Namma Superstars Cinema,Sandalwood `ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ ಮಿಲನಾ ನಾಗರಾಜ್ ನಾಯಕಿ

`ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ ಮಿಲನಾ ನಾಗರಾಜ್ ನಾಯಕಿ



Share

ಅಭಿಷೇಕ್ ಶೆಟ್ಟಿ ನಿರ್ದೇಶಿಸುತ್ತಿರುವ ಆರಾಮ್ ಅರವಿಂದಸ್ವಾಮಿ ಚಿತ್ರದ ನಾಯಕಿಯಾಗಿ ಮಿಲನಾ ನಾಗರಾಜ್ ಪಾತ್ರ ವಹಿಸುತ್ತಿದ್ದಾರೆ. ಈ ಚಿತ್ರದ ನಾಯಕನಾಗಿ ಅನೀಶ್ ತೇಜೇಶ್ವರ್ ಕಾಣಿಸಿಕೊಳ್ಳುತ್ತಿದ್ದಾರೆ. ನಮ್ ಗಣಿ ಬಿಕಾಂ ಪಾಸ್’ ಮತ್ತುಗಜಾನನ ಗ್ಯಾಂಗ್’ ಸಿನಿಮಾಗಳ ಮೂಲಕ ಅಭಿಷೇಕ್ ಶೆಟ್ಟಿ ಗಮನ ಸೆಳೆದಿದ್ದರು. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಅನೀಶ್‌ಗೆ ವಿಭಿನ್ನ ಪಾತ್ರ ದೊರೆತಿದ್ದು, ಮಿಲನಾ ನಾಗರಾಜ್ ಕೂಡ ಪಾತ್ರದ ಬಗ್ಗೆ ಎಕ್ಸೆöÊಟ್ ಆಗಿದ್ದಾರೆ.

ಆರಾಮ್ ಅನಂದಸ್ವಾಮಿ ಚಿತ್ರದಲ್ಲಿ ಮಲಯಾಳಿ ಹುಡಗಿಯಾಗಿ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ರೀತಿಯ ಪಾತ್ರವನ್ನು ಮೊದಲ ಬಾರಿ ಅಭಿನಯಿಸುತ್ತಿದ್ದು, ಅನೀಶ್ ಜತೆಗೆ ಹೊಸ ಕಾಂಬಿನೇಶನ್ ಎಂದು ಮಿಲನಾ ನಾಗರಾಜ್ ಹೇಳಿದ್ದಾರೆ.
ಮದುವೆಯಾದ ಮೇಲೆ ನಾನು ಏಳು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರಲ್ಲೂ ಬಹಳ ವಿಭಿನ್ನವಾದ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಲವ್ ಬರ್ಡ್ಸ್’ ಫಾರ್ ರಿಜಿಸ್ಟೆçÃಶನ್’ ಚಿತ್ರಗಳಲ್ಲಿ ಹೊಸ ರೀತಿಯ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಜನರು ಮೆಚ್ಚುವಂತಹ ಪಾತ್ರಗಳಲ್ಲಿ ಮಾತ್ರ ಅಭಿನಯಿಸುತ್ತೇನೆ ಎಂದು ಮಿಲನಾ ನಾಗರಾಜ್ ತಿಳಿಸಿದ್ದಾರೆ.
ಮಿಲನಾ ಅವರು ಈ ಹಿಂದೆ ನಿರ್ವಹಿಸದೇ ಇರುವಂತಹ ಪಾತ್ರವಿದು, ಎರಡು ಲುಕ್‌ನಲ್ಲಿರಲ್ಲಿದ್ದಾರಂತೆ. ನನ್ನ ಪ್ರಕಾರ ಈ ಪಾತ್ರ ಅವರಿಗೆ ಕಂಪ್ಲೇಟ್ ಚೇಂಜ್ ಓವರ್ ನೀಡಲಿದೆ ಎಂದು ನಿರ್ದೇಶಕ ಅಭಿಷೇಕ್ ಶೆಟ್ಟಿ ಹೇಳಿದ್ದಾರೆ.

Leave a Comment