ಅಕ್ಷಿತ್ ಶಶಿಕುಮಾರ್ `ಖೆಯೊಸ್’ ಚಿತ್ರದ ಮೂಲಕ ಎಂಟ್ರಿ

Share

ಸುಪ್ರೀA ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ‘ಖೆಯೊಸ್’ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಅವರ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಈ ಚಿತ್ರವು ಥಿಲ್ಲರ್ ಜಾನರ್‌ನ ಚಿತ್ರವಾಗಿದ್ದು, ಖೆಯೊಸ್’ ಸೀಟಿನ ತುದಿಗೆ ಕುಳಿತು ನೋಡುವಂತಹ ಥ್ರಿಲ್ಲರ್, ಬಹಳ ಚೆನ್ನಾಗಿ ಮೂಡಿ ಬಂದಿದೆ. ಕಥೆಯ ಜತೆಗೆ ಬೆರೆತು ನೋಡುವಂತಹ ಸಿನಿಮಾವಿದು ಎಂದು ನಿರ್ದೇಶಕ ಡಾ. ಜಿ.ವಿ. ಪ್ರಸಾದ್ ಹೇಳಿದ್ದಾರೆ. ಇದೊಂದು ಮರ್ಡರ್ ಮಿಸ್ಟಿç ಕಥೆ, ೨೪ ವರ್ಷದ ಮೆಡಿಕಲ್ ವಿದ್ಯಾರ್ಥಿಯೊಬ್ಬ ಸಮಸ್ಯೆಯೊಳಗೆ ಸಿಲುಕಿಕೊಂಡಾಗ ತನ್ನಲ್ಲಿರುವ ವೈದ್ಯ ಜ್ಞಾನದಿಂದ ಹೇಗೆ ಹೊರಬರುತ್ತಾನೆ ಎಂಬುದೇ ಸಿನಿಮಾದ ಕಥೆ. ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಅದ್ಭುತವಾಗಿ ನಟಿಸಿದ್ದಾರೆ. ಆಕ್ಷನ್ ಸನ್ನಿವೇಶಗಳು ಚೆನ್ನಾಗಿ ಮೂಡಿ ಬಂದಿವೆ ಎನ್ನುವುದು ನಿರ್ದೇಶಕರ ಮಾತು.

ಈ ಸಿನಿಮಾದಲ್ಲಿ ಹಿರಿಯ ನಟ ಶಶಿಕುಮಾರ್ ಸಹ ವಿಶೇಷ ಪಾತ್ರದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಅಪ್ಪ ಮಗ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರ್.ಕೆ. ಚಂದನ್, ಸಿದ್ದು ಮೂಲಿಮನಿ ಸೇರಿದಂತೆ ಹಲವಾರು ಕಲಾವಿದರು ಇದರಲ್ಲಿ ನಟಿಸಿದ್ದಾರೆ. ದಿ ಬ್ಲಾಕ್ ಪೆಬಲ್ ಎಂಟರ್‌ಟೇನ್ ಮೆಂಟ್ಸ್ ಬ್ಯಾನರ್ ನಡಿ ಪಾರುಲ್ ಅಗರ್‌ವಾಲ್ ಮತ್ತು ಹೇಮಚಂದ್ರ ರೆಡ್ಡಿ `ಖೆಯಾಸ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Leave a Comment