ಯಶ್ ನಟನೆಯ ಮುಂದಿನ ಚಿತ್ರದ ನಿರ್ಮಾಪಕರು ಫಿಕ್ಸ್?

Share

ರಾಕಿಂಗ್ ಸ್ಟಾರ್ ಯಶ್ ತನ್ನ ಹುಟ್ಟುಹಬ್ಬದ(ಜ.೮) ದಿನದಂದು ಮುಂದಿನ ಚಿತ್ರದ ಬಗ್ಗೆ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಗಳು ಹೆಚ್ಚಿದ್ದವು. ಆದರೆ, ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯಶ್ ಆ ರೀತಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಸದ್ಯ ಖಚಿತ ಮೂಲಗಳ ಪ್ರಕಾರ, ಯಶ್ ಅವರ ೧೯ನೇ ಸಿನಿಮಾದ ನಿರ್ಮಾಪಕರು ಯಾರೆಂದು ಗೊತ್ತಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಯಶ್ ಹೊಸ ಸಿನಿಮಾ ನಿರ್ಮಾಣ ಆಗಲಿದೆಯಂತೆ.

೪೦೦ಕೋಟಿ ರೂ. ಬಜೆಟ್ ಸಿನಿಮಾ: ಕೆವಿಎನ್ ಪ್ರೊಡಕ್ಷನ್ಸ್ ಕೋಣಂಕಿ ವೆಂಕಟ್‌ನಾರಾಯಣ್ ಅವರು ಯಶ್ ಅವರ ಸಿನಿಮಾವನ್ನು ೪೦೦ ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಅಂದ ಹಾಗೆ, ಹಲವು ದಿನಗಳಿಂದ ಯಶ್ ಮತ್ತು ಕೆವಿಎನ್ ಪ್ರೊಡಕ್ಸನ್ಸ್ನ ವೆಂಕಟ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ, ಅಂದೇ ಇಬ್ಬರು ಒಟ್ಟಿಗೆ ಸಿನಿಮಾ ಮಾಡಬಹುದಾ ಎಂಬ ಮಾತು ಕೇಳಿ ಬಂದಿತ್ತು. ಅದು ನಿಜವಾಗುವ ಲಕ್ಷಣ ಕಾಣಿಸುತ್ತಿದೆ. ಒಟ್ಟಿನಲ್ಲಿ ೩೭ನೇ ಹುಟ್ಟುಹಬ್ಬ ಆಚರಿಸಿಕೊಂಡ ಯಶ್‌ನಿಂದ ಇಂಥದೊAದು ಸುದ್ದಿ ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.

ಮತ್ತೊಂದು ಮಾಹಿತಿಯ ಪ್ರಕಾರ ತಮಿಳು ನಿರ್ದೇಶಕರ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ ಎಂಬ ಸುದ್ದಿಯು ಹೊರಬಿದ್ದಿದೆ. ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯಶ್ ಅಭಿಮಾನಿಗಳು ನಿರಾಶೆರಾಗದಂತೆ ಪ್ರತ್ಯೇಕವಾದ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊAಡಿದ್ದರು.

Leave a Comment