ಪ್ರೇಕ್ಷಕರ ಮನಗೆದ್ದ “ಗೌಳಿ”

Share

ಪಕ್ಕಾ ಕಲ್ಟ್ ಮತ್ತು ಮಾಸ್ ಕಥಾ ಹಂದರದ ಸಿನಿಮಾ ಅದು ಗೌಳಿ. ಮನರಂಜನೆ ಜೊತೆ, ರೋಮಾಂಚಕಾರಿ ಸನ್ನಿವೇಶಗಳಿಂದ ಮನಗೆಲ್ಲುವ ಚಿತ್ರ.. ಅಕ್ಷರಶ: ಪ್ರೇಕ್ಷಕರೇ ಇಲ್ಲಿ ಕಲಾವಿದರಾಗ್ತಾರೆ. ಅಂಥಾ ಘಟನೆಗಳಿಂದ ರೆಪ್ಪೆ ಮಿಟುಕಿಸದಂತೆ, ನೋಡಿಸಿಕೊಂಡು ಸಾಗುವ ಚಿತ್ರ ಗೌಳಿ. ಶ್ರೀನಗರ ಕಿಟ್ಟಿ ಹಾಗೂ ಪಾವನ ಗೌಡ ರವರ ಅಮೋಘ ಅಭಿನಯದ ಈ ಚಿತ್ರ ಸೋಹನ್ ಫಿಲ್ಮ್ ಫ್ಯಾಕ್ಟರಿಯಡಿ ನಿರ್ಮಾಣಗೊಂಡಿದೆ.

ಚಿತ್ರೀಕರಣದ ಮೊದಲೇ ಇಡೀ ಚಿತ್ರದ ಕಥೆಯಿಂದ ರೋಮಾಂಚನಗೊಂಡ ನಿರ್ಮಾಪಕ ರಘು ಸಿಂಗಂ ತತ್‌ಕ್ಷಣ ಈ ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾದ್ರು. ಅದಕ್ಕೆ ತಕ್ಕ ಪ್ರತಿಫಲವೇ ಈ ಚಿತ್ರದ ಯಶಸ್ಸು.

ಶ್ರೀನಗರ ಕಿಟ್ಟಿಗೆ ತೆರೆಯ ಜೋಡಿಯಾಗಿ ಪಾವನ ಗೌಡ ಅಭಿನಯಿಸಿದ್ದು.. ಕಾಂಪಿಟೇಶನ್ ಮೇಲೆ ಕಾಂಪಿಟೇಶನ್ ಎನ್ನುವಂತೆ ನಟಿಸಿದ್ದು.. ಅಚ್ಚರಿ.. ಸಿನಿಮಾದ ತೀವ್ರತೆ ಎಷ್ಟಂದ್ರೆ.. ಪ್ರೇಕ್ಷಕನೇ ಆ ಸಿನಿಮಾದ ಒಂದು ಭಾಗವಾಗಿ ಅಲ್ಲಿ ನಡೆಯುವ ಘಟನೆ ತನ್ನದೇ ಎಂಬಂತೆ ಭಾವಿಸುತ್ತಾನೆ. ಅಷ್ಟರ ಮಟ್ಟಿಗೆ ಇದು ನೈಜತೆಯಿಂದ ಕೂಡಿದೆ..

ಕನ್ನಡದ ಬೆಳ್ಳಿತೆರೆ ಮೇಲೆ ಗೌಳಿ ಸದ್ದು ಜೋರಾಗಿ ಸಾಗಿದೆ. ಕನ್ನಡ ಚಿತ್ರರಂಗಕ್ಕೆ “ಗೌಳಿ” ಒಂದು ಅದ್ಭುತ ಚಿತ್ರವಾಗಿದ್ದು, ಸಿನಿರಸಿಕರಿಗೆ ಹಬ್ಬದೂಟ ಗ್ಯಾರಂಟಿ. !!

ಗೌಳಿ ಹಾಗೂ ಗಿರಿಜ ಅದ್ಭುತ ಅಭಿನಯ

“ಗೌಳಿ”, ಹಾಗೂ “ಗಿರಿಜ”….ಪಾತ್ರಗಳಲ್ಲಿ ಮಿಂಚಿರುವ ಶ್ರೀನಗರಕಿಟ್ಟಿ ಹಾಗೂ ಪಾವನ ಗೌಡ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬ ಕಲಾವಿದರು ಕೂಡ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ..!!!!

ಆಲ್ ದ ಬೆಸ್ಟ್

ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರವನ್ನು ನೀಡಿದ ನಿರ್ಮಾಪಕ ರಘುಸಿಂಗಂ ಹಾಗೂ ಭರವಸೆಯ ನಿರ್ದೇಶಕ ಸೂರ ರವರಿಗೆ “ನಮ್ಮ ಸೂಪರ್ ಸ್ಟಾರ್ಸ್ ” ತಂಡದಿಂದ ಅಭಿನಂದನೆಗಳು ..!!

Leave a Comment