‘ಶ್ರೀಮಂತ’ ಟೀಸರ್ ಬಿಡುಗಡೆ

Share

ರೈತರನ್ನೇ ಶ್ರೀಮಂತ ಎಂದು ಕರೆಯುವ ಸಿನಿಮಾ “ಶ್ರೀಮಂತ’’ ಟೀಸರ್ ರೈತರ ದಿನವಾದ ಡಿಸೆಂಬರ್ ೨೩ರಂದು ಬಿಡುಗಡೆಗೊಂಡಿತು. ಸೋನು ಸೂದ್ ನಟಿಸಿರುವ ಈ ಚಿತ್ರವನ್ನು ಹಾಸನ್ ರಮೇಶ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಿ.ನಾರಾಯಣಪ್ಪ, ವಿ.ಸಂಜಯಬಾಬು ಮತ್ತು ಟಿ.ಕೆ.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖರವರು ಸಾಹಿತ್ಯ ಸಂಗೀತ ನೀಡಿದ್ದಾರೆ. ದಿವಂಗತ ಗಾಯಕ ಬಾಲಸುಬ್ರಮಣ್ಯಂ ರೈತನ ಕುರಿತಾದ ಗೀತೆಗೆ ಧ್ವನಿಯಾಗಿದ್ದಾರೆ. ರೈತನೆಂದರೆ ಕರುಣೆ, ಹಬ್ಬ, ಪ್ರೀತಿ ಮತ್ತು ಮಮತೆ ಎಂದು ವರ್ಣಿಸುವ ಮೂಲಕ ಆಕರ್ಷಿಸುವ ಟೀಸರ್ ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ. ಚರಣ್‌ರಾಜ್, ರಮೇಶ್ ಭಟ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿರುವ ಈ ಚಿತ್ರವು ಸಂಪೂರ್ಣವಾಗಿ ಹಳ್ಳಿ ವಾತಾವರಣದಲ್ಲಿ ಚಿತ್ರೀಕರಿಸಲಾಗಿದೆ.

ಸೋನ್ ಸೂದ್‌ರವರ ಐಯಮ್ ಫ್ರಮ್ ಗ್ರಾಸ್‌ರೂಟ್ ನಾಟ್ ಫ್ರಮ್ ಫ್ಯಾರಚೂಟ್ ಎಂಬ ಡೈಲಾಗ್ ಟೀಸರ್‌ನಲ್ಲಿ ಹೆಚ್ಚು ಖ್ಯಾತಿಯನ್ನು ಹೊಂದಿದೆ. ಶ್ರೀಮಂತ ಚಿತ್ರದ ನಾಯಕ ನಟನಾಗಿ ಕ್ರಾಂತಿ ಎಂಬಾತ ನಟಿಸುತ್ತಿದ್ದು, ಹೊಡದಾಟದ ದೃಶ್ಯದಲ್ಲಿ ಹೆಚ್ಚು ಆಕರ್ಷಕನಾಗಿ ಕಾಣುತ್ತಾನೆ. ಎತ್ತಿನಗಾಡಿ ಓಡಿಸುವ ದೃಶ್ಯ ಮತ್ತು ನೃತ್ಯದ ದೃಶ್ಯಗಳು ಟೀಸರನ್ನು ಮತ್ತಷ್ಟು ವೀಕ್ಷಿಸುವಂತೆ ಮಾಡಿದೆ. ಶ್ರೀಮಂತ ಚಿತ್ರವು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.

Leave a Comment