ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ “ಪ್ರಶಾಂತ್ ಗೌಡ”

ಸಾಕಷ್ಟು ಅವಮಾನದ ಹಾದಿಯಲ್ಲಿ ಸಾಗಿದ ಪ್ರಶಾಂತ್ ಗೌಡ ಈಗ ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ ಸಾಗಿದ್ದಾರೆ. ಪ್ರಶಾಂತ್ ಗೌಡ ಮೂಲತ ಎಂ.ಬಿ.ಎ ಪದವೀಧರ. ಸಿನಿಮಾ ಕಲಾವಿದ ಆಗಬೇಕು ಎನ್ನುವ ಆಸೆಯಿಂದ ಅವರು ಸಾಕಷ್ಟು ಆಡಿಶನ್ ಗಳಲ್ಲಿ ಭಾಗವಹಿಸಿದ್ದರು. ಸುಮಾರು 150ರಷ್ಟು ಆಡಿಷನ್ ಗಳಲ್ಲಿ ಭಾಗವಹಿಸಿದರೂ ಚಾನ್ಸ್ ಸಿಗಲಿಲ್ಲ. ಕೊನೆಗೆ ತಮ್ಮದೇ ವಿಡಿಯೋ ಶುರುಮಾಡಿದ ಪ್ರಶಾಂತ್ ಗೌಡ ಕಲಾವಿದ ಆಗುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದರು. ವಿಡಿಯೋ ಶುರು ಮಾಡಿದಾಗ ಜನರು ಕಪ್ಪಗೆ ಇದ್ದಾರೆ ಎಂದು ಮೂದಲಿಸಿದರು.

Read More