ಸುದೀಪ್‌ಗೆ ಧನ್ಯವಾದ ಹೇಳಿದ ದರ್ಶನ್
ಹೊಸಪೇಟೆಯಲ್ಲಿ ನಡೆದ ಕಹಿ ಘಟನೆ ಕುರಿತಂತೆ ಕಿಚ್ಚ ಸುದೀಪ್ ಡಿಬಾಸ್‌ಗೆ ಸುದೀರ್ಘ ಪತ್ರ ಬರೆದು ಬೆಂಬಲ ವ್ಯಕ್ತಪಡಿಸಿದ್ದು, ಈ ಸಂಬAಧ ದರ್ಶನ್ ಧನ್ಯವಾದಗಳನ್ನು ಸುದೀಪ್‌ಗೆ ಹೇಳಿದ್ದಾರೆ.
`ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು’ ಎಂದು ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಪ್ರತಿಕ್ರಿಯೆಯಿಂದ ಇಬ್ಬರ ನಟರ ಅಭಿಮಾನಿಗಳು ಖುಷಿಯಾಗಿದ್ದಾರೆ.
ಕಿಚ್ಚ ಸುದೀಪ್ ಹೊಸಪೇಟೆ ಘಟನೆ ಕುರಿತು ಸುದೀರ್ಘ ಪತ್ರ ಬರೆದಿದ್ದರು. ಅಪ್ಪು ಅಭಿಮಾನಿಗಳಿಗೂ ಮತ್ತು ದರ್ಶನ್ ಅಭಿಮಾನಗಳಿಗೂ ಭಿನ್ನಾಭಿಪ್ರಾಯವಿದೆ ಎಂಬುದು ನನಗೆ ಗೊತ್ತು. ಪುನೀತ್ ರಾಜ್‌ಕುಮಾರ್ ಕೂಡ ಈ ರೀತಿ ಘಟನೆಗಳನ್ನು ಇಷ್ಟ ಪಡುತ್ತಿರಲಿಲ್ಲ. ಇದಕ್ಕೆ ಕಾರಣವೆಂದರೆ ಅವರು ಎಲ್ಲರನ್ನೂ ಗೌರವಿಸುತ್ತಿದ್ದರು. ದರ್ಶನ್ ಚಿತ್ರರಂಗಕ್ಕೂ ಮತ್ತು ಕನ್ನಡ ಭಾಷೆಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಘಟನೆಯಿಂದ ನಾನು ವಿಚಲಿತನಾಗಿದ್ದೇನೆ ಎಂದು ಸುದೀಪ್ ಬರೆದುಕೊಂಡಿದ್ದರು.
ಸುದೀಪ್ ಬೆಂಬಲದ ಮಾತುಗಳಿಗೆ ದರ್ಶನ್ ಧನ್ಯವಾದ ತಿಳಿಸಿದ ಹಿನ್ನೆಲೆಯಲ್ಲಿ ಇಬ್ಬರು ವೈಮನಸ್ಸನ್ನು ಮರೆತು ಒಟ್ಟಾಗಿ ಇರುವಂತೆ ಚಿತ್ರನಟ ಜಗ್ಗೇಶ್ ಸಲಹೆ ನೀಡಿದ್ದಾರೆ.