆ. ಆದರೆ, ಕ್ಯಾಂಪಸ್ ಕ್ರಾಂತಿ ಪ್ರಚಾರದಲ್ಲೂ ಮುಂದಿದೆ ಎನ್ನುತ್ತಾರೆ.

ಕ್ಯಾಂಪಸ್ ಕ್ರಾಂತಿ ಚಿತ್ರದಿಂದ ಆರ್ಯ ಎಂಬ ಯುವ ನಾಯಕ ನಟ ಪರಿಚಯವಾಗುತ್ತಿದ್ದು, ಸಾಕಷ್ಟು ಭರವಸೆಯನ್ನು ಮೂಡಿಸುವ ಶಕ್ತಿಯನ್ನು ಹೊಂದಿದ್ದಾರೆ. ಅವರ ಪ್ರಕಾರ ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಜನರು ಕೇಳಿ ಇಷ್ಟಪಟ್ಟಿದ್ದಾರೆ. ನಟಿ ಇಶಾನಿ ಮಾತನಾಡಿ ಈ ಚಿತ್ರದಲ್ಲಿ ಸಂಪ್ರದಾಯಸ್ಥ ಕುಟಂಬದ ಮಗಳಾಗಿ ಕಾಣಿಸಲಿದ್ದು, ಕಿಕ್ ಬಾಕ್ಸಿಂಗ್ ಮತ್ತು ನೃತ್ಯವನ್ನು ಮಾಡಿದ್ದೇನೆ ಎಂದರು.
ನಟ ಅಫ್ಜಲ್ ಸೂಪರ್‌ಸ್ಟಾರ್ ಮಾತನಾಡಿ, ಕ್ಯಾಂಪಸ್ ಕ್ರಾಂತಿ ಚಿತ್ರದಲ್ಲಿ ಉಪನ್ಯಾಸಕ ಪಾತ್ರವನ್ನು ಮಾಡಿದ್ದೇನೆ. ಈ ಚಿತ್ರವು ಯುವಜನತೆಗೆ ಸಂಬAಧಿಸಿದ ಕಥಾವಸ್ತುವನ್ನು ಹೊಂದಿದೆ. ಉಪನ್ಯಾಸಕ ಪಾತ್ರವನ್ನು ನಿರ್ವಹಿಸುವಾಗ ಪ್ರೇಮಲೋಕ ಚಿತ್ರದಲ್ಲಿ ವಿಷ್ಣುವರ್ಧನ್ ನಿರ್ವಹಿಸಿದ ಉಪನ್ಯಾಸಕ ಪಾತ್ರ ತನಗೆ ಸ್ಪೂರ್ತಿಯಾಯಿತು ಎಂದರು.

Leave a Comment