`ಮೇಡ್ ಇನ್ ಬೆಂಗಳೂರು’ನಲ್ಲಿ ಬೆಂಗಳೂರು ಬದುಕಿನ ಅನಾವರಣ

Share

ಬೆಂಗಳೂರಿಗೆ ಕೆಲಸವನ್ನು ಅರಸಿ ನೂರಾರು ಮಂದಿ ಪ್ರತಿದಿನ ನಗರಕ್ಕೆ ಬರುತ್ತಾರೆ. ಅಂತಹವರನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಮಹಾನಗರ ಸಾಕುತ್ತಿದೆ. ಇಂತಹ ಬೆಂಗಳೂರು ನಗರದ ಬಗ್ಗೆ ಮಹತ್ವ ತಿಳಿಸುವ ಸಲುವಾಗಿ ಪ್ರದೀಪ್ ಕೆ. ಶಾಸ್ತಿçಯವರು ‘ಮೇಡ್ ಇನ್ ಬೆಂಗಳೂರು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ಈ ಹಿಂದೆ `ನಿತ್ಯ ಕರ್ಮ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದು, ಅದಕ್ಕೆ ಅಂತಾರಾಷ್ಟಿಯ ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ದೊರೆತಿದೆ.

ಬೆಂಗಳೂರು ನಗರ ಸ್ಟಾರ್ಟಪ್‌ಗಳ ನಗರ, ಯಾವುದೇ ಹೊಸ ತಂತ್ರಜ್ಞಾನ ಬಂದರೂ ಬೆಂಗಳೂರಿನಲ್ಲಿ ಮೊದಲಿಗೆ ಪರಿಚಯವಾಗುತ್ತದೆ. ಒಂದು ಊರಿನ ಬಗ್ಗೆ ಸಿನಿಮಾ ಮಾಡಿದ್ದೇವೆ. ನಮ್ಮ ಬೆಂಗಳೂರಿಗೆ ಎಲ್ಲರನ್ನೂ ಒಗ್ಗೂಡಿಸುವ ಗುಣವಿದೆ. ಇದಕ್ಕೊಂದು ಬ್ರಾಂಡ್ ಇದೆ. ಬೆಂಗಳೂರು ಹೇಗೆ ಎಲ್ಲ ಜನರನ್ನು ಒಗ್ಗೂಡಿಸುತ್ತದೆ ಎಂದು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಪ್ರದೀಪ್ ಹೇಳಿದ್ದಾರೆ.

ಈ ಸಿನಿಮಾದಲ್ಲಿ ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ, ಮಧುಸೂದನ್ ಗೋವಿಂದ್, ಪುನೀತ್ ಮಾಂಜ, ವಂಶೀಧರ ನಟಿಸಿದ್ದಾರೆ. ಬೆಂಗಳೂರನ್ನು ಇಷ್ಟಪಡುವವರು ಈ ಚಿತ್ರವನ್ನು ಇಷ್ಟ ಪಡುತ್ತಾರೆ ಎನ್ನಲಾಗಿದೆ. `ದೊಡ್ಡ ತಾಯಿ ಬೆಂಗಳೂರು’ ಎಂಬ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿದ್ದು, ಬೆಂಗಳೂರನ್ನು ಈ ಹಾಡಿನಲ್ಲಿ ದೊಡ್ಡ ತಾಯಿಯಾಗಿ ಬಿಂಬಿಸಲಾಗಿದೆ.

Leave a Comment