” ಬೆಂಗಳೂರು ಫ್ಯಾಷನ್ ಸಾಗದಲ್ಲಿ ಮಿಂಚಿದ ಸೆಲೆಬ್ರಿಟಿ ಶೋಸ್ಟಾಪರ್‌ಗಳು “

ನಗರದ ಖಾಸಗಿ ಹೋಟೆಲೊಂದರಲ್ಲಿ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಜಿನ್ಸಿ ಸತೀಶ್ ರವರ ನೇತೃತ್ವದಲ್ಲಿ  ಫ್ಯಾಷನ್ ಫ್ಲೇಮ್ಸ್ ವತಿಯಿಂದ  ಬೆಂಗಳೂರು ಫ್ಯಾಷನ್ ಸಾಗ ಅದ್ಧೂರಿಯಾಗಿ ನಡೆಯಿತು. 7ಜನ ವಿಶೇಷ ಡಿಸೈನರ್ ಸಂಗ್ರಹದೊಂದಿಗೆ , ನಮ್ಮ ಗ್ರ್ಯಾಂಡ್ ಫಿನಾಲೆ ಡಿಸೈನರ್ ಜೀನ್ ಡಿಸೈನ್ಸ್ ಜೊತೆಗೆ 34 ಮಹಿಳಾ ರೂಪದರ್ಶಿಗಳು ಮತ್ತು 8 ಪುರುಷ ರೂಪದರ್ಶಿಗಳು ಭಾಗವಹಿಸಿ ವೇಷಭೂಷಣಗಳನ್ನು ಪ್ರದರ್ಶಿಸಿದವು. ಶೋ ಸ್ಟಾಪರ್ ಆಗಿ ಮಿಂಚಿದ ಚಂದನವನದ ತಾರೆ “ಅನು ಅಯ್ಯಪ್ಪ” ಕರ್ವ , ಕಥಾವಿಚಿತ್ರ ಚಿತ್ರಗಳ ಮುಖಾಂತರ

Read More

ಕನ್ನಡಿಗ ‘ಮಂಜು ನಂದನ್’ ನಿರ್ದೇಶನದ “ಮೇರಿ ಪಡೋಸನ್‌ ” ಹಿಂದಿ ವೆಬ್‌ಸೀರೀಸ್‌ ಗೆ ಎಲ್ಲೆಡೆ ಪ್ರಶಂಸೆಯ ಸುರಿಮಳೆ…!!!

” ಕನ್ನಡದ ಯುವ ನಿರ್ದೇಶಕ ‘ಮಂಜುನಂದನ್ ‘ ಬಾಲಿವುಡ್‌ನಲ್ಲಿ ಯಶಸ್ವಿ ಯಾಗಿ ಎಂಟ್ರಿಕೊಟ್ಟು, ಸೈ ಎನಿಸಿಕೊಂಡಿದ್ದಾರೆ.” ಧಾರಾವಾಡ ಮೂಲದ ಮಂಜು ನಂದನ್‌ ಈಗ ಬಾಲಿವುಡ್‌ನಲ್ಲಿ ವೆಬ್‌ಸೀರೀಸ್‌ ಮಾಡಿದ್ದಾರೆ. ಆ ಹೊಸ ವೆಬ್‌ಸೀರೀಸ್‌ಗೆ “ಮೇರಿ ಪಡೋಸನ್”‌ ಎಂದು ನಾಮಕರಣ ಮಾಡಲಾಗಿದೆ. ಸದ್ಯಕ್ಕೆ ಈ ವೆಬ್‌ ಸೀರೀಸ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ತಮ್ಮ ನಿರ್ದೇಶನದ ಹಿಂದಿ ವೆಬ್‌ಸೀರೀಸ್‌ ಕುರಿತು “ನಮ್ಮ ಸೂಪರ್ ಸ್ಟಾರ್ಸ್ಸ್” ಜೊತೆ ಮಾತನಾಡಿದ ಮಂಜುನಂದನ್, “ಇದೊಂದು ಲವ್‌ ಕಾಮಿಡಿ ಜಾನರ್.‌

Read More

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ‘ಸೂಪರ್ ಸ್ಟಾರ್’ “ನಿರಂಜನ್ ಸುಧೀಂದ್ರ”.

ಉದಯೋನ್ಮುಖ ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ರವರ ನಿರ್ದೇಶನದ ‘ಸೂಪರ್ ಸ್ಟಾರ್’ ಚಿತ್ರದ ಪೋಸ್ಟರ್ ಸಾಕಷ್ಟು ಸದ್ದು ಮಾಡಿದ್ದ ನಂತರ ‘ಸೂಪರ್​ಸ್ಟಾರ್’ ಚಿತ್ರದ ಅದ್ಧೂರಿ ಮುಹೂರ್ತ ಅಂಜನಾನಗರದಲ್ಲಿನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ರಮೇಶ್ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಮೈಲಾರಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಆರ್‌ವಿಬಿ ಸಿನೆಮಾಸ್ ಎಂಬ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ಅವರ ತಾಯಿ ಶ್ರೀಮತಿ ಗೌರಮ್ಮ ಮುನಿಯಪ್ಪ ಕ್ಲಾಪ್ ಮಾಡಿದರೆ,

Read More

ಭಜರಂಗಿ “ಲೋಕಿ” ಸ್ಟೈಲಿಶ್ ಫೋಟೋಶೂಟ್…!!!!!

ಒಳ್ಳೆ ಹೈಟ್, ಒಳ್ಳೆ ಫಿಸಿಕ್ ಯಾವ ಹೀರೋಗೂ ಕಮ್ಮಿ ಇಲ್ಲ ಎಂಬ ಸ್ಟೈಲ್ ಹೊಂದಿರುವ ಲೋಕಿ (ಭಜರಂಗಿ ಲೋಕಿ) ಈ ಫೋಟೋಶೂಟ್ ಸಖತ್ ಸದ್ದು ಮಾಡ್ತಿದೆ. ‘ಭಜರಂಗಿ’ ಸಿನಿಮಾ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಜಾಗ ಪಡೆದು ಪ್ರತಿಭಾನ್ವಿತ ನಟ ಸೌರವ್ ಲೋಕೇಶ್ (ಭಜರಂಗಿ ಲೋಕಿ) ಈಗ ಸ್ಟೈಲಿಶ್ ಫೋಟೋಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಈಗಿನ ಟ್ರೆಂಡ್ನಲ್ಲಿ ಹೀರೋ ಮತ್ತು ಹೀರೋಯಿನ್ ಗಳು ಫೋಟೋಶೂಟ್ ಮಾಡಿಸುವುದು ಸಹಜ. ಆದರೆ, ವಿಲನ್ ಪಾತ್ರದಲ್ಲಿ ಗುರುತಿಸಿಕೊಂಡಿರುವ ನಟ ಫೋಟೋಶೂಟ್ ಮೊರೆಹೋಗುವುದು ಅಪರೂಪ.

Read More

ಅಜ್ಜಿಯ ಕನಸನ್ನು ನನಸಾಗಿಸ ಹೊರಟ ಪುಟ್ಟ ಪ್ರತಿಭೆ “ಸೃಷ್ಠಿ . ಎಸ್ “…..!!!!

ಅಜ್ಜ ಪಿ.ಏಕನಂದ ಹಾಗೂ ಅಜ್ಜಿ ಶೀಲಾದೇವಿಯ ಮುದ್ದಿನ ಮೊಮ್ಮಗಳು ಸೃಷ್ಠಿ ಎಸ್. ಸೃಷ್ಠಿ ತನ್ನ ತಾಯಿಗಿಂತ ಹೆಚ್ಚಾಗಿ ತನ್ನ ಸಾಕಷ್ಟು ಸಮಯವನ್ನು ಅಜ್ಜ ಅಜ್ಜಿಯ ಜೊತೆ ಕಳೆಯುತ್ತಾಳೆ ಎನ್ನುತ್ತಾರೆ ಸೃಷ್ಠಿಯ ತಾಯಿ ಸಂಗೀತಾ ಎಸ್. ಮಾಡೆಲಿಂಗ್, ಜಾಹೀರಾತು, ರ್ಯಾಂಪ್ ವಾಕ್ ಹೀಗೆ ಸಾಕಷ್ಟು ಸ್ಟೇಜ್ ಶೋಗಳಲ್ಲಿ ಭಾಗವಹಿಸಿ, ತನ್ನ ಐದನೇ ವಯಸ್ಸಿನಲ್ಲಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾಳೆ. ಪ್ರಿಯಾಂಕ ಉಪೇಂದ್ರ ರವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಸಿನಿಮಾಕ್ಕೂ ಸೃಷ್ಠಿ ಸಹಿ ಮಾಡಿದ್ದಾರೆ. ಲೀಟಲ್ ಮಿಲೇನಿಯಂ ಸ್ಕೂಲ್ ನಲ್ಲಿ

Read More

ದೂರದ ಇಂಗ್ಲೆಂಡಿನಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋ ಗಳನ್ನು ನಡೆಸುತ್ತಿದೆ, “ವಿಷನ್‌ನೈರ್ ಎಂಟರ್ ಟೈನ್ ಮೆಂಟ್ “..!

ಶ್ಯಾಶ್ ಕಿರಣ್ ಮೂಲತಃ ಬೆಂಗಳೂರಿನವರು. ಈಗ ಇಂಗ್ಲೆಂಡಿನಲ್ಲಿ ಬದುಕು ಮೂಡಿಸಿಕೊಂಡರೂನು ತಂದೆ ತಾಯಿ ನೆಲೆಸಿರುವುದು ಬೆಂಗಳೂರಿನಲ್ಲಿಯೇ. ಒಬ್ಬ ಕ್ರಿಕೆಟ್ ಆಟಗಾರರಾಗಿ ರಣಜಿ ಸ್ಥಾನಕ್ಕೆ ಪೈಪೋಟಿ ನೀಡುವ ಹಂತದವರೆಗೂ ಹೋಗಿದ್ದ ಶ್ಯಾಶ್ ನಂತರ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಕೆಲಸದಿಂದಾಗಿ ಇಂಗ್ಲೆಂಡ್ ನಲ್ಲಿ ನೆಲೆಸಿದರು. ಅಲ್ಲಿ ಕನ್ನಡ ಭಾಷೆಯ ಚಿತ್ರಗಳು ಬರುತ್ತಿದ್ದರೂ ಅದೊಂದು ಕಮ್ಯೂನಿಟಿ ಹಂತದಲ್ಲಿತ್ತು. ಕನ್ನಡ ಸಂಘದವರು ಅಥವಾ ಪುಟ್ಟ ಸಂಘಟನೆಗಳು ಚಿತ್ರದ ಶೋ ಏರ್ಪಡಿಸುತ್ತಿದ್ದರು. ಆದರೆ ಬೇರೆ ಭಾಷೆಯ ಚಿತ್ರಗಳು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿ ವಾರದ

Read More

ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ಹಾಗೂ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಹೋಗಿ ನೃತ್ಯ ಪ್ರದರ್ಶನ ಮೂಲಕ ಜನರನ್ನು ಜಾಗೃತಿಗೊಳಿಸುತ್ತಿ ದ್ದಾರೆ, ಕಲ್ಪಾಶ್ರೀ ಸಂಸ್ಥೆ ಮುಖ್ಯಸ್ಥ, “ಸುಜೇಂದ್ರ ಬಾಬು”

ಸುಜೇಂದ್ರ ಬಾಬು, ತಾವು ಪಡೆದ ನಾಟ್ಯಶಾಸ್ತ್ರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು ಎಂಬ ಸದುದ್ದೇಶದಿಂದ ಕಲ್ಪಾಶ್ರೀ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅವರು ಒಬ್ಬ ಅದ್ಭುತ ನೃತ್ಯಗಾರ. ಮಾನವೀಯತೆ ಇರುವ ಕಲಾವಿದ. ಚನ್ನಪಟ್ಟಣದಲ್ಲಿ ಕಲ್ಪಾಶ್ರೀ ಸಂಸ್ಥೆಯನ್ನು ಮೂವತ್ತು ವರ್ಷಗಳ ಹಿಂದೆ ಆರಂಭಿಸಿ, ಬೆಂಗಳೂರು ಹೈದ್ರಾಬಾದ್‌ನಲ್ಲಿ ಸಬ್ ಬ್ರಾಂಚ್‌ಗಳು ಇವೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ನೃತ್ಯ, ಸಂಗೀತ ತರಬೇತಿ ಪಡೆದುಕೊಂಡಿದ್ದಾರೆ. ಕಲ್ಪಾಶ್ರೀ ಸಂಸ್ಥೆ ವತಿಯಿಂದ ಚನ್ನಪಟ್ಟಣದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಹೋಗಿ ನೃತ್ಯ

Read More

“ಭರತನಾಟ್ಯ” ಎಂಬ ದೈವ ಸ್ವರೂಪದ ಕಲೆಯನ್ನು ಮೈಗೂಡಿಸಿಕೊಂಡು ಒಂದೊಂದೇ ಮೆಟ್ಟಿಲು ಹತ್ತಿ ಸಾಧನೆಗಳ ಶಿಖರ ಏರಿದವರು ಕರುನಾಡಿನ ‘ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ’ .!!

ಪುರಾಣ ಕಥೆಗಳನ್ನು ನೃತ್ಯದ ಮೂಲಕ ಸಾದರ ಪಡಿಸುವ ಕಲೆಯೇ ಭರತನಾಟ್ಯ. ಇದು ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇಂದ್ರನ ಮನವಿ ಮೇರೆಗೆ ಬ್ರಹ್ಮ ಇದನ್ನು ಐದನೇ ವೇದವಾಗಿ ಸೃಷ್ಟಿ ಮಾಡ್ತಾನೆ. ಮೊದಲ ಬಾರಿಗೆ ಭರತಮುನಿ ನೃತ್ಯ ಪ್ರದರ್ಶನ ನೀಡುತ್ತಾನೆ. ಬ್ರಹ್ಮನ ನೂರು ಗಂಡು ಮಕ್ಕಳಿಂದ ನಾಟ್ಯ ಬೆಳೆಯುತ್ತಾ ಬಂದಿದೆ ಎಂಬ ಪೌರಾಣಿಕೆ ಹಿನ್ನೆಲೆ ಭರತನಾಟ್ಯಕ್ಕಿದೆ. ಭರತನಾಟ್ಯ ಕಲೆ ಉಳಿದೆಲ್ಲಾ ನೃತ್ಯ ಕಲೆಗಳಿಗೊಂದು ಆದರ್ಶ. ಇಂತಹ ಒಂದು ದೈವಿ ಸ್ವರೂಪವಾದ ನೃತ್ಯ ಕಲೆಯನ್ನು ಮೈಗೂಡಿಸಿಕೊಂಡವರು ಡಾ.

Read More

“ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಶಹನಾಯ್ ನುಡಿಸಿದ್ದು ನಾನೋ ಅವರೋ ಗೊತ್ತಾಗ್ತಾಯಿಲ್ಲ ಅಂದರು, “ಬಿಸ್ಮಿಲ್ಲಾಖಾನ್ “

ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ, ಅವಳ ಮೇಲೆ ಊರಿನ ಸಾಹಿಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ದೇವಾಲಯದಲ್ಲಿ ಮಂಗಳ ಕಾರ್ಯಗಳಲ್ಲಿ ಸನಾದಿ ನುಡಿಸುವದು ಅವನ ಪ್ರೀತಿಯ ಕೆಲಸ, ಈ ಕಾರಣದಿಂದಲೇ ಊರ ತುಂಬ ಆತ ಸನಾದಿ ಅಪ್ಪಣ್ಣ ಎಂದೇ ಹೆಸರುವಾಸಿಯಾಗಿರುತ್ತಾನೆ. ಅವನ ಸನಾದಿಯ ನೀನಾದಕ್ಕೆ ತಲೆದೂಗದವರೇ ಇರುವದಿಲ್ಲ. ಹೀಗಿದ್ದಾಗಲೇ ಅಪ್ಪಣ್ಣನ ಸನಾದಿಯ ನೀನಾದದ ಜೊತೆಯಲ್ಲಿ ನೃತ್ಯ ಮಾಡಬೇಕು ಎಂಬ ಹಿರಿಯಾಸೆ ಬಸಂತಿಗೆ ಬರುತ್ತದೆ. ಆಕೆ ಅದನ್ನೇ

Read More