`ಮಂಕುಬಾಯ್ ಫಾಕ್ಸಿರಾಣಿ’ ಟ್ರೇಲರ್ ಬಿಡುಗಡೆ
ಬಿಗ್ ಬಾಸ್೯ರ ವಿನ್ನರ್ ರೂಪೇಶ್ ಶೆಟ್ಟಿ ಹೀರೋ ಆಗಿ ನಟಿಸುತ್ತಿರುವ ಮಂಕುಬಾಯ್ ಫಾಕ್ಸಿರಾಣಿ’ ಸಂಕ್ರಾAತಿ ವೇಳೆಗೆ ಬಿಡುಗಡೆ ಆಗಲಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ರೂಪೇಶ್ ಶೆಟ್ಟಿ ಈ ಚಿತ್ರದಲ್ಲಿ ಯಕ್ಷಗಾನ ಕಲಾವಿದನಾಗಿ ಪಾತ್ರ ವಹಿಸಿದ್ದಾನೆ. ಈತನಿಗೆ
ಬ್ರಹ್ಮಗಂಟು’ ಧಾರವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ಮೊದಲ ಬಾರಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಕನ್ನಡದಲ್ಲಿ ಇಲ್ಲಿಯವರೆಗೆ ನಾಲ್ಕು ಸಿನಿಮಾಗಳಲ್ಲಿ ಬೇರೆಯವರೊಂದಿಗೆ ಅಭಿನಯಿಸಿದ್ದೇನೆ. ಈ ಸಿನಿಮಾದಲ್ಲಿ ತಾನು ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದೇನೆ. ಯಕ್ಷಗಾನದಲ್ಲಿ ಸಿಂಹದ ಪಾತ್ರ ಹಾಕುವ ಕಲಾವಿದನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಲವ್ ಮಾಡಬೇಕೆಂದು ಹೊರಡುವವನ ಜೀವನದಲ್ಲಿ ಏನೇನು ನಡೆಯುತ್ತದೆ ಎಂಬುದರ ಸುತ್ತ ಸಿನಿಮಾ ಕಥೆ ಸಾಗುತ್ತದೆ. ಒಂದಷ್ಟು ಕಾಮಿಡಿ, ಎಮೋಶನ್ಸ್ ಜೊತೆಗಿಟ್ಟುಕೊಂಡು
ಮಂಕುಬಾಯ್ ಫಾಕ್ಸಿರಾಣಿ’ ಬರುತ್ತಿದೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.ಸುಮಾರು ಮೂರು ವರ್ಷದ ಹಿಂದೆ ಅಭಿನಯಿಸಿದ ಈ ಪಾತ್ರ ತುಂಬಾ ಖುಷಿಕೊಟ್ಟಿದೆ. ಸ್ಥೂಲಕಾಯದ ಹುಡುಗಿಯೊಬ್ಬಳು ಹೇಗೆಲ್ಲ ಅಪಹಾಸ್ಯಕ್ಕೆ ಈಡಾಗುತ್ತಾಳೆ. ಅವರ ಜೀವನ ಹೇಗಿರುತ್ತದೆ ಎಂಬುದನ್ನು ನನ್ನ ಪಾತ್ರ ತೋರಿಸುತ್ತದೆ ಎಂಬುದು ನಾಯಕಿ ಗೀತಾ ಮಾತು. ಉಳಿದಂತೆ ಪಂಚಮಿ, ಅರ್ಜುನ್, ಪ್ರಕಾಶ್ ತುಮ್ಮಿನಾಡ್, ಸ್ವರಾಜ್ ಶೆಟ್ಟಿ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಂಗಳೂರು ಮೂಲದ ಗಗನ್.ಎಂ.
ಮಂಕುಬಾಯ್ ಫಾಕ್ಸಿರಾಣಿ ’ ಸಿನಿಮಾದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜೈಶಾನ್ ಕ್ರಾಸ್ತಾ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಎ.ಕೆ.ಷಹಜಹಾನ್ ಛಾಯಾಗ್ರಹಣ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನವಿದೆ.