`ಗೌಳಿ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿಯ ರಗಡ್ ಲುಕ್
ಬಹಳ ದಿನಗಳಿಂದ ಕಾಯುತ್ತಿದ್ದ ಶ್ರೀನಗರ ಕಿಟ್ಟಿಯ ಗೌಳಿ’ ಸಿನಿಮಾವು ಇದೇ ತಿಂಗಳ ೨೪ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಕಿಟ್ಟಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಗೌಳಿ’ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಸಿನಿ ಪ್ರೇಮಿಗಳ ಹೃದಯ ಗೆದ್ದಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿ ಜಾಲತಾಣದಲ್ಲಿ ಪ್ರಶಂಸೆ ಗಳಿಸಿದೆ.
ಈ ಚಿತ್ರಕ್ಕಾಗಿ ರಿಸರ್ಚ್ ಮಾಡಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಹೊಸ ಪ್ರತಿಭೆ ಸೂರ. ಗೌಳಿ ಅವರ ನಿರ್ದೇಶನದ ಮೊದಲ ಸಿನಿಮಾ. ರಘು ಸಿಂಗಮ್ ಈ ಚಿತ್ರದ ನಿರ್ಮಾಪಕರು. ಇವರಿಗೂ ಸಿನಿಮಾ ನಿರ್ಮಾಣ ಮೊದಲ ಪ್ರಯತ್ನ. ಉಮೇಶ್ ಆರ್.ವಿ. ಅವರ ಸಂಕಲನವಿರುವ ಈ ಚಿತ್ರಕ್ಕೆ ಸಂದೀಪ್ ಛಾಯಾಗ್ರಹಣ. ಶಶಾಂಕ ಶೇಷಗಿರಿ ಅವರ ಸಂಗೀತ ನಿರ್ದೇಶನವಿದೆ.