ಹತ್ತರ ಬಳಿಕ ಅಭ್ಯರ್ಥಿಗಳ ಹಣೆ ಬರಹ….! ಇದೀಗ ಎಲ್ಲರ ಕಣ್ಣು ಶಿರಾ- ಆರ್‌ಆರ್ ನಗರ ಕ್ಷೇತ್ರದತ್ತ ನೆಟ್ಟಿದೆ.

Share

ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ನಿರಾಂತಕವಾಗಿ ಮುಕ್ತಾಯಗೊಂಡಿದೆ ನಿಜ, ಆದರೆ ಫಲಿತಾಂಶ ಏನಾಗುವುದೋ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಕೋವಿಡ್ ಹಾವಳಿಯ ನಡುವೆ ನಡೆಯುತ್ತಿರುವ ಚುನಾವಣೆಯಾಗಿರುವುದರಿಂದ, ಚುನಾವಣಾ ಆಯೋಗ ಸಾಕಷ್ಟು ಮುಂಜಾಗೃತಾಕ್ರಮ ತೆಗೆದುಕೊಂಡಿತ್ತು.

ನಡೆದ ಮತದಾನ…!!!

ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮತದಾರರನ್ನು ಓಲೈಸಲು ಇನ್ನಿಲ್ಲದ ಕಸರತ್ತನ್ನು ನಡೆಸಿತ್ತು. ಶಿರಾದಲ್ಲಿ ಶೇ. ೮೨.೩೧ ಮತ್ತು ಆರ್.ಆರ್.ನಗರದಲ್ಲಿ ಶೇ.೪೫.೨೪ ಮತದಾನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ತಮ್ಮ ಪಕ್ಷಕ್ಕೇ ಗೆಲುವು ಎನ್ನುವ ವಿಶ್ವಾಸದಲ್ಲಿದೆ. ಗಮನಿಸ ಬೇಕಾದ ವಿಚಾರವೆಮದರೆ ಮತದಾರನ ನಾಡಿಮಿಡಿತ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಹತ್ತಕ್ಕೆ ಫಲಿತಾಂಶ…!!!

ನವೆಂಬರ್ ಹತ್ತರಂದು ಮಧ್ಯಾಹ್ನದೊತ್ತಿಗೆ ಫಲಿತಾಂಶ ಹೊರಬೀಳಲಿದೆ. ಈ ನಡುವೆ, ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪಕ್ಷದ ಆಂತರಿಕ ವರದಿಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿಯ ಈ ಆಂತರಿಕ ವರದಿ ಎಷ್ಟರ ಮಟ್ಟಿಗೆ ಕರಾರುವಕ್ಕಾಗಲಿದೆ ಎನ್ನುವುದನ್ನು ತಿಳಿಯಲು ಇನ್ನೊಂದು ವಾರ ಕಾಯಬೇಕಿದೆ.

ರವಿ ಹೇಳಿದ್ದು ಹೀಗೆ: ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಿ.ಟಿ.ರವಿ, ಕರ್ನಾಟಕ ಬಿಜೆಪಿಯ ಭದ್ರಕೋಟೆ. ಇಲ್ಲಿ ನಮ್ಮ ಪಕ್ಷವನ್ನು ಅಲುಗಾಡಿಸಲು ಬಂದವರೇ ಪ್ಯಾಕ್ ಅಪ್ ಆಗಲಿದ್ದಾರೆ. ಸೋತರೆ ಇವಿಎಂ ಸಮಸ್ಯೆ, ಗೆದ್ದರೆ ಜನಾದೇಶ ಇದು ಕಾಂಗ್ರೆಸ್ಸಿನ ಸಂಪ್ರದಾಯ ಎಂದು ಲೇವಡಿ ಮಾಡಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ವಿಜಯಮಾಲೆ ಯಾರಿಗೆ..?

ನಮ್ಮ ಆಂತರಿಕ ವರದಿಯ ಪ್ರಕಾರ ಶಿರಾ ಮತ್ತು ರಾಜರಾಜೇಶ್ವರಿ ನಗರ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಪಕ್ಷಕ್ಕೆ ಬೇಸ್ ಇಲ್ಲದ ಶಿರಾದಲ್ಲೂ ನಾವು ಗೆಲ್ಲಲಿದ್ದೇವೆ. ಬರೀ ಗೆಲುವು ಮಾತ್ರವಲ್ಲ, ದೊಡ್ಡ ಮಟ್ಟದ ವಿಜಯವನ್ನು ನಾವು ಸಾಧಿಸಲಿದ್ದೇವೆ ಎನ್ನುವುದು ಸಿ.ಟಿ.ರವಿ ಅವರ ವಿಶ್ವಾಸ.

ಕಾಂಗ್ರೆಸ್ ಹಳೆ ಚಾಳಿ: ತನ್ನ ಪಕ್ಷ ಗೆಲುವು ಸಾಧಿಸಿದಾಗ ಜನಾದೇಶ ಎನ್ನುವುದು, ಸೋತರೆ, ಚುನಾವಣಾ ಆಯೋಗ, ಇವಿಎಂ ಮೂಲೆ ಗೂಬೆ ಕೂರಿಸುವುದು, ವ್ಯತಿರಿಕ್ತ ಕೋರ್ಟ್ ತೀರ್ಪು ಬಂದರೆ, ನ್ಯಾಯಾಧೀಶರನ್ನು ದೂರುವುದು ಕಾಂಗ್ರೆಸ್ಸಿನ ಹಳೇ ಚಾಳಿ. ಉಪಚುನಾವಣೆಯ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎನ್ನುವ ಆಂತರಿಕ ವರದಿ ಬಂದಿದೆ ಎನ್ನುವುದು ರವಿ ಅಭಿಪ್ರಾಯ.
ಹತ್ತರ ಬಳಿಕವೇ..!: ಆದರೆ ಇಂತಹ ಹೇಳಿಕೆಗೆ ಪರ ವಿರೋಧ ಇದ್ದೇ ಇರುತ್ತದೆ. ಗೆಲುವು ನನ್ನದೇ, ಈ ಬಾರಿ ಗ್ಯಾರೆಂಟಿ ನಮ್ಮ ಪಕ್ಷ ಮುನ್ನಲೆಗೆ ಬರುತ್ತದೆ ಎಂದು ಅಭ್ಯರ್ಥಿಗಳು ಬೀಗುತ್ತಿದ್ದಾರೆ. ಹತ್ತರ ನಂತರವೇ ಎಲ್ಲರ ಹಣೆ ಬರಹ ನಿರ್ಧಾರಾಗಲಿದೆ.
*———-

ಬೈ ಎಲೆಕ್ಷನ್ ಬಳಿಕ ಸಿಎಂ ಸ್ಥಾನ..?!*

ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಭವಿಷ್ಯಕ್ಕೆ ಈ ಎರಡೂ ಉಪಸಮರ ದಿಕ್ಸೂಚಿಯೇ..?
ಒಂದು ಮೂಲದ ಪ್ರಕಾರ ಹೌದು..! ಇನ್ನೊಂದು ಮಾಹಿತಿ ಪ್ರಕಾರ ಇಲ್ಲ.
ನಾಯಕರ ಭವಿಷ್ಯ: ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಉಪಚುನಾವಣೆಯ ಫಲಿತಾಂಶದ ಮೇಲೆ ಹಲವು ಹಿರಿಯ ನಾಯಕರ ಭವಿಷ್ಯ ಅಡಗಿದೆ.
ಸೋಲು ಗೆಲುವು ಲೆಕ್ಕಾಚಾರ: ವಿಶೇಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈ ಚುನಾವಣೆ ನಿರ್ಣಾಯಕವಾಗಿದೆ. ಇದಕ್ಕೆ ಕಾರಣಗಳೂ ನೂರಾರು.
ಶಿರಾ ಮತ್ತು ರಾಜರಾಜೇಶ್ವರಿ ನಗರದ ಚುನಾವಣೆಯ ಫಲಿತಾಂಶ ನೇರವಾಗಿ ಸರಕಾರದ ಆಯುಸ್ಸಿಗೆ ತೊಂದರೆ ತರದಿದ್ದರೂ, ಇದರ ಸೋಲು ಗೆಲುವು ಹಲವು ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಲಿದೆ.
ಸಂಪುಟ ವಿಸ್ತರಣೆ ಸಂಕಟ: ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರ ನೇತೃತ್ವದ ಸರಕಾರಕ್ಕೆ, ಮೊದಲಿನಿಂದಲೂ ಬಿಜೆಪಿ ವರಿಷ್ಠರ ಸಹಕಾರ ಅಷ್ಟಕಷ್ಟೇ. ನೆರೆ ಪರಿಹಾರ, ಸಂಪುಟ ವಿಸ್ತರಣೆ ಸೇರಿದಂತೆ, ಹಲವು ವಿಚಾರದಲ್ಲಿ ಇದು ಸಾಬೀತಾಗಿ ಹೋಗಿದೆ.

ದೆಹಲಿಗೆ ತೆರಳಿದ್ದವರ ಕತೆ:

ಎಚ್.ವಿಶ್ವನಾಥ್ ಹಾಗೂ ಎಂ.ಟಿ.ಬಿ ನಾಗರಾಜ್ ಪರಿಷತ್ತಿಗೆ ಆಯ್ಕೆಯಾದ ಬಳಿಕ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆಗಾಗಿ ದೆಹಲಿಗೆ ತೆರಳಿದ್ದರು. ಅಲ್ಲಿ ಅವರಿಗೆ ನಿರೀಕ್ಷಿತ ಸಹಕಾರ ಬಿಜೆಪಿ ಹೈಕಮಾಂಡ್ ನಿಂದ ಸಿಗಲಿಲ್ಲ.ಇದು ಗಟ್ಟಿನ ವಿಚಾರವಲ್ಲ. ಮುಖ್ಯಮಂತ್ರಿ ಬದಲಾವಣೆ?: ಈ ವಿಷಯ ಎಲ್ಲಾ ಕಡೆ ಜಾರಿಯಲ್ಲಿ ಇರುವುದರಿಂದ, ಉಪಚುನಾವಣೆಯ ಫಲಿತಾಂಶ ಬಿಎಸ್ವೈಗೆ ನಿರ್ಣಾಯಕವಾಗುವ ಸಾಧ್ಯತೆಯಿಲ್ಲದಿಲ್ಲ.
ಬಸನಗೌಡ ಪಾಟೀಲ್‌ಯತ್ನಾಳ್ ಟಾಂಗ್: ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಸಿಎಂಗೆ ತಲೆ ನೋವು ತರಿಸಿದೆ. ಪ್ರತಿ ಪಕ್ಷಗಳು ಈ ವಿಚಾರವನ್ನು ಇಟ್ಟುಕೊಂಡು, ಬಿಜೆಪಿ ವಿರುದ್ದ ಪ್ರಚಾರ ಮಾಡಲು ಆರಂಭಿಸಿವೆ.
ಪ್ರತಿ ಪಕ್ಷಗಳೂ ಶುರು ಮಾಡಿವೆ: ಯತ್ನಾಳ್ ಹೇಳಿಕೆ ನೀಡುತ್ತಿದ್ದರೂ, ಅದನ್ನು ತಡೆಯುವ ಕೆಲಸಕ್ಕೆ ಬಿಜೆಪಿ ಮುಖಂಡರು ಮುಂದಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಕೂಡಾ ಆರೋಪಿಸಿದ್ದರು. ಮುನಿರತ್ನ ಅವರನ್ನು ಆಯ್ಕೆಮಾಡಲು ಯಡಿಯೂರಪ್ಪ ಬಹಳ ಸಾಹಸ ಎರಡು ಉಪಚುನಾವಣೆಯ ಫಲಿತಾಂಶ, ಪ್ರಮುಖವಾಗಿ ಯಡಿಯೂರಪ್ಪನವರಿಗೆ ಮಹತ್ವದ್ದು.

ಎರಡೂ ಕ್ಷೇತ್ರಗಳು ಮುಖ್ಯ:

ಎರಡರಲ್ಲಿ ಒಂದು ಕ್ಷೇತ್ರ ಆಪರೇಶನ್ ಕಮಲಕ್ಕೆ ಒಳಗಾಗಿದ್ದು. ರಾಜರಾಜೇಶ್ವರಿ ನಗರ ಸೀಟಿಗೆ ಅಭ್ಯರ್ಥಿಯನ್ನಾಗಿ ಮುನಿರತ್ನ ಅವರನ್ನು ಆಯ್ಕೆಮಾಡಲು ಯಡಿಯೂರಪ್ಪ ಬಹಳ ಸಾಹಸ ಪಟ್ಟಿದ್ದರು. ಯಾಕೆಂದರೆ, ರಾಜ್ಯಾಧ್ಯಕ್ಷರ ಆಯ್ಕೆ ಇನ್ನೊಂದಾಗಿತ್ತು. ಯಡಿಯೂರಪ್ಪ, ರಾಜ್ಯ ಬಿಜೆಪಿಗೆ ಎಷ್ಟು ಮುಖ್ಯಎರಡೂ ಕ್ಷೇತ್ರವನ್ನು ಬಿಜೆಪಿ ಗೆದ್ದಿದ್ದೇ ಆದಲ್ಲಿ, ಯಡಿಯೂರಪ್ಪ, ರಾಜ್ಯ ಬಿಜೆಪಿಗೆ ಎಷ್ಟು ಮುಖ್ಯ ಎನ್ನುವುದನ್ನು ಮತ್ತೆಮತ್ತೆ ಸಾರುವಂತೆ ಮಾಡುವುದಂತೂ ಹೌದು. ಜೊತೆಗೆ, ವರಿಷ್ಠರ ಮಟ್ಟದಲ್ಲಿ ಮತ್ತೆ ತನ್ನ ಖದರ್ ಅನ್ನು ಬಿಎಸ್ವೈ ತೋರಬಹುದು. ಹಾಗೆಯೇ, ಸಂಪುಟ ವಿಸ್ತರಣೆ ಸೇರಿದಂತೆ, ಹಲವು ಕೆಲಸಗಳು ಮುಂದಿನ ದಿನಗಳಲ್ಲಿ ಸಲೀಸಾಗಿ ನಡೆಯಬಹುದು.

Leave a Comment