“ಸ್ಟಾರ್ ಕನ್ನಡ” ದ ‘ನಾಟ್ಯ ರಾಣಿ ಶಾಂತಲಾ’ ಪ್ರಶಸ್ತಿ ವಿಜೇತೆ “ಕು. ಪೂಜಾ ಸಾತ್ನೂರ್”

ಸಿನಿಮಾ ಮತ್ತು ಮನರಂಜನಾತ್ಮಕ ವಿಚಾರಗಳನ್ನು ಜನರಿಗೆ ತಲುಪಿಸುವ ಧ್ಯೇಯವನ್ನಿಟ್ಟುಕೊಂಡು ಲೇಖನಗಳನ್ನು ಹೊರತರುವ ಕ್ರಿಯಾತ್ಮಕವಾದ ಕೆಲಸ ಮಾಡುತ್ತಿರುವ “ನಮ್ಮ ಸೂಪರ್ ಸ್ಟಾರ್ಸ್ “ ಕನ್ನಡ ಸಿನಿಮಾ ಮಾಸ ಪತ್ರಿಕೆ, ಮೊಟ್ಟಮೊದಲ ಬಾರಿಗೆ ನಾಟ್ಯ ಕಲೆಗಳ ಬೀಡು, ಕರ್ನಾಟಕದಲ್ಲಿ ನಾಟ್ಯ ಕ್ಷೇತ್ರದ ಕಲಾವಿದರನ್ನು ಪ್ರೋತ್ಸಾಹಿಸಲು  “ನಾಟ್ಯ ರಾಣಿ ಶಾಂತಲಾ” ಪ್ರಶಸ್ತಿ ಕಾರ್ಯಕ್ರಮ ಮಾರ್ಚ ೨೭ ರಂದು ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು.  “ಸ್ಟಾರ್ ಕನ್ನಡ” ದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ೧೬ ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಜೊತೆ ವಿಶೇಷ ಚೇತನ 

Read More

ಕನ್ನಡಿಗ ‘ಮಂಜು ನಂದನ್’ ನಿರ್ದೇಶನದ “ಮೇರಿ ಪಡೋಸನ್‌ ” ಹಿಂದಿ ವೆಬ್‌ಸೀರೀಸ್‌ ಗೆ ಎಲ್ಲೆಡೆ ಪ್ರಶಂಸೆಯ ಸುರಿಮಳೆ…!!!

” ಕನ್ನಡದ ಯುವ ನಿರ್ದೇಶಕ ‘ಮಂಜುನಂದನ್ ‘ ಬಾಲಿವುಡ್‌ನಲ್ಲಿ ಯಶಸ್ವಿ ಯಾಗಿ ಎಂಟ್ರಿಕೊಟ್ಟು, ಸೈ ಎನಿಸಿಕೊಂಡಿದ್ದಾರೆ.” ಧಾರಾವಾಡ ಮೂಲದ ಮಂಜು ನಂದನ್‌ ಈಗ ಬಾಲಿವುಡ್‌ನಲ್ಲಿ ವೆಬ್‌ಸೀರೀಸ್‌ ಮಾಡಿದ್ದಾರೆ. ಆ ಹೊಸ ವೆಬ್‌ಸೀರೀಸ್‌ಗೆ “ಮೇರಿ ಪಡೋಸನ್”‌ ಎಂದು ನಾಮಕರಣ ಮಾಡಲಾಗಿದೆ. ಸದ್ಯಕ್ಕೆ ಈ ವೆಬ್‌ ಸೀರೀಸ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ತಮ್ಮ ನಿರ್ದೇಶನದ ಹಿಂದಿ ವೆಬ್‌ಸೀರೀಸ್‌ ಕುರಿತು “ನಮ್ಮ ಸೂಪರ್ ಸ್ಟಾರ್ಸ್ಸ್” ಜೊತೆ ಮಾತನಾಡಿದ ಮಂಜುನಂದನ್, “ಇದೊಂದು ಲವ್‌ ಕಾಮಿಡಿ ಜಾನರ್.‌

Read More

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ‘ಸೂಪರ್ ಸ್ಟಾರ್’ “ನಿರಂಜನ್ ಸುಧೀಂದ್ರ”.

ಉದಯೋನ್ಮುಖ ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ರವರ ನಿರ್ದೇಶನದ ‘ಸೂಪರ್ ಸ್ಟಾರ್’ ಚಿತ್ರದ ಪೋಸ್ಟರ್ ಸಾಕಷ್ಟು ಸದ್ದು ಮಾಡಿದ್ದ ನಂತರ ‘ಸೂಪರ್​ಸ್ಟಾರ್’ ಚಿತ್ರದ ಅದ್ಧೂರಿ ಮುಹೂರ್ತ ಅಂಜನಾನಗರದಲ್ಲಿನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ರಮೇಶ್ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಮೈಲಾರಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಆರ್‌ವಿಬಿ ಸಿನೆಮಾಸ್ ಎಂಬ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕ ರಮೇಶ್ ವೆಂಕಟೇಶ್​ ಬಾಬು ಅವರ ತಾಯಿ ಶ್ರೀಮತಿ ಗೌರಮ್ಮ ಮುನಿಯಪ್ಪ ಕ್ಲಾಪ್ ಮಾಡಿದರೆ,

Read More

“ಭರತನಾಟ್ಯ” ಎಂಬ ದೈವ ಸ್ವರೂಪದ ಕಲೆಯನ್ನು ಮೈಗೂಡಿಸಿಕೊಂಡು ಒಂದೊಂದೇ ಮೆಟ್ಟಿಲು ಹತ್ತಿ ಸಾಧನೆಗಳ ಶಿಖರ ಏರಿದವರು ಕರುನಾಡಿನ ‘ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ’ .!!

ಪುರಾಣ ಕಥೆಗಳನ್ನು ನೃತ್ಯದ ಮೂಲಕ ಸಾದರ ಪಡಿಸುವ ಕಲೆಯೇ ಭರತನಾಟ್ಯ. ಇದು ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇಂದ್ರನ ಮನವಿ ಮೇರೆಗೆ ಬ್ರಹ್ಮ ಇದನ್ನು ಐದನೇ ವೇದವಾಗಿ ಸೃಷ್ಟಿ ಮಾಡ್ತಾನೆ. ಮೊದಲ ಬಾರಿಗೆ ಭರತಮುನಿ ನೃತ್ಯ ಪ್ರದರ್ಶನ ನೀಡುತ್ತಾನೆ. ಬ್ರಹ್ಮನ ನೂರು ಗಂಡು ಮಕ್ಕಳಿಂದ ನಾಟ್ಯ ಬೆಳೆಯುತ್ತಾ ಬಂದಿದೆ ಎಂಬ ಪೌರಾಣಿಕೆ ಹಿನ್ನೆಲೆ ಭರತನಾಟ್ಯಕ್ಕಿದೆ. ಭರತನಾಟ್ಯ ಕಲೆ ಉಳಿದೆಲ್ಲಾ ನೃತ್ಯ ಕಲೆಗಳಿಗೊಂದು ಆದರ್ಶ. ಇಂತಹ ಒಂದು ದೈವಿ ಸ್ವರೂಪವಾದ ನೃತ್ಯ ಕಲೆಯನ್ನು ಮೈಗೂಡಿಸಿಕೊಂಡವರು ಡಾ.

Read More

“ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಶಹನಾಯ್ ನುಡಿಸಿದ್ದು ನಾನೋ ಅವರೋ ಗೊತ್ತಾಗ್ತಾಯಿಲ್ಲ ಅಂದರು, “ಬಿಸ್ಮಿಲ್ಲಾಖಾನ್ “

ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ, ಅವಳ ಮೇಲೆ ಊರಿನ ಸಾಹಿಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ದೇವಾಲಯದಲ್ಲಿ ಮಂಗಳ ಕಾರ್ಯಗಳಲ್ಲಿ ಸನಾದಿ ನುಡಿಸುವದು ಅವನ ಪ್ರೀತಿಯ ಕೆಲಸ, ಈ ಕಾರಣದಿಂದಲೇ ಊರ ತುಂಬ ಆತ ಸನಾದಿ ಅಪ್ಪಣ್ಣ ಎಂದೇ ಹೆಸರುವಾಸಿಯಾಗಿರುತ್ತಾನೆ. ಅವನ ಸನಾದಿಯ ನೀನಾದಕ್ಕೆ ತಲೆದೂಗದವರೇ ಇರುವದಿಲ್ಲ. ಹೀಗಿದ್ದಾಗಲೇ ಅಪ್ಪಣ್ಣನ ಸನಾದಿಯ ನೀನಾದದ ಜೊತೆಯಲ್ಲಿ ನೃತ್ಯ ಮಾಡಬೇಕು ಎಂಬ ಹಿರಿಯಾಸೆ ಬಸಂತಿಗೆ ಬರುತ್ತದೆ. ಆಕೆ ಅದನ್ನೇ

Read More

ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?

ಡಾ.ರಾಜ್‌ಕುಮಾರ್ ಒಬ್ಬ ಅಕ್ಷರಶಃ ‘ದೇವತಾ ಮನುಷ್ಯ’. ಸಿನಿಮಾ ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಆದರ್ಶ ವ್ಯಕ್ತಿ. ಅವರ ಚಿತ್ರಗಳಲ್ಲಿ ಅದೆಂಥ ಪ್ರೀತಿ..? ಅದೆಂಥ ಅದ್ಭುತ ನಟನೆ..? ಅವರು ಹೆಂಡತಿಯನ್ನು ಪ್ರೀತಿಸಿದ ಹಾಗೆ, ಗೌರವಿಸಿದ ಹಾಗೆ ಯಾರಾದರೊಬ್ಬ ಪುರುಷ ಪ್ರೀತಿಸಲು ಸಾಧ್ಯವಾ..? ಇದ್ದರೆ ಅಂಥ ಗಂಡ ಇರಬೇಕಪ್ಪ, ಹೆಂಡತಿಗೆ ಸ್ವಲ್ಪವೂ ಕಷ್ಟ ಕೊಡದಂತ ಆ ಪಾತ್ರಗಳು, ಎಷ್ಟು ಕಷ್ಟ ಪಡ್ತಿಯೇ ನೀನು? ಎಂಥಹಾ ಒಳ್ಳೆ ಮನಸೇ ನಿಂದು..? ಅಷ್ಟೇ ಅಲ್ಲ ಅಪ್ಪ, ಅಮ್ಮ, ಅತ್ತೆ, ಮಾವ, ಇಡೀ ಕುಟುಂಬವನ್ನು

Read More

ಜನರಪ್ರೀತಿಯಲ್ಲಿ ಮಿಂಚಿ ಮೆರೆದ ಸೃಜನಶೀಲತೆಯ ಮಹಾತಾರೆ, ನಮ್ಮ “ಶಂಕರ್ ನಾಗ್ “..!!

ಇವರು ನಿಜಕ್ಕೂ ಅಚ್ಚರಿಯ ಸೂಪರ್‌ಸ್ಟಾರ್. ಸೋಜಿಗವೆಂದರೆ… ವೃತ್ತಿ ಬದುಕಿನಲ್ಲಿ ಎಂದಿಗೂ ಸೂಪರ್‌ಸ್ಟಾರ್ ಆಗಲಿಲ್ಲಾ. ಆದರೆ ಸಾವಿನ ನಂತರ ದಶಕಗಳೇ ಕಳೆದರೂ ಕೂಡ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತು ಈಗಲೂ ಒಬ್ಬ ಸೂಪರ್‌ಸ್ಟಾರ್ ಎಂದೇ ಕರೆಸಿಕೊಂಡಿರುವ ಅನನ್ಯ ಪ್ರತಿಭೆ ಮತ್ತು ಅತ್ಯಂತ ವೈಶಿಷ್ಟಮಯ ವ್ಯಕ್ತಿತ್ವದ ಏಕಮೇವ ಕನ್ನಡದ ಸೂಪರ್ ಸ್ಟಾರ್ ಎಂದರೆ ಅದು ದಿವಗಂತ ಶಂಕರನಾಗ್ ಉರುಫ್ ಶಂಕರಣ್ಣ. ಸಾರ್ವಕಾಲಿಕ ಸರ್ವಶ್ರೇಷ್ಠ ಸೂಪರ್ ಸ್ಟಾರ್‌ಗಳ ಪಟ್ಟಿಯಲ್ಲಿ ನಿಜಕ್ಕೂ ನಮಗೂ ಅಚ್ಚರಿಯಾಗುವಂತೆ ರಾರಾಜಿಸಿದ ಏಕೈಕ ಸೂಪರ್ ಸ್ಟಾರ್ ಎಂದರೆ ನಮ್ಮ

Read More

ಹತ್ತರ ಬಳಿಕ ಅಭ್ಯರ್ಥಿಗಳ ಹಣೆ ಬರಹ….! ಇದೀಗ ಎಲ್ಲರ ಕಣ್ಣು ಶಿರಾ- ಆರ್‌ಆರ್ ನಗರ ಕ್ಷೇತ್ರದತ್ತ ನೆಟ್ಟಿದೆ.

ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ನಿರಾಂತಕವಾಗಿ ಮುಕ್ತಾಯಗೊಂಡಿದೆ ನಿಜ, ಆದರೆ ಫಲಿತಾಂಶ ಏನಾಗುವುದೋ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಕೋವಿಡ್ ಹಾವಳಿಯ ನಡುವೆ ನಡೆಯುತ್ತಿರುವ ಚುನಾವಣೆಯಾಗಿರುವುದರಿಂದ, ಚುನಾವಣಾ ಆಯೋಗ ಸಾಕಷ್ಟು ಮುಂಜಾಗೃತಾಕ್ರಮ ತೆಗೆದುಕೊಂಡಿತ್ತು. ನಡೆದ ಮತದಾನ…!!! ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮತದಾರರನ್ನು ಓಲೈಸಲು ಇನ್ನಿಲ್ಲದ ಕಸರತ್ತನ್ನು ನಡೆಸಿತ್ತು. ಶಿರಾದಲ್ಲಿ ಶೇ. ೮೨.೩೧ ಮತ್ತು ಆರ್.ಆರ್.ನಗರದಲ್ಲಿ ಶೇ.೪೫.೨೪ ಮತದಾನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ತಮ್ಮ

Read More