`ಲವ್‌ಬರ್ಡ್ಸ್’ನಲ್ಲಿ ಮತ್ತೊಮ್ಮೆ ಜೋಡಿಯಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್

Share

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮತ್ತೊಮ್ಮೆ ಜೋಡಿಯಾಗಿ ಲವ್ ಬಡ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಈ ಸಿನಿಮಾದ ಮಿಲನಾ ನಾಗರಾಜ್ ಲುಕ್ ರಿವೀಲ್ ಆಗಿದೆ. ಮಿಲನಾ ಈ ಚಿತ್ರದಲ್ಲಿ ಫ್ಯಾಷನ್ ಡಿಸೈನರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಈ ಜೋಡಿ ‘ಲವ್‌ಮಾಕ್‌ಟೇಲ್’ ಲವ್‌ಮಾಕ್‌ಟೇಲ್-೨’ ಮತ್ತು ‘ಮಿ. ಬ್ಯಾಚಲರ್’ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.

ಲವ್ ಬರ್ಡ್ಸ್ ಸಿನಿಮಾದಲ್ಲಿ ಗಂಡ ಹೆಂಡತಿ ಸಂಬAಧದ ಬಗೆಗಿನ ಕಥೆ ಇದೆ. ಮದುವೆಯನ್ನು ಮತ್ತಷ್ಟು ಸುಂದರಗೊಳಿಸುವುದು ಹೇಗೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮಿಲನಾ ನಾಗರಾಜ್ ಸಖತ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತಮ್ಮ ಕರಿಯರ್, ಬದುಕು ಎಲ್ಲದರಲ್ಲೂ ಫೋಕಸ್ಡ್ ಆಗಿರುತ್ತಾರೆ. ಈ ರೀತಿಯ ಪಾತ್ರವನ್ನು ಮಿಲನಾ ನಾಗರಾಜ್ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ಹೇಳಿದ್ದಾರೆ.

ಲವ್‌ಬರ್ಡ್ಸ್ ಸಿನಿಮಾ ಒಪ್ಪಿಕೊಳ್ಳಲು ಕಥೆಯೇ ಪ್ರಮುಖ ಕಾರಣವಾಗಿದ್ದು, ನಿರ್ದೇಶಕರು ಬಹಳ ನೀಟಾಗಿ ಎಲ್ಲವನ್ನೂ ಮಾಡಿದ್ದಾರೆ. ತಾನು ಸಖತ್ ಸ್ಟೆöÊಲಿಶ್ ಆಗಿ, ಇಂಡಿಪೆAಡೆAಟ್ ಆಗಿರುವ ಮಹಿಳೆಯರ ಪ್ರತಿನಿಧಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ತಾನು ಮತ್ತು ತನ್ನ ಗಂಡ ಡಾರ್ಲಿಂಗ್ ಕೃಷ್ಣ ಇಬ್ಬರೂ ನಟಿಸುವುದನ್ನು ಜನರು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಗಂಡ ಹೆಂಡತಿ ಸಂಬAಧವೆAಬುದು ಬದುಕಿನಲ್ಲಿ ಎಷ್ಟು ಮುಖ್ಯ ಮತ್ತು ಅದನ್ನು ಸುಂದರಗೊಳಿಸಿಕೊAಡರೆ ಬದುಕು ಹೇಗಿರುತ್ತದೆ ಎಂಬೆಲ್ಲಾ ವಿಷಯಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ಮಿಲನಾ ನಾಗರಾಜ್ ತಿಳಿಸಿದ್ದಾರೆ.

Leave a Comment