‘ಆನೆಯ ಜೀವನ ಮುಖ್ಯ’ ಎಂಬ ಕಥಾಹಂದರ ವಿರುವ ಅದ್ಭುತ ಚಿತ್ರ “ಅಪ್ಪು”

Share

ಅಪ್ಪು ಸಿರೀಸ್ ಪ್ರೊಡಕ್ಷನ್ಸ್ ನ ಅನಿಮೇಟೆಡ್ “ ಅಪ್ಪು” ಚಿತ್ರ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಪ್ರಿಲ್ 19ರಂದು ಭಾರತದಾದ್ಯಂತ ಸಿನೆಪೊಲಿಸ್ ಇಂಡಿಯಾ ಮತ್ತು UFO ಮೂಲಕ ಅದ್ದೂರಿ ಬಿಡುಗಡೆಯಾಗುತ್ತಿದೆ.

ಪರಿಸರ ಸಂರಕ್ಷಣೆಯ ಬಗ್ಗೆ ಸಂದೇಶ ನೀಡುವ “ಅಪ್ಪು” ಚಿತ್ರ

ಆನೆ ಜೀವನ ಮುಖ್ಯ ಕುರಿತ ಅನಿಮೇಶನ್ ಚಿತ್ರ “ಅಪ್ಪು” ಹೆಸರಿನ ಮರಿಯಾನೆಯ ಕಥೆಯನ್ನು ಚಿತ್ರ ಹೊಂದಿದೆ. ಬೇಟೆಗಾರರು ಅಪ್ಪುವಿನ ತಾಯಿಯನ್ನು ಕೊಂದು, ಅಪ್ಪನನ್ನು ತಮ್ಮ ಜೊತೆಗೆ ಕರೆದೊಯ್ಯುತ್ತಾರೆ. ತನ್ನ ತಂದೆಯನ್ನು ಸೆರೆಯಿಂದ ಬಿಡಿಸಿಕೊಳ್ಳಲು ಅಪ್ಪು ಮಾಡುವ ಪ್ರಯತ್ನಗಳು ಸಿನಿಮಾದಲ್ಲಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಸಂದೇಶ ನೀಡುವ ಅಪ್ಪು ಚಿತ್ರ ಏಪ್ರಿಲ್ 19ರಂದು ತೆರೆಗೆ ಬರಲಿದೆ.

“ಅಪ್ಪು” ಚಿತ್ರದ ಮೊದಲ ಶೋವನ್ನು ಮಾಧ್ಯಮ ಮಿತ್ರರಿಗಾಗಿ ಆಯೋಜನೆ

“ಅಪ್ಪು”ಚಿತ್ರದ ಮೊದಲ ಶೋವನ್ನು ಮಾಧ್ಯಮ ಮಿತ್ರರಿಗಾಗಿ ಆಯೋಜನೆ ಮಾಡಲಾಗಿತ್ತು. ಉತ್ತಮ ಸಂದೇಶವನ್ನು ನೀಡುವ ಈ ಚಿತ್ರವನ್ನು ಹೆತ್ತವರು ತಮ್ಮ ಮಕ್ಕಳಿಗೆ ಎಲ್ಲಾ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದನ್ನು ಕಲಿಸಬೇಕು ಎನ್ನುವ ಚಿತ್ರ ತಂಡದ ಕಳಕಳಿಯನ್ನು ಮಾಧ್ಯಮ ಮಿತ್ರರು ಮೆಚ್ಚಿದರು.

ಆನೆಗಳ ಬೇಟೆ ನಮ್ಮ ಪರಿಸರದ ಮೇಲೆ ಕೆಟ್ಟ ಪರಿಣಾಮ – ನಿರ್ಮಾಪಕ ಸೂರಜ್ ರಹೇಜ

ಆನೆಗಳ ಬೇಟೆ ನಮ್ಮ ಪರಿಸರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ಚಿತ್ರದ ಮೂಲಕ ಆನೆ ಬೇಟೆ ಮಾಡದಂತೆ ಜಾಗೃತಿ ಮೂಡಿಸುವ ಯತ್ನ ಮಾಡಲಾಗುತ್ತಿದೆ ಎಂದು ಅಪ್ಪು ಸರಣಿಯ ನಿರ್ಮಾಪಕ ಸಂಜಯ್ ರಹೇಜ ಅವರು ಹೇಳಿದ್ದಾರೆ.

ಅಪ್ಪು ಹಾಗೂ ಟೈಗರ್ ಪಾತ್ರಗಳು ಈಗಾಗಲೇ ಮಕ್ಕಳ ಮನಸ್ಸನ್ನು ಗೆದ್ದಿದೆ.

3ಡಿ ಅನಿಮೇಷನ್ ಚಿತ್ರ ಏಪ್ರಿಲ್ 19 ರಂದು ದೇಶದಾದ್ಯಂತ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ತೆರೆಗೆ ಬರಲಿದೆ. ಅಪ್ಪು ಹಾಗೂ ಟೈಗರ್ ಪಾತ್ರಗಳು ಈಗಾಗಲೇ ಮಕ್ಕಳ ಮನಸ್ಸನ್ನು ಗೆದ್ದಿದೆ. ಅಪ್ಪು ಚಿತ್ರವನ್ನು ಪ್ರಸೋಂಜಿತ್ ಗಂಗೂಲಿ, ಅಜಯ್ ವೇಲು ಮತ್ತು ಅರ್ಚಿಸ್ಮನ್ ಕರ್ ಅವರು ನಿರ್ದೇಶನ ಮಾಡಿದ್ದಾರೆ. ಸಂಜಯ್ ರಹೇಜ, ಸೂರಜ್ ರಹೇಜ ಹಾಗೂ ಸುರೇಶ್ ರಹೇಜ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Leave a Comment