ಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ “ಸ್ಟ್ರಾಂಗ್ ವುಮನ್” 2023 ಪ್ರಶಸ್ತಿ ಪ್ರದಾನ

Share

ಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ “ಸ್ಟ್ರಾಂಗ್ ವುಮನ್” ಪ್ರಶಸ್ತಿ ಪ್ರದಾನ ಮಾಡಲಾಯಿತು.

ದುಬೈ ದಿಗ್ಗಜ ಡಾ. ಬು ಅಬ್ದುಲ್ಲಾ, ಡಾ.ರಾಜ್ ಕುಮಾರ್ ರವರ ಮಗಳು ಲಕ್ಷ್ಮೀ ಗೋವಿಂದರಾಜು ಕುಟುಂಬ ಹಾಗೂ KSBC ಸದಸ್ಯರಾದ ಎಲ್ ಶ್ರೀನಿವಾಸಬಾಬು ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

2023ರ ಸಾಲಿನ ವಿಜೇತರಾಗಿ ಪ್ರೊ. ಶಿಲ್ಪಿ ಚೌಧರಿ, ಡಾ.ಜಯಲಕ್ಷ್ಮಿ ಜಿತೇಂದ್ರ, ಮೀನಾಕ್ಷಿ ಕಾರಂತ್, ಖುದುಸಿಯ ನಜೀರ್, ಅನಿಶ್ ಫಾತಿಮಾ, ಹರ್ಷಿನಿ ವೆಂಕಟೇಶ್, ಹಂಸ ವಿ, ಸವಿತಾ ನಾಟ್ಯಾಲಯ, ಸುನೀತಾ ಗೌಡ, ಪ್ರಿಯದರ್ಶಿನಿ ಮುಂಡರಗಿಮಠ, ಪ್ರಕೃತಿ ನಾಗೇಂದ್ರನ್ ಹಾಗೂ ಡಾ ಡಾ.ಪಾವನಾ ಧನ್ಯಕುಮಾರ್ ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

100ಕ್ಕೂ ಹೆಚ್ಚು ಜನರು ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಇವರಲ್ಲಿ 37 ಜನರು ಅಂತಿಮ ಸುತ್ತಿಗೆ ಬಂದಿದ್ದರು. ಇವರಲ್ಲಿ 10 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಹಿಳೆಯರ ಸಾಮಾಜಿಕ ಕೊಡುಗೆ, ಸಾಧನೆಗಳನ್ನು ಗಮನಿಸಿ ಪ್ರಶಸ್ತಿ ನೀಡಲಾಗಿದೆ. ಸ್ಟಾರ್ ಕನ್ನಡ ಫೌಂಡೇಷನ್ ಸಂಸ್ಥೆಯ ಸಂಸ್ಥಾಪಕ ಅಸ್ ಲಮ್ ಸೂಪರ್ ಸ್ಟಾರ್ ರವರ ಕನಸಿನಕೂಸಿಗೆ ಎಲ್ಲೆಡೆ ಮೆಚ್ಚುಗೆ ಪಡೆಯಿತು.

ನೃತ್ಯ ಕಾರ್ಯಕ್ರಮ, ಫ್ಯಾಷನ್ ಶೋ ಕೂಡ ಇದ್ದ ಈ ಕಾರ್ಯಕ್ರಮದಲ್ಲಿ ಅಣ್ಣಾವ್ರ ಕುಟುಂಬ ಕೂಡ ಭಾಗಿಯಾಗಿದ್ದು ವಿಶೇಷ. ಸಾಕಷ್ಟು ಸ್ನೇಹಿತರ ಸಹಕಾರ ಹಾಗೂ ಜಾಹೀರಾತುದಾರರ ಸಹಯೋಗದೊಂದಿಗೆ ಕಾರ್ಯಕ್ರಮ ಅದ್ಭುತ ಯಶಸ್ವಿಗೆ ಸಾಕ್ಷಿಯಾಯಿತು.

ಜ್ಯೂರಿಗಳಾಗಿ ಡಾ ಪದ್ಮಾಕ್ಷಿ ಲೋಕೇಶ್, ಶಿಲ್ಪಾ ಸಿಂಗ್‌, ಬಿಯಾ ಸಂಧು ತನೇಜಾ ಹಾಗೂ ಶಾಂತಾ ರಾಮಸ್ವಾಮಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಸ್ಟ್ರಾಂಗ್ ವುಮೆನ್ ಅವಾಡ್೯್ಸ ಆಯೋಜಕರ ತಂಡದಲ್ಲಿ
ಅಸ್ ಲಮ್ ಸೂಪರ್ ಸ್ಟಾರ್ಸ್, ಶರತ್ ಕೆ ರಾಘವೇಂದ್ರ, ಅಮರ್ ಸಂದೀಪ್ , ರಾಜೇಶ್ವರಿ ಹಾಗೂ ಸುಧಾ ರವರಿದ್ದರು.

Leave a Comment