ಫೆ.೨೪ರಂದು `ಜ್ಯೂಲಿಯಟ್-೨’ ಚಿತ್ರ ಬಿಡುಗಡೆ
ಬಹಳ ನಿರೀಕ್ಷೆ ಮೂಡಿಸಿದ್ದ ವಿಭಿನ್ನ ಕಥಾ ಹಂದರದ ಚಿತ್ರ `ಜ್ಯೂಲಿಯಟ್-೨’ ಫೆಬ್ರವರಿ ೨೪ರಂದು ಬಿಡುಗಡೆಯಾಗಲಿದೆ. ಇದೊಂದು ಮಹಿಳಾ ಪ್ರದಾನ ಚಿತ್ರವಾಗಿದ್ದು, ಪ್ರೇಮ ಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದಾರೆ. ತಂದೆ ಮಗಳ ಬಾಂಧವ್ಯವನ್ನು ಬಿಂಬಿಸುವ ಚಿತ್ರವನ್ನು ವಿರಾಟ್. ಬಿ.ಗೌಡ ನಿರ್ದೇಶಿಸಿದ್ದು, ನಿರ್ಮಾಣವನ್ನು ಲಿಖಿತ್ ಆರ್. ಕೋಟ್ಯಾನ್ ಮಾಡಿದ್ದಾರೆ.
ಚಿತ್ರದಲ್ಲಿ ನಾಯಕಿಯು ತನ್ನ ತಂದೆಯ ಕೊನೆಯ ಆಸೆಯನ್ನು ಈಡೇರಿಸಲು ಹುಟ್ಟೂರಿಗೆ ಬಂದು ಅಲ್ಲಿ ಏನೆಲ್ಲ ಅಡೆತಡೆಗಳು ಎದುರಾಗುತ್ತದೆ. ಶಾಂತಿ ರೂಪಿಯಾದ ಹೆಣ್ಣಿಗೆ ಒಂದು ವೇಳೆ ಏನಾದರೂ ತೊಂದರೆಯಾದರೆ ಅವಳು ಹೇಗೆ ಸಮಸ್ಯೆಯನ್ನುಎದುರಿಸುತ್ತಾಳೆ ಎಂಬುದನ್ನು ನೈಜತೆಗೆ ಹತ್ತಿರವಾಗಿ ಚಿತ್ರೀಕರಿಸಲಾಗಿದೆಯಂತೆ. ಈ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆಯಿದ್ದು, ಮಂಗಳೂರು, ಬೆಳ್ತಂಗಡಿ ಕಾಡಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಜತ್ ಮತ್ತು ಸಂದೀಪ್ ಬಲ್ಲಾಳ ಸಂಗೀತ ನೀಡಿದ್ದು, ರವಿ ಬಸ್ರೂರು ಸಹೋದರ ಸಚಿನ್ ಬಸ್ರೂರು ಅವರ ಹಿನ್ನೆಲೆ ಸಂಗೀತ, ಶೆಂಟೋ ವಿ.ಅಂಟೋ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರಮುಖ ಪಾತ್ರದಲ್ಲಿ ಅನೂಪ್ ಸಾಗರ್, ಶ್ರೀಕಾಂತ್, ರಾಯ್ ಬಡಿಗೇರ್, ಅಧು ಆಚಾರ್ಯ, ರವಿ, ರಾದೇಶ್ ಶೆಣೈ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.