`ಪದವಿ ಪೂರ್ವ’ದಲ್ಲಿ ಹೊಸತನದ ಹಾಡುಗಳು

Share

ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿರುವ `ಪದವಿ ಪೂರ್ವ’ ಚಿತ್ರಕ್ಕೆ ಹೊಸತನದ ಹಾಡುಗಳನ್ನು ವಿಕಟ ಕವಿ ಯೋಗರಾಜ್ ಭಟ್ ರಚಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಚಿತ್ರದ ಎಲ್ಲ ಗೀತೆಗಳನ್ನು ಅವರೇ ಬರೆದಿದ್ದಾರೆ. ಬಹಳ ದಿನಗಳ ನಂತರ ಹೊಸಬರ ಚಿತ್ರ ತಂಡಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಪದವಿ ಪೂರ್ವ ಸಿನಿಮಾ ಪಿಯುಸಿ ವಿದ್ಯಾರ್ಥಿಗಳ ಜೀವನ ಕುರಿತಾದ ಕಥೆಯನ್ನು ಹೊಂದಿದೆ. ಹರಿಪ್ರಸಾದ್ ಜಯಣ್ಣನವರು ತಮ್ಮ ಜೀವನದಲ್ಲಿ ಆದಂತಹ ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರದ ಕಥೆಯನ್ನು ಬರೆದಿದ್ದಾರೆ.

ಈ ಸಿನಿಮಾದಲ್ಲಿ ನಾಲ್ಕು ಹಾಡು ಮತ್ತು ಎರಡು ಬಿಟ್ ಹಾಡುಗಳಿದ್ದು, ಕಾಲೇಜು ತೋರಿಸುವ ಒಂದು ಹಾಡು, ಫ್ರೆಂಡ್‌ಶಿಪ್ ಸೇರಿದಂತೆ ಒಟ್ಟು ನಾಲ್ಕು ಹಾಡುಗಳಿವೆ. ವಿಜಯ್‌ಪ್ರಕಾಶ್‌ರ ಫ್ರೆಂಡ್‌ಶಿಪ್ ಹಾಡಿನ ಮಕ್ಕಳ ವರ್ಷನ್ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ಒಂದೇ ಒಂದು ಹಾಡು ಯೋಗರಾಜ್ ಭಟ್‌ರ ಟಿಪಿಕಲ್ ಸ್ಟೆöÊಲ್‌ನಲ್ಲಿದೆ. ಉಳಿದ ಹಾಡುಗಳು ಹೊಸ ರೀತಿಯಲ್ಲಿದ್ದು, ಪ್ರತಿ ಹಾಡನ್ನು ಹಲವರು ಕನೆಕ್ಟ್ ಮಾಡಬಹುದು ಎನ್ನುವುದು ನಿರ್ದೇಶಕರ ಮಾತಾಗಿದೆ.

ಎಲ್ಲರ ಮನಸ್ಸಿನಲ್ಲಿ ಉಳಿಯುವಂತಹ ಮ್ಯೂಸಿಕ್ ಆಲ್ಬಂ ಪದವಿ ಪೂರ್ವ ಚಿತ್ರದಲ್ಲಿದೆ. ಭಟ್ಟರು ಬರೆದ ಎಲ್ಲ ಹಾಡುಗಳಿಗೆ ತಾನು ಕಂಪೋಸ್ ಮಾಡಿರುವುದು ಇದೇ ಮೊದಲು ಎಂದು ಅರ್ಜುನ್ ಜನ್ಯ ಹೇಳಿದ್ದಾರೆ. ಈ ಚಿತ್ರದ ಮೂಲಕ ಪೃಥ್ವಿ ಶಾಮನೂರು ಎಂಬ ಯುವನಟ ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದು, ಅವರಿಗೆ ನಾಯಕಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. ಹಲವು ಹೊಸ ಕಲಾವಿದರ ಜತೆಗೆ `ರಾಮಾ ರಾಮಾ ರೇ’ ಚಿತ್ರದ ನಟರಾಜ್ ಸೇರಿದಂತೆ ಹಲವು ಹಿರಿಯ ಕಲಾವಿದರು ನಟಿಸಿದ್ದಾರೆ.

Leave a Comment