‘ವೇದ’ ಬಹುನಿರೀಕ್ಷೆಯ ಚಿತ್ರ

Share

ಹ್ಯಾಟ್ರಿಕ್ ಹೀರೋ ಮತ್ತು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ತಮ್ಮ ಬ್ಯಾನರ್ ಮೂಲಕ ನಿರ್ಮಿಸಿ ನಟಿಸುತ್ತಿರುವ ೧೨೫ ಚಿತ್ರ ವೇದ ಮೋಸ್ಟ್ ಎಕ್ಸ್ಪೆಕ್ಟಡ್ ಚಿತ್ರವಾಗಿದೆ. ಈ ಚಿತ್ರವು ಇದೇ ತಿಂಗಳು ೨೩ರಂದು ತೆರೆ ಕಾಣಲಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಭಾರೀ ಸದ್ದು ಮಾಡಿದೆ. ಟ್ರೇಲರ್‌ನಲ್ಲಿ ಹೊಡೆದಾಟದ ದೃಶ್ಯಗಳಿಂದ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಉಂಟು ಮಾಡಿದೆ.

ವಜ್ರಕಾಯ, ಭಜರಂಗಿ ಮತ್ತು ಭಜರಂಗಿ-೨ ಚಿತ್ರಗಳ ಬ್ಯಾಕ್ ಟು ಬ್ಯಾಕ್ ನಿರ್ದೇಶನ ಮಾಡಿದ್ದ ಹರ್ಷ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೋಡಿಯಾಗಿ ಗಾನವಿ ಲಕ್ಷö್ಮಣ್ ನಟಿಸಿದ್ದಾರೆ. ಈಗಾಗಲೇ ವೇದ ಚಿತ್ರದ ಗೀತೆಗಳು ಪ್ರಸಿದ್ದಿ ಗೊಂಡಿವೆ. ಗಿಲಕ್ಕು ಗೀತೆ ಮತ್ತು ಪುಷ್ಪ ಗೀತೆಗಳು ಈಗಾಗಲೇ ಯಶಸ್ವಿಯಾಗಿವೆ. ಪುಷ್ಪ ಗೀತೆಯನ್ನು ಸ್ವತಃ ಶಿವರಾಜ್‌ಕುಮಾರ್ ಹಾಡಿದ್ದಾರೆ.

ವೇದ ಚಿತ್ರದ ಸಂಗೀತ ನಿರ್ದೇಶನವನ್ನು ಅರ್ಜುನ್ ಜನ್ಯ ನೀಡಿದ್ದಾರೆ. ಈ ಚಿತ್ರದ ಛಾಯಾಗ್ರಹಣವನ್ನು ಸ್ವಾಮಿ ಜಿ.ಗೌಡ ಮಾಡಿದ್ದು. ಸಂಕಲನ ಕಾರ್ಯವನ್ನು ದೀಪು ಎಸ್. ಕುಮಾರ್ ಮಾಡಿದ್ದಾರೆ.
ವೇದ ಚಿತ್ರದ ಇನ್ನಿತರ ತಾರಾಗಣವೆಂದರೆ ಉಮಾಶ್ರೀ, ಅದಿತಿ ಸಾಗರ್, ರಘು ಶಿವಮೊಗ್ಗ, ಜಗ್ಗಪ್ಪ, ಚೆಲುವರಾಜು, ಭರತ್ ಸಾಗರ್, ಪ್ರಸನ್ನ, ವಿನಯ್, ಸಂಜೀವ್ ಮತ್ತು ಕುರಿ ಪ್ರತಾಪ್.

Leave a Comment