“ಐ ಡ್ರೀಮ್ ಎಂ.ಬಿ.ಎ.” ಅಕಾಡೆಮಿ ವತಿಯಿಂದ ‘ಯೋಜನಾ ನಿರ್ವಹಣಾ’ ಪ್ರಶಸ್ತಿ
ನಗರದ ಖಾಸಗಿ ಕಾಲೇಜಿನಲ್ಲಿ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿ ವತಿಯಿಂದ ಯೋಜನಾ ನಿರ್ವಹಣಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಪಿ ಶ್ರೀನಿವಾಸ ರಾವ್ , ಡಾ.ಎಸ್ ಎಸ್ ಚಂದ್ರಶೇಖರ್ , ಡಾ. ಪದ್ಮಾಕ್ಷಿ ಲೊಕೇಶ್ , ಹಾಗು ಕೆ.ಎಂ ನಾಗೇಂದ್ರ ಉಪಸ್ಥಿತರಿದ್ದರು.
ಎನ್ .ಇ. ಎಫ್, ವಾಷಿಂಗ್ ಟನ್ ಡಿಸಿಯ ಸಂಸ್ಥಾಪಕ ಡಾ.ಅಪ್ಪು ಕುಟ್ಟಾನ್
ಈ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ ಎನ್ .ಇ. ಎಫ್, ವಾಷಿಂಗ್ ಟನ್ ಡಿಸಿಯ ಸಂಸ್ಥಾಪಕರಾದ ಡಾ.ಅಪ್ಪು ಕುಟ್ಟಾನ್ ಹಾಗು ದಿ ಸ್ಟೇಟ್ ಯೂನಿವರ್ಸಿಟಿ ಯ ನಿರ್ದೇಶಕರಾದ ಆಂಥೋನಿ ಬೆಟ್ರೋಸ್ ಆನ್ ಲೈನ್ ಮುಖಾಂತರ ಮಾಹಿತಿ ಹಂಚಿ ಮ್ಯಾನೇಜ್ ಮೆಂಟ್ ವಿಧ್ಯಾರ್ಥಿಗಳಿಗೆ ಅಭಿನಂದಿಸಿದರು.
ವಿದ್ಯಾರ್ಥಿನಿ ಶ್ರೇಯಾ ಯಾದವ್ “ಅಪ್ಪುಜೀ ಮೆಡಲಿಯನ್ ಆಫ್ ಮೆರಿಟ್ “
ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿನಿ ಶ್ರೇಯಾ ಯಾದವ್ ಅವರು 3.99ಸಿಜಿಪಿಎ ಜೊತೆಗೆ ಅಪ್ಪುಜೀ ಮೆಡಲಿಯನ್ ಆಫ್ ಮೆರಿಟ್ ಪಡೆದಕ್ಕಾಗಿ ಎನ್ .ಇ. ಎಫ್, ವಾಷಿಂಗ್ ಟನ್ ಡಿಸಿಯ ಸಂಸ್ಥಾಪಕರಾದ ಡಾ.ಅಪ್ಪು ಕುಟ್ಟಾನ್ ತುಂಬು ಹೃದಯದಿಂದ ಶ್ಲಾಘಿಸಿದರು. ಅವರಿಗೆ ಎನ್ .ಇ. ಎಫ್, ವತಿಯಿಂದ 90% ವಿಧ್ಯಾರ್ಥಿ ವೇತನ ಕೂಡ ನೀಡಲಾಗಿತ್ತು.
ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿಯ ಸಂಸ್ಥಾಪಕರು
ಈ ಸಮಾರಂಭದ ಪ್ರೋಗ್ರಾಮ್ ನಿರ್ದೇಶಕರಾಗಿ ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿಯ ಹರ್ಷ ಎಸ್ ರಾವ್ ಮತ್ತು ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿಯ ಸಂಸ್ಥಾಪಕರಾದ ಗರಿಮಾ ಬನ್ಸಾಲ್ ರವರ ನೇತೃತ್ವದಲ್ಲಿ ನಡೆಯಿತು.