ಬ್ಯಾಚಲರ್ ಪಾರ್ಟಿ ಸೇರಿಕೊಂಡ ಯೋಗಿ?

Share

ರಕ್ಷಿತ್ ಶೆಟ್ಟಿ ನಿರ್ಮಾಣದ ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚಲರ್ ಪಾರ್ಟಿ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮೊದಲು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ದಿಗಂತ್ ಮತ್ತು ಅಚ್ಯುತ್‌ಕುಮಾರ್ ನಟಿಸುತ್ತಾರೆ ಎಂದು ಅನೌನ್ಸ್ ಮಾಡಲಾಗಿತ್ತು. ‘ಕಾಂತಾರ’ ಯಶಸ್ಸಿನ ನಂತರ ಯಾವ ಚಿತ್ರದಲ್ಲಿ ನಟಿಸುತ್ತೇನೆ ಎಂದು ರಿಷಬ್ ಶೆಟ್ಟಿ ಬಹಿರಂಗ ಪಡಿಸಿಲ್ಲ. ಮೂಲಗಳ ಪ್ರಕಾರ ರಿಷಬ್ ಶೆಟ್ಟಿ ಬ್ಯಾಚಲರ್ ಪಾರ್ಟಿ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅವರ ಬದಲಾಗಿ ಯೋಗಿ ನಟಿಸುತ್ತಿದ್ದಾರೆ.

ಈ ಚಿತ್ರದ ಮೂಹೂರ್ತ ‘ಕಾಂತಾರ’ ಚಿತ್ರದ ಮುನ್ನವೇ ನಡೆದಿತ್ತು. ಕೆಲ ದಿನಗಳ ಹಿಂದೆ ದಿಗಂತ್ ಮಾತನಾಡುತ್ತ ‘ರಿಷಬ್ ಬ್ಯಾಚಲರ್ ಪಾರ್ಟಿ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅವರ ಬದಲಾಗಿ ಬೇರೊಬ್ಬ ನಟನನ್ನು ನಿರ್ಮಾಣ ಸಂಸ್ಥೆ ಹುಡುಕುತ್ತಿದೆ ಎಂದು ಹೇಳಿದ್ದರು. ಈ ಬಗ್ಗೆ ಅಭಿಜಿತ್ ಮಹೇಶ್ ಹೇಳುವುದೆಂದರೆ ರಿಷಬ್ ಯಾಕೆ ಚಿತ್ರ ಮಾಡುತ್ತಿಲ್ಲ ಎಂಬುದನ್ನು ಅವರೇ ತಿಳಿಸಬೇಕು.ರಕ್ಷಿತ್ ಶೆಟ್ಟಿ ಇದರ ಬಗ್ಗೆ ತನಗೆ ಏನನ್ನೂ ತಿಳಿಸಿಲ್ಲ. ಬಲ್ಲ ಮೂಲಗಳ ಪ್ರಕಾರ ಯೋಗಿ ಈಗಾಗಲೇ ಈ ಪ್ರಾಜೆಕ್ಟ್ನಲ್ಲಿ ನಟಿಸಲು ಓಕೆ ಮಾಡಿದ್ದಾರೆ.

Leave a Comment