ಗ್ಲಾಮರಸ್ ಸನಿಹಾ ಯಾದವ್

Share

ಬೋಲ್ಡ್ ಪಾತ್ರಕ್ಕೂ ಸೈ…… ಕಾಮಿಡಿ ಪಾತ್ರಕ್ಕೂ ಸೈ.. ರೋಮಾಂಟಿಕ್ ಅಂಡ್ ಸೆಂಟಿಮAಟ್ ಪಾತ್ರಕ್ಕೂ ಸನಿಹ ಇವ್ರು.. ಮಾಡಲಿಂಗ್ ಲೋಕದ ಗ್ಲಾಮರಸ್ ಬೆಡಗಿ ಅವಳೇ… ಸನಿಹಾ ಯಾದವ್…


ಸನಿಹಾಗೆ ಕನ್ನಡ ಚಿತ್ರ ಸನಿಹವಾದದ್ದು. ಹಿರಿಯ ನಿರ್ದೇಶಕರಾದ ದಿನೇಶ್ ಬಾಬುರವರ `ಹಗಲು ಕನಸು’ ಚಿತ್ರದ ಮೂಲಕ ಸನಿಹಾ ಪ್ರತಿಭೆಯ ಛಾಪನ್ನು ಮೂಡಿಸಿದ್ರು… ಮಾಡಲಿಂಗ್‌ನಲ್ಲಿ ವೈಯ್ಯಾರದ ಬೆಡಗಿ… ಸಿನಿಮಾ ರಂಗದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಉಳಿಸಿಕೊಂಡಿದ್ದಾರೆ.

ನಮ್ಮ ಸೂಪರ್‌ಸ್ಟಾರ್ ಜೊತೆ.. ಮಾತಿಗಿಳಿದ ಸನಿಹಾ.. ನಡೆದು ಬಂದ ದಾರಿಯ ಮೆಲುಕು ಹಾಕಿದ್ರು..
ನ.ಸೂ: ಮಾಡಲಿಂಗ್ ಮತ್ತು ಸಿನಿಮಾ ಈ ಎರಡನ್ನು ಆಯ್ಕೆ ಮಾಡಿರುವ ಹಿಂದಿನ ಉದ್ದೇಶ?
ಸನಿಹಾ: ಉದ್ದೇಶ ಅಂತ ಏನೋ ಇಲ್ಲ. ಮಾಡಲಿಂಗ್ ಆಕಸ್ಮಿಕವಾಗಿ ಒದಗಿ ಬಂದ ಅದೃಷ್ಟ. ಅದರ ಜೊತೆಜೊತೆಗೆ ಸಿನಿಮಾದ ಪರಿಚಯವೋ ಆಯಿತು.


ನ.ಸೂ: ಮಾಡಲಿಂಗ್ ಬಗ್ಗೆ ನಿಮ್ಮ ಪೂರ್ವ ತಯಾರಿ ಹೇಗಿತ್ತು?
ಸನಿಹಾ: ತಯಾರಿ ಎಂದು ಹೇಳುವುದಕ್ಕಿಂತ ಅದೊಂದು ರೋಚಕ ಘಟನೆ ಎಂದು ಹೇಳ ಬಯಸುತ್ತೇನೆ. ಅದೊಂದು ದಿನ ಮಿಸ್ ಟೂರಿಸಂ ವರ್ಲ್ಡ್ ವೈಯ್ಡ್-೨೦೧೮ರ ಸ್ಪರ್ಧೆ. ಅಂದು ೨೨ ದೇಶಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಆಗ ನಾನು ಭಾರತವನ್ನು ಪ್ರತಿನಿಧಿಸುತ್ತಿದ್ದೆ. ಆಗ ಒಬ್ಬ ಸ್ಪರ್ಧಿಗೆ ಅನಾರೋಗ್ಯ ಉಂಟಾಯಿತು. ಆಗ ದಿನವಿಡಿ ಅವರ ಶಶ್ರೂಷೆಯಲ್ಲಿ ತೊಡಗಿದೆ. ಇದನ್ನು ಪರಿಗಣಿಸಿ ನನಗೆ ಮಿಸ್ ಕಂಜಿನಿಯಾಲಿಟಿ ಪ್ರಶಸ್ತಿಯನ್ನು ನೀಡಿದರು. ಬಹುಶಃ ಇದು ನನ್ನ ಅದೃಷ್ಟದ ಮೊದಲ ಹೆಜ್ಜೆ.


ನ.ಸೂ: ಸಿನಿರಂಗದ ಪ್ರಯಣ ಹೇಗೆ ಶುರುವಾಯ್ತು…
ಸನಿಹಾ: ನನ್ನ ಬಾಲ್ಯದ ದಿನಗಳಲ್ಲಿ ನಾಟಕ ಮತ್ತು ನೃತ್ಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದೆ. ರಂಗಶAಕರದಲ್ಲಿ ರೋಮಿಯೋ ಜೂಲಿಯಟ್ ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದೆ. ಇದು ನನ್ನ ಸಿನಿಪಯಣಕ್ಕೆ ದಾರಿಯನ್ನು ತೋರಿಸಿತು.

ನ.ಸೂ: ನೀವು ಯಾವ ಪಾತ್ರವನ್ನು ಹೆಚ್ಚು ಇಷ್ಟ ಪಡುತ್ತೀರ?
ಸನಿಹಾ: ಇಂತದ್ದೆ ಪಾತ್ರ ಅಂತ ಏನೋ ಇಲ್ಲ. ಕಥೆಗೆ ತಕ್ಕದಾದಂತಹ ಪಾತ್ರ ಇದ್ದರೆ ಮಾಸ್ ಪಾತ್ರಕ್ಕೂ ಸೈ.. ಕ್ಲಾಸ್ ಪಾತ್ರಕ್ಕೂ ಸೈ..ಹಾಗೂ ಬೋಲ್ಡ್ ಪಾತ್ರಕ್ಕೂ ಸೈ.
ಥ್ಯಾಂಕ್ ಯು ಆಲ್ ದ ಬೆಸ್ಟ್…

Leave a Comment