ಸದ್ಯದಲ್ಲೇ ಚೌಕಾಬಾರ ಚಿತ್ರ ಬಿಡುಗಡೆ

Share

ವಿಕ್ರಂ ಸೂರಿ ನಿರ್ದೇಶಿಸಿ,ಅವರ ಪತ್ನಿ ನವಿತಾರಾವ್ ನಿರ್ಮಿಸಿರುವ ಚೌಕಾಬಾರ’ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸಿಲ್ಲಿ ಲಲ್ಲಿಯಿಂದಲೇ ನಾಡಿನ ಮನೆ ಮಾತಾಗಿರುವ ವಿಕ್ರಂ ಸೂರಿ, ನಮಿತಾರಾವ್ ಇದೀಗ ಸಿನಿಮಾ ನಿರ್ಮಾಪಕರಾಗಿದ್ದಾರೆ.ಯುವ ಚುಂಬಕ’ ಎಂಬ ಹಾಡೊಂದನ್ನು ಚಿತ್ರ ತಂಡ ರಿಲೀಸ್ ಮಾಡಿದೆ.
`ಚೌಕಾಬಾರ’ ಚಿತ್ರವನ್ನು ನವಿ ನಿರ್ಮಿತಿ ಬ್ಯಾನರ್ ಅಡಿಯಲ್ಲಿ ನಮಿತರಾವ್ ನಿರ್ಮಿಸಿದರೆ, ಪತಿ ವಿಕ್ರಂ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಫೆ.೧೪ರಂದು ಪ್ರೇಮಿಗಳ ದಿನದಂದು ಬಿಡುಗಡೆಯಾದ ರೋಮ್ಯಾಂಟಿಕ್ ವಿಡಿಯೋ ಸಾಂಗ್‌ನ್ನು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದು.

ಮಣಿ ಆರ್. ರಾವ್ ಅವರ ಕಾದಂಬರಿ ಆಧಾರಿತ ಈ ಚಿತ್ರದ ರೊಮ್ಯಾಂಟಿಕ್ ಸಾಂಗ್ ಇದೀಗ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಇದೀಗ ಬಿಡುಗಡೆಯಾಗಿರುವ ಈ ರೊಮ್ಯಾಂಟಿಕ್ ಹಾಡನ್ನು ನಕುಲ್ ಅಭ್ಯಂಕರ್ ಹಾಗೂ ರಮ್ಯ ಭಟ್ ಹಾಡಿದ್ದಾರೆ. ಬಿ.ಆರ್. ಲಕ್ಷö್ಮಣ್‌ರಾವ್ ಈ ಹಾಡನ್ನು ಬರೆದಿದ್ದಾರೆ. ಸಂಗೀತ ನಿರ್ದೇಶಕ ಅಶ್ವಿನ್ ಪಿ. ಕುಮಾರ್ ಸಂಗೀತ ನೀಡಿದ್ದಾರೆ.
ಚಿತ್ರದ ಸಂಭಾಷಣೆಯನ್ನು ರೂಪ ಪ್ರಭಾಕರ್, ಛಾಯಾಗ್ರಾಹಣ ಕವಿರಾಜ್ ಮತ್ತು ಸಂಕಲನವನ್ನು ಶಶಿಧರ್ ಮಾಡಿದ್ದಾರೆ. ಇನ್ನುಳಿದ ತಾರಾಗಣದಲ್ಲಿ ಕಾವ್ಯ ರಮೇಶ್, ಸಂಜಯ್ ಸೂರಿ, ಸುಮಾ ರಾವ್, ಪ್ರಥಮ ಪ್ರಸಾದ್, ಮಧು ಹೆಗಡೆ, ದಮಯಂತಿ ನಾಗರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

Leave a Comment