ಮಾರ್ಚ್ ೩ರಂದು ಪ್ರಜಾರಾಜ್ಯ ಚಿತ್ರ ಬಿಡುಗಡೆ

Share

ಡಾ.ವರದರಾಜು ಕಥೆ, ಚಿತ್ರಕಥೆ, ಸಂಭಾಷಣೆ, ನಟನೆ ಮತ್ತು ನಿರ್ಮಾಣ ಮಾಡಿರುವ `ಪ್ರಜಾರಾಜ್ಯ’ ಚಿತ್ರವು ಮಾರ್ಚ್ ೩ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ನಿರ್ದೇಶನವನ್ನು ವಿಜಯ್ ಭಾರ್ಗವ ಮಾಡಿದ್ದಾರೆ.
ಪ್ರತಿಯೊಬ್ಬ ಮತದಾರನು ನೋಡಬೇಕಾದ ಚಿತ್ರವೆಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಚುನಾವಣೆ ಇರುವುದರಿಂದ ಈ ಚಿತ್ರವು ಬಹಳಷ್ಟು ನಿರೀಕ್ಷೆಯನ್ನು ಮೂಡಿಸಿದೆ.

`ಎದ್ದೇಳಿ ಯುವಕರೇ ಬದಲಾವಣೆ ನೀವಾಗಿ’ಆದರ್ಶಗಳು ಬರಿ ಮಾತಿನಲ್ಲಿ ಇರಬಾರದು, ನಮ್ಮ ಬದುಕೇ ಆದರ್ಶವಾಗಿರಬೇಕು’ ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬAತಹ ಘೋಷಣೆಗಳನ್ನು ಈ ಚಿತ್ರವು ಹೊಂದಿದೆ. ಮತ ನೀಡಿ ಶಾಸಕರನ್ನು ಆಯ್ಕೆ ಮಾಡ್ತೀವಿ, ತೆರಿಗೆನೂ ಕಟ್ತೀವಿ, ಆದ್ರೇ ಸರ್ಕಾರಿ ಕಾಮಗಾರಿಗಳ ಮೇಲೆ ಮಂತ್ರಿಗಳ ಹೆಸರು ಯಾಕೇ..? ಎಂಬ ಪ್ರಶ್ನೆಯನ್ನು ಈ ಚಿತ್ರವು ಕೇಳಲಿದೆ. ಆರ್ಥಿಕ ಸ್ವಾತಂತ್ರö್ಯಕ್ಕಾಗಿ ಹೋರಾಟ ಎಂಬ ಟ್ಯಾಗ್‌ಲೈನ್‌ನ್ನು ಹೊಂದಿರುವ ಪ್ರಜಾರಾಜ್ಯ ಚಿತ್ರವು ನಮ್ಮ ಮತ, ನಮ್ಮ ಹಕ್ಕು, ನಮ್ಮ ತೆರಿಗೆ, ನಮ್ಮ ಸ್ವತ್ತು ಎಂದು ಘೋಷವಾಕ್ಯವನ್ನು ಹೊಂದಿದೆ. ಇತ್ತೀಚೆಗೆ ನಟ ಉಪೇಂದ್ರರವರು ಈ ಚಿತ್ರಕ್ಕಾಗಿ ಯೋಗರಾಜ್ ಭಟ್ ಬರೆದಿರುವಜೈ ಎಲೆಕ್ಷನ್’ ಹಾಡನ್ನು ಹಾಡಿದ್ದಾರೆ.

ಪ್ರಜಾರಾಜ್ಯ ಚಿತ್ರದ ತಾರಾಗಣದಲ್ಲಿ ಡೈನಾಮಿಕ್ ಹೀರೋ ದೇವರಾಜ್, ಸುಧಾರಾಣಿ, ಅಚ್ಯುತ್‌ಕುಮಾರ್, ನಾಗಾಭರಣ, ತಬಲನಾಣಿ, ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ, ಸುಧಾ ಬೆಳವಾಡಿ ಸೇರಿದಂತೆ ಬಹುತಾರಾಗಣವಿದೆ.

Leave a Comment