ತತ್ಸಮ ತದ್ಭವ ಚಿತ್ರದಲ್ಲಿ ಮೇಘನಾ ರಾಜ್

Share

ಬಹಳ ದಿನಗಳಿಂದ ತೆರೆಯ ಮೇಲೆ ಕಾಣಿಸಿಕೊಳ್ಳದ ಸ್ಯಾಂಡಲ್‌ವುಡ್ ಖ್ಯಾತನಟಿ ಮೇಘನಾ ರಾಜ್ ತತ್ಸಮ ತದ್ಭವ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು ವಿಶಾಲ್ ಅತ್ರೇಯ ನಿರ್ದೇಶನ ಮಾಡುತ್ತಿದ್ದು, ನಿರ್ದೇಶಕ ಪನ್ನಗಭರಣ ನಿರ್ಮಾಣ ಮಾಡುತ್ತಿದ್ದಾರೆ.
`ಈ ಚಿತ್ರದಲ್ಲಿ ತಾನು ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿದ್ದೇನೆ. ಇದೊಂದು ಥ್ರಿಲ್ಲರ್ ಕಥಾನಕ. ಪ್ರೇಕ್ಷಕರು ಸಹ ಈ ಕಥೆಯ ಜತೆಗೆ ಟ್ರಾವಲ್ ಮಾಡುವಂತಹ ಸಿನಿಮಾವಿದು. ಆಟಗಾರ ಸಿನಿಮಾದ ನಂತರ ತಾನು ಥ್ರಿಲ್ಲರ್ ಸಬ್ಜೆಕ್ಟ್ಗಳನ್ನು ಟ್ರೆöÊ ಮಾಡಿರಲಿಲ್ಲ. ತತ್ಸಮ ತದ್ಭವ ಸಿನಿಮಾ ತನ್ನ ಕರಿಯರ್‌ನಲ್ಲಿ ಇದುವರೆಗೂ ಟ್ರೆöÊ ಮಾಡದೇ ಇದ್ದಂತಹ ಸಿನಿಮಾವಾಗಲಿದೆ. ಈ ಸಿನಿಮಾ ಮತ್ತು ಪಾತ್ರದ ಜತೆಗೆ ತನಗೆ ಪರ್ಸನಲ್ ಕನೆಕ್ಟ್ ಇದೆ ’ ಎಂದು ಮೇಘನಾ ರಾಜ್ ಹೇಳುತ್ತಾರೆ.

ಕಳೆದ ವರ್ಷ ಪನ್ನಗಭರಣ ಅವರು ವಿಶಾಲ್ ಅತ್ರೇಯರನ್ನು ಕಳುಹಿಸಿ ತನಗೆ ಕಥೆ ಕೇಳಲು ಹೇಳಿದರು. ಅವರು ಬಂದಾಗ ತನ್ನ ಅಭಿಪ್ರಾಯಕ್ಕಾಗಿ ಬಂದಿದ್ದಾರೆ ಎಂದುಕೊAಡೆ. ಆದರೆ ಕಥೆ ಕೇಳಿದ ತಕ್ಷಣ ತಾನು ಆ ಪಾತ್ರಕ್ಕೆ ಕನೆಕ್ಟ್ ಆದೆ. ತಾನೇ ಆ ಪಾತ್ರವಾದೆ. ಪನ್ನಗರಿಗೆ ಕರೆ ಮಾಡಿ ಇದು ಅದ್ಭುತ ಸ್ಕಿçಪ್ಟ್ ನೀನು ಮುಂದುವರೆಯಬಹುದು ಎಂದೆ. ಆಗ ಅವರು ತಾನು ಸಿದ್ದವಾದರೆ ಈ ಸಿನಿಮಾ ಮಾಡುತ್ತೇನೆ ಎಂದರು. ಆಗ ತನಗೂ ಒಂದೊಳ್ಳೆಯ ಪ್ರಾಜೆಕ್ಟ್ ಮೂಲಕ ಕಮ್‌ಬ್ಯಾಕ್ ಮಾಡಬೇಕು ಎಂದಿತ್ತು. ಅದನ್ನು ಈ ಸಿನಿಮಾ ಮೂಲಕ ಮಾಡುತ್ತಿದ್ದೇನೆ ಎಂದು ಮೇಘನಾ ರಾಜ್ ವಿವರಿಸುತ್ತಾರೆ.

Leave a Comment