ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ ಮಾಡ್ತಾರ ಸುದೀಪ್?

Share

ವಿಕ್ರಾಂತ ರೋಣ ಸಿನಿಮಾ ಆಸ್ಕರ್ ಲಿಸ್ಟ್ನಲ್ಲಿ ನಾಮಿನೇಟ್ ಆಗಿರುವುದಕ್ಕೆ ಖುಷಿಯಿಂದಿರುವ ನಾಯಕ ನಟ ಸುದೀಪ್ ಇಲ್ಲಿಯವರೆಗೆ ಯಾವುದೇ ಹೊಸ ಸಿನಿಮಾದ ಘೋಷಣೆ ಮಾಡಿಲ್ಲ. ಯಾವಾಗಲೂ ತಾನು ತೆರೆಯ ಮೇಲೆ ಒಳ್ಳೆಯ ಕಥೆಯನ್ನು ಹೇಳಲು ಇಷ್ಟ ಪಡುತ್ತೇನೆ. ಆ ನಿಟ್ಟಿನಲ್ಲಿ ಮಾಡಿದ್ದೇವಿಕ್ರಾಂತ ರೋಣ’ ಸಿನಿಮಾ. ಈ ಚಿತ್ರದ ಕಥೆ ಕೇಳಿದ ದಿನವೇ ತಾನು ಸಕ್ಸಸ್ ದಿನಗಳ ಬಗ್ಗೆ ಕಲ್ಪನೆ ಮಾಡಿಕೊಂಡಿದ್ದೆ. ಆಸ್ಕರ್‌ಗೆ ವಿಕ್ರಾಂತ ರೋಣ ನಾಮಿನೇಟ್ ಆಗಿದೆ ಎಂದು ತಿಳಿದ ಕೂಡಲೇ ನಾವೆಲ್ಲಾ ಆ ಚಿತ್ರಕ್ಕಾಗಿ ಶ್ರಮಿಸಿದ ದಿನಗಳು ನೆನಪಿಗೆ ಬಂದವು. ಇಡೀ ತಂಡದವರೆಲ್ಲ ಸೇರಿ ಮತ್ತೊಬ್ಬರನ್ನು ಮಾತನಾಡಿಸಿದೆವು. ಪ್ರತಿಯೊಬ್ಬರಿಗೂ ಶುಭಾಶಯ ತಿಳಿಸಿದೆ. ಒಬ್ಬ ಸ್ಟಾರ್ ಎಂಬ ಕಾರಣಕ್ಕೆ ಏನನ್ನೂ ಬದಲಾಯಿಸದೇ ಸಿನಿಮಾ ಮಾಡಲಾಗಿತ್ತು. ಸಿನಿಮಾ ಮೇಕಿಂಗ್‌ನ್ನು ಸಾಕಷ್ಟು ಎಂಜಾಯ್ ಮಾಡಿದೆವು. ಆ ಕಾಲಘಟ್ಟವನ್ನು ಸೃಷ್ಟಿ ಮಾಡಿ ಅದರೊಳಗೆ ಎಲ್ಲರೂ ನಟಿಸುತ್ತಿದ್ದೆವು. ಇಡೀ ಸಿನಿಮಾ ಜರ್ನಿಯನ್ನು ತಾನು ಮರೆಯಲ್ಲ’ ಎಂದು ಸುದೀಪ್ ಹೇಳಿದ್ದಾರೆ.

ವಿಕ್ರಾಂತ ರೋಣದ ನಂತರ ಯಾವ ಪ್ರಾಜೆಕ್ಟನ್ ಅನೌನ್ಸ್ ಮಾಡದ ಸುದೀಪ್ ಸದ್ಯಕ್ಕೆ ಕಥೆಗಳನ್ನು ಕೇಳುತ್ತಿದ್ದಾರೆ. ಅನೂಪ್ ಭಂಡಾರಿಯವರೊAದಿಗೆ ವಿಕ್ರಾಂತ ರೋಣ ಮಾಡಿದ ನಂತರ ಮತ್ತೊಂದು ಸಿನಿಮಾ ಮಾಡುತ್ತೀರ ಎಂಬ ಪ್ರಶ್ನೆಗೆ ಸುದೀಪ್‌ರವರು `ನಾವಿಬ್ಬರು ಸೇರಿದರೆ ಅದರಲ್ಲಿ ಒಂದು ವಿಶೇಷತೆ ಇದ್ದೇ ಇರುತ್ತದೆ. ಈಗಾಗಲೇ ಹಲವು ಪ್ರಾಜೆಕ್ಟ್ಗಳ ಕಥೆ ಕೇಳಿದ್ದೇನೆ. ಅನೌನ್ಸ್ ಮಾಡುವುದಕ್ಕೆ ಮುನ್ನ ನನಗೆ ಯಾವ ರೀತಿಯ ಸಿನಿಮಾ ಮಾಡಬೇಕು ಎಂಬ ಸ್ಪಷ್ಟತೆ ಇರಬೇಕು ಎಂದು ಹೇಳುವ ಮೂಲಕ ಶೀಘ್ರದಲ್ಳೇ ಹೊಸ ಸಿನಿಮಾ ಘೋಷಣೆ ಮಾಡುವ ಸುಳಿವನ್ನು ಸುದೀಪ್ ನೀಡಿದ್ದಾರೆ.

Leave a Comment