ಸುನಿ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್

Share

ನಟ ವಿನಯ್ ರಾಜ್‌ಕುಮಾರ್ ಸದ್ಯಕ್ಕೆ ಪೆಪೆ’ ಮಾಸ್ ಸಿನಿಮಾ ಚಿತ್ರೀಕರಣ ಮುಗಿಸಿ ಇದೀಗ ಸ್ಯಾಂಡಲ್‌ವುಡ್ ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಒಪ್ಪಿಕೊಂಡಿದ್ದಾರೆ.ದೊಡ್ಮನೆಯವರ ಜತೆಗೆ ಚಿತ್ರ ಮಾಡಬೇಕು ಎಂಬುದು ಬಹಳ ದಿನಗಳ ಆಸೆ. ಅದೀಗ ಈಡೇರುತ್ತಿದೆ. ತಾನು ಚಿಕ್ಕ ವಯಸ್ಸಿನಿಂದಲೂ ಶಿವರಾಜ್‌ಕುಮಾರ್ ಅಭಿಮಾನಿ. ಅವರ ಜತೆಗೆ `ಮನಮೋಹಕ’ ಸಿನಿಮಾ ಅನೌನ್ಸ್ ಆಗಿತ್ತು. ಅದ್ಯಾಕೋ ಆಗಲಿಲ್ಲ. ಈಗ ವಿನಯ್‌ರಾಜ್‌ಕುಮಾರ್ ಜತೆಗೆ ಒಂದೊಳ್ಳೆಯ ಸಿನಿಮಾ ಮೂಲಕ ಬರುತ್ತಿದ್ದೇನೆ. ಇದೊಂದು ಸಂಪೂರ್ಣ ಮ್ಯೂಸಿಕಲ್ ಲವ್‌ಸ್ಟೋರಿ. ಮೈಸೂರು ರಮೇಶ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ ಎಂದು ಸುನಿ ಹೇಳಿದ್ದಾರೆ.

ಒಬ್ಬ ವ್ಯಕ್ತಿಯ ಜರ್ನಿ ಇದು, ನನ್ನ ಶೈಲಿಯ ಹಾಸ್ಯ, ಫನ್ ಎಲ್ಲವೂ ಈ ಚಿತ್ರದಲ್ಲಿಯೂ ಇರುತ್ತದೆ. ಇದೊಂದು ಕ್ಲಾಸಿಕಲ್ ಮೇಕಿಂಗ್ ಸಿನಿಮಾವಾಗುತ್ತದೆ. ವಿನಯ್ ಕಥೆ ಕೇಳಿ ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಫೆಬ್ರವರಿಗೆ ಚಿತ್ರೀಕರಣ ಆರಂಭಿಸುವ ಯೋಜನೆ ಇದೆ. ಆದರೆ ಇದಕ್ಕಾಗಿ ದಿನ ನಿಗದಿಯಾಗಿಲ್ಲ. ನಾಯಕಿಯ ಆಯ್ಕೆಯ ನಂತರ ಚಿತ್ರೀಕರಣ ಆರಂಭಿಸುತ್ತೇವೆ ಎಂದು ಸುನಿ ತಿಳಿಸಿದ್ದಾರೆ. ವಿನಯ್ ರಾಜ್‌ಕುಮಾರ್ಪೆಪೆ ’ ಸಿನಿಮಾಗಾಗಿ ಸಖತ್ ರಗಡ್ ಲುಕ್‌ನಲ್ಲಿದ್ದಾರೆ. ಈಗ ಸುನಿ ಚಿತ್ರಕ್ಕೆ ಅವರು ಮಾಡರ್ನ್ ಲುಕ್‌ನಲ್ಲಿ ಸಖತ್ ಸ್ಟೆöÊಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರವು ಮ್ಯೂಸಿಕಲ್ ಲವ್ ಸ್ಟೋರಿಯಾದ ಕಾರಣ ಸಂಗೀತ ನಿರ್ದೇಶಕ ವೀರ ಸಮರ್ಥ್ ಹೊಸ ರೀತಿಯ ಟ್ಯೂನ್‌ಗಳನ್ನು ಕಂಪೋಸ್ ಮಾಡುತ್ತಿದ್ದಾರೆ. `ಸೈಕೋ’ ಸಿನಿಮಾದ ಸಿನಿಮಾಟೋಗ್ರಫಿ ಮಾಡಿದ್ದ ಸಭಾ ಈ ಚಿತ್ರದ ಕ್ಯಾಮೆರಾಮನ್ ಆಗಿದ್ದಾರೆ.

Leave a Comment