ಸಪ್ತಮಿಗೌಡ ಬಾಲಿವುಡ್ ಎಂಟ್ರಿ

Share

ಕಾAತಾರ ಚಿತ್ರದ ಲೀಲಾ ಪಾತ್ರದಿಂದ ಗಮನ ಸೆಳೆದಿದ್ದ ಸಪ್ತಮಿಗೌಡ ಈಗ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಲು ಅವಕಾಶ ದೊರೆತಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿರುವ ದಿ ವ್ಯಾಕ್ಸಿನ್ ವಾರ್ ’ ಸಿನಿಮಾದಲ್ಲಿ ಸಪ್ತಮಿಗೌಡ ನಟಿಸುತ್ತಿದ್ದಾರೆ. ವಿವೇಕ್ ಅಗ್ನಿಹೋತ್ರಿಯವರು ಕಾಂತಾರ ಸಿನಿಮಾ ನೋಡಿ ಕರೆಮಾಡಿ ಮಾತನಾಡಿದ್ದರು. ತನ್ನ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಮ್ಮವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ಪಾತ್ರವಿದೆ ಎಂದು ಹೇಳಿದ್ದರು. ನಂತರ ಕಥೆ ಇಷ್ಟವಾಗಿದ್ದರಿಂದ ಆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದೇನೆ. ಹೈದರಾಬಾದ್‌ನಲ್ಲಿ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದು ಸಪ್ತಮಿಗೌಡ ಹೇಳುತ್ತಾರೆ.

ಕಾಂತಾರ ಚಿತ್ರದ ಲೀಲಾ ಪಾತ್ರವನ್ನು ಕಂಡು ಖುಷಿಯಾಯಿತು. ಕರೆ ಮಾಡಿ ನಮ್ಮ ಚಿತ್ರದ ಬಗ್ಗೆ ಹೇಳಿದೆ ಒಪ್ಪಿಕೊಂಡರು. ಒಳ್ಳೆ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಲಖನೌ ಶೆಡ್ಯೂಲ್ ಮುಗಿಸಿದ್ದೇವೆ. ಹೈದರಾಬಾದ್‌ನಲ್ಲಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಪ್ತಮಿಗೌಡ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಖುಷಿ ಇದೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. `ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ಅನುಪಮ್ ಖೇರ್, ನಾನಾ ಪಾಟೇಕರ್ ಸೇರಿದಂತೆ ಹಲವಾರು ಬಾಲಿವುಡ್ ನಟರು ನಟಿಸುತ್ತಿದ್ದಾರೆ.

Leave a Comment