ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಮಾರ್ಚ 8 ರಂದು ವಿಶ್ವದಾದ್ಯಂತ ಮಹಿಳೆಯರ ದಿನಾಚರಣೆ ಆಚರಿಸಲಾಗುತ್ತಿದೆ.
ಹೆಣ್ಣು ಬಹುರೂಪಿ. ಮಗಳಾಗಿ ಸಹೋದರಿಯಾಗಿ ಗೆಳತಿಯಾಗಿ ಹೆಂಡತಿಯಾಗಿ ತಾಯಿಯಾಗಿ ಹೀಗೆ ವಿವಿಧ ರೂಪಗಳಲ್ಲಿ ಹೆಣ್ಣು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಾಳೆ. ಆದರೆ ಅವಳ ಸ್ವಾತಂತ್ರ್ಯದ ವಿಷಯ ಬಂದಾಗ ಅವಳು ಅಬಲೆ. ಬಲಹೀನಳು ಅವಳಿಗೆ ಗಂಡೇ ಆಸರೆ ಎಂಬಿತ್ಯಾದಿ ಮಾತುಗಳು ಸಹ ಕೇಳಿ ಬರುತ್ತವೆ. ಮನೆಯ ರ್ವ ಸದಸ್ಯೆಯಾಗಿ ಹೆಣ್ಣು ಇಲ್ಲದಿದ್ದರೆ ಅಂತ ಮನೆ ಸಮಾಜಕ್ಕೆ ಯಾವ ಬೆಲೆಯೂ ಇರಲಾರದು. ತ್ಯಾಗಿಯಾಗಿ ಇರಬಲ್ಲ ಮನಃ ಸ್ಥಿತಿ ಇದ್ದರೆ ಅದು ಹೆಣ್ಣಿಗೆ ಮಾತ್ರ. ನೋವು ನಲಿವು ದುಃಖ ದುಮ್ಮಾನಗಳ ನಡುವೆ ಇತರರ ನೋವಿಗೆ ಸಂತೈಸುವ ಗುಣ ಪ್ರಕೃತಿದತ್ತವಾಗಿ ಬಂದಿರುವುದು ಹೆಣ್ಣಿಗೆ ಮಾತ್ರ.
೧೯೧೧ರಲ್ಲಿ ಮಹಿಳೆಯ ಹಕ್ಕಿಗಾಗಿ ನಡೆದ ಸಂಯುಕ್ತರಾಷ್ರ್ಟಗಳ ಸಮ್ಮೆಳನದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಇದು ಮಹಿಳೆ ಪುರುಷರಷ್ಟೆ ಸಮಾನಳು ಅವಳು ಪುರುಷರಂತೆ ಹಕ್ಕು ಪಡೆಯಬೇಕು ಎಂಬ ಮಾನದಂಡದಿಂದ. ಬದಲಾಗಿ ಹೆಣ್ಣು ಸಹ ಜೀವ ಅವಳಿಗೆ ಅವಳದೇ ಆದ ಸ್ವತಂತ್ರ ವ್ಯಕ್ತಿತ್ವ ಹೊಂದಬೇಕು ಎಂಬ ದೃಷ್ಠಿಕೋನದಿಂದ ಮಹಿಳೆಯ ಕರ್ತವ್ಯದ ಮತದಾನದ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗಾಗಿ ನಡೆದ ಸಮ್ಮೇಳನವನ್ನು ಪ್ರತಿವರ್ಷ ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುವ ಪದ್ಧತಿ ಜಾರಿಗೆ ಬಂದಿದೆ.
ಇಂದಿಗೂ ಸುಸಂಸ್ಕ್ರತ ಸಮಾಜ ಪರುಷ ಪ್ರಧಾನ ಸಮಾಜ ಅಂತೆಲ್ಲ ಕರೆಯಿಸಿಕೊಳ್ಳುವ ಸಮಾಜಕ್ಕೆ ಹೆಣ್ಣು ತಾಯಿಯಾಗಿ ಹೆಂಡತಿಯಾಗಿ ಸಹೋದರಿಯಾಗಿ ಕೊನೆಗೆ ಮನೆಕೆಲಸದವಳಾಗಿ ಅವಶ್ಯವಿರುವ ಹೆಣ್ಣು ಮಗಳಾಗಿ ಮಾತ್ರ ಬೇಡ ಎಂಬ ಮನಃಸ್ಥಿತಿ ಜಾಗತಿಕ ವಲಯದಲ್ಲೂ ಇವೆ. ಅದರಿಂದ ಭ್ರೂಣ ಹತ್ಯೆಯಂತ ಮಾಹಾಪಾಪ ಕೃತ್ಯಗಳು ಜರುಗುತ್ತಿವೆ ಎಲ್ಲದಕ್ಕೂ ಮಿಗಿಲಾಗಿ ಹೆಣ್ಣಿನ ಮೇಲಿನ ಕರುಣೆಗಳಿಗಿಂತ.. ಅವಳಿಗೆ ಆಸರೆಯಾಗುವ ಕನಸಿಗಿಂತ ಅನುಕಂಪಕ್ಕಿಂತ ಹೆಚ್ಚಾಗಿ ಹೆಣ್ಣಿನ ಮೇಲೆ ಒಂದು ಗೌರವ ಭಾವ ತಳೆದರೆ ಅದಕ್ಕಿಂತ ಮಿಗಿಲಾದ ದಿನಾಚರಣೆಯ ಅಗತ್ಯವಿಲ್ಲ
ಸ್ಟಾರ್ ಕನ್ನಡ ಹಾಗೂ ನಮ್ಮ ಸೂಪರ್ ಸ್ಟಾರ್ ವತಿಯಿಂದ ಸಮಸ್ತ ಸಹೋದರಿಯರಿಗೆ ಅಂತರಾಷ್ರ್ಟೀಯ ಮಹಿಳಾ ದಿನದ ಶುಭಾಶಯಗಳು