`ಚೋರ್ ನಿಕಲ್ ಕೆ ಬಾಗಾ ?’

Share

ಬಹುಭಾಷಾ ಕಲಾವಿದೆ, ಬಾಲಿವುಡ್ ಚಿತ್ರರಂಗದ ಬೇಡಿಕೆಯ ನಟಿ. ಈಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸ್ಯಾಂಡಲ್‌ವುಡ್ ಮೂಲಕ. ಬ್ಯೂಟಿ ಗ್ಲಾಮರಸ್ ಹಾಗೂ ಅಭಿನಯದ ಮೂಲಕ ಸಿನಿರಂಗದ ಅಭಿಮಾನಿಗಳ ಹೃದಯ ಕದ್ದ ಚೋರಿ. ಈಕೆಯ ಸಿನಿಯಾರಂಗದ ತವರುಮನೆ ಸ್ಯಾಂಡಲ್‌ವುಡ್, ಅವರು ಅಭಿನಯಿಸಿದ ಕನ್ನಡದ ಚಿತ್ರವಾದರೂ ಯಾವುದು? ಆ ಚೋರಿಯಾದರೂ ಯಾರು? ಅವಳೆ ಒನ್ ಅಂಡ್ ಓನ್ಲಿ ಯಾಮಿ ಗೌತಮ್.


ಹೌದು ಕನ್ನಡ ಸಿನಿರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಚೆಲುವೆ ಯಾಮಿ ಗೌತಮ್. ಇವರು ಉಲ್ಲಾಸ ಉತ್ಸಾಹ’ ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಗ್ರಾö್ಯಂಡ್ ಎಂಟ್ರಿ ಕೊಟ್ಟರು. ಬಾಲಿವುಡ್‌ನಲ್ಲಿ ವಿಕ್ಕಿ ಡೋನರ್, ಕಾಬಿಲ್,ಉರಿ’ಚಿತ್ರವೂ ಯಾಮಿ ಗೌತಮಿಯ ಪ್ರತಿಭೆಗೆ ಸಾಕ್ಷಿಯಾಗಿದೆ. ಪ್ರಸ್ತುತ ಈಕೆಯು ಸನ್ನಿ ಕುಶಾಲ್ ಜೊತೆ ನಟಿಸುತ್ತಿರುವ `ಚೋರ್ ನಿಕಲ್ ಕೆ ಬಾಗಾ’ ಎಂಬ ಚಿತದಲ್ಲಿ ನಟಿಸಿದ್ದು, ಮಾರ್ಚ್ ೨೪ರಂದು ನೆಟ್‌ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಿರ್ದೇಶನವನ್ನು ಅಜಯ್ ಸಿಂಗ್ ಮತ್ತು ನಿರ್ಮಾಣವನ್ನು ಅಮರ್ ಕೌಶಿಕ್ ವಹಿಸಿದ್ದಾರೆ.

ನಮ್ಮ ಸೂಪರ್‌ಸ್ಟಾರ್ ನಡೆಸಿದ ಯಾಮಿ ಗೌತಮಿಯೊಂದಿಗೆ ನಡೆಸಿದ ಸಂದರ್ಶನದ ಸಾರಾಂಶ:

ನ.ಸೂ: ನಿಮ್ಮ ಸಿನಿ ಪಯಣ ಆರಂಭವಾಗಿ ಹೆಚ್ಚು ಕಮ್ಮಿ ದಶಕಗಳೇ ಕಳದಿದೆ. ಈ ಬಗ್ಗೆ ಏನನಿಸುತ್ತೆ?
ಯಾಮಿ ಗೌತಮ್: ವಿಕಿ ಡೋನರ್’ ಎಂಬ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಣ. ಆದರೆ, ಅದಕ್ಕೆ ಕಾರಣ ನನ್ನ ಪ್ರತಿಭೆಯನ್ನು ಗುರುತಿಸಿದ ಕನ್ನಡ ಚಿತ್ರರಂಗ. ಅಲ್ಲಿಂದ ನನ್ನ ಸಿನಿ ಜರ್ನಿ ‘ ಚೋರ್ ನಿಕಲ್ ಕೆ ಬಾಗಾ’ ತನಕ ನ.ಸೂ. ಮೊದಲ ಸಿನಿಮಾದ ಅನುಭವ ಹೇಗಿತು? ಯಾಮಿ ಗೌತಮ್:ಉಲ್ಲಾಸ ಉತ್ಸಾಹ’ ಚಿತ್ರದಿಂದ ತನ್ನಲ್ಲಿರುವ ಅಧಮ್ಯ ಪ್ರತಿಭೆಯನ್ನು ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ತಾನು ಸಿನಿಮಾ ನಟಿಯಾಗಬೇಕೆಂಬ ಅಚಲ ನಿರ್ಧಾರಕ್ಕೆ ಪ್ರೇರಣೆ ಆಯಿತು.


ನ.ಸೂ: ಆಫ್ ಬೀಟ್ ಸಿನಿಮಾಗಳನ್ನೇ ಹೆಚ್ಚು ಒಪ್ಪಿಕೊಂಡಿದ್ದೀರಿ ಅನಿಸುವುದಿಲ್ಲವೇ?
ಯಾಮಿ ಗೌತಮ್: ಆಫ್ ಬೀಟ್ ಸಿನಿಮಾಗಳ ಪ್ರಶ್ನೆಯೇ ಇಲ್ಲ. ಪ್ರೇಕ್ಷಕರು ಭಿನ್ನ ಅಭಿರುಚಿಯ ಸಿನಿಮಾಗಳನ್ನು ನೋಡುವುದಕ್ಕೆ ಬಯಸುವುದರಿಂದ ಆಫ್ ಬೀಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ.


ನ.ಸೂ: ನಿಮ್ಮ ಕ್ಯೂಟ್ ಸ್ಮೆöÊಲ್ ಸೀಕ್ರೇಟ್ ಏನು?
ಯಾಮಿ ಗೌತಮ್: ಗಾಡ್ ಗಿಫ್ಟ್(ಕ್ಯೂಟ್ ಸ್ಮೆöÊಲ್). ವೈಯಕ್ತಿಕವಾಗಿ ನಾನು ತುಂಬಾ ಕ್ಯಾಶುಯಲ್ ಆಗಿ ಇರುತ್ತೇನೆ. ಯೋಗ ಹಾಗೂ ಮಾನಸಿಕ ಉಲ್ಲಾಸದಿಂದ ಇರುವುದೇ ಬಹುಶಃ ನನ್ನ ಕ್ಯೂಟ್ ಸ್ಮೆöÊಲ್‌ನ ಸೀಕ್ರೇಟ್ ಇರಬಹುದೇನು.


ನ.ಸೂ: `ಚೂರ್ ನಿಕಲ್ ಕೆ ಬಾಗಾ’ ದ ಬಗ್ಗೆ ಹೇಳುವುದಾದರೆ?
ಯಾಮಿ ಗೌತಮ್: ಇದೊಂತರ ಥ್ರಿಲಂಗ್ ಕಥಾ ಹಂದರದ ಚಿತ್ರ. ನಾನು ಎರ್ ಹಾಸ್ಟಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಮೇಕಿಂಗ್ ಅದ್ಭುತವಾಗಿ ಮೂಡಿ ಬಂದಿದೆ. ಈ ಚಿತ್ರ ಮಾರ್ಚ್ ೨೪ರಂದು ಓಟಿಟಿ ಫ್ಲಾಟ್‌ಫಾರ್ಮ್ ನೆಟ್‌ಫ್ಲೇಕ್ಸ್ನಲ್ಲಿ ಬಿಡುಗಡೆಯಾಗುತ್ತ ಇದೆ.


ಇವಿಷ್ಟು ನಮ್ಮ ಸೂಪರ್‌ಸ್ಟಾರ್ ಯಾಮಿ ಗೌತಮ್ ಜೊತೆ ನಡೆಸಿದ ಸಂದರ್ಶನ.
ಆಲ್ ದಿ ಬೆಸ್ಟ್ ಯಾಮಿ

Leave a Comment