ಶಾನ್ವಿಯ ಸಿಂಪ್ಲಿಸಿಟಿ

Share

ಬ್ಯಾOಕ್‌ನಲ್ಲಿ ಉದ್ಯೋಗಕ್ಕೆ ಸರ‍್ಕೂಳ್ಳಬೇಕು ಅಂತಾ ಗುರಿಯಿದ್ದ ಈಕೆಗೆ ಒಲಿದಿದ್ದು ಚಿತ್ರರಂಗ.. ಪಾಲಿಗೆ ಬಂದದ್ದು ಪಂಚಾಮೃತ. ಅಕ್ಕನ ಒತ್ತಾಯಕ್ಕೆ ಸಿನಿಮಾ ರಂಗ ಪ್ರವೇಶಿಸಿದ ಈಕೆ ಸೆಲೆಬ್ರಿಟಿಯಾಗಿ ಬೆಳೆದಿದ್ದು ಈಗ ಇತಿಹಾಸ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಶಾನ್ವಿ ಶ್ರೀವಾಸ್ತವ್ ತಮ್ಮ ಪ್ರತಿಭೆಯ ಮೂಲಕ ಗುರುತಿಸಿಕೊಂಡಿದ್ದಾರೆ.
ನಮ್ಮ ಸೂಪರ್‌ಸ್ಟಾರ್ ಜೊತೆ ಮಾತಿಗಿಳಿದ ಶಾನ್ವಿ.. ಅಚ್ಚರಿಯ ಸಂಗತಿಗಳನ್ನೆ ಹೇಳಿದ್ರು.. ಅವರು ಹೇಳಿದ ಸಂಗತಿಗಳ ಸಾರಾಂಶ:

ನನಗೆ ಸಿನಿಮಾದ ಗಂಧ ಗಾಳಿ ಗೊತ್ತೆ ರ‍್ಲಿಲ್ಲ. ನನ್ನ ಗುರಿ ಇದ್ದದ್ದು ಬ್ಯಾಂಕ್ ಪರೀಕ್ಷೆ ಪಾಸ್ ಮಾಡಿ ನೌಕರಿ ಮಾಡ್ಬೇಕು ಅಂತಾ. ಆದ್ರೆ ಆದದ್ದು ನಟಿ.. ಅದೂ ನನ್ನ ಅಕ್ಕನ ಒತ್ತಾಸೆಗೆ ಗಂಟು ಬಿದ್ದು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟೆ.
ನಾನು ಹಿರೋಯಿನ್ ಅನ್ನೋದು ಮನೆಯಿಂದಾಚೆಗೆ ಮಾತ್ರ. ಮನೆಯಲ್ಲಿ ನನಗೆ ಏನೂ ವಿನಾಯಿತಿ ಇಲ್ಲ !! ಶೂಟಿಂಗ್ ಮುಗಿಸಿಕೊಂಡು ಮನೆಗೆ ಹೋದರೆ ಅಮ್ಮ ಮನೆ ಕೆಲಸ ಮಾಡೋ ಡ್ಯೂಟಿಗೆ ಹಾಕ್ತಾರೆ. ಅಯ್ಯೋ ನಾನು ಹೀರೋಯಿನ್ ಕಣಮ್ಮ ಅಂತದ್ರೆ.. ಅದೆಲ್ಲ ಆಚೆಗಿಟ್ಕೂ ಅಂತ ಗದರಿಸುತ್ತಾರೆ ಅಮ್ಮ ಅಂತ ನಕ್ಕಿದ್ಲು ಶಾನ್ವಿ.


ಆಶ್ಚರ್ಯಕರ ಸಂಗತಿ ಏನಂದರೆ ಸಿನಿಮಾದಲ್ಲಿ ಅವಕಾಶಕ್ಕಾಗಿ ಎಷ್ಟೆಲ್ಲ ಕಷ್ಟ ಪಡ್ತಾರೆ ಅಲ್ವಾ. ಆದರೆ ನನ್ನ ಪಾಲಿಗೆ ಅವಕಾಶ ನಿರಾಯಾಸವಾಗಿ ಒಲಿಯಿತು. ಅಷ್ಟಕ್ಕೂ, ಸಿನಿಮಾ ಹೇಗೆ ತಯಾರಾಗುತ್ತೆ… ಕ್ಯಾಮರಾ ಹೇಗೆ ಇರುತ್ತೆ ಅನ್ನೋದರ ಪರಿಜ್ಞಾನ ಇರಲಿಲ್ಲ. ನಿಧಾನವಾಗಿ ಎಲ್ಲವನ್ನು ಕಲಿಯುತ್ತಾ ಬಂದೆ. ಇಂದಿಗೂ ನಾನು ಸಿನಿಮಾ ವಿದ್ಯಾರ್ಥಿನಿ, ನಿರ್ದೇಶಕರೇ ನನ್ನ ಪಾಲಿನ ಲೆಕ್ಚರರ್.. ಅನ್ನೋದು ಶ್ವಾನಿ ಅನಿಸಿಕೆ.

ರಾಮ್‌ಗೋಪಾಲ್ ವರ್ಮಾ ಜೊತೆ ಕೆಲಸದ ಅನುಭವವನ್ನು ಹಂಚಿಕೊ0ಡ ಶಾನ್ವಿ.. ಆಕ್ಟಿಂಗ್ ತೆಗೆಸುವುದರಲ್ಲಿ ರಾಮ್‌ಗೋಪಾಲ್ ವರ್ಮಾ ನಿಸ್ಸಿಮರು. ಅವರ ಟೀಮ್‌ನಲ್ಲಿ ಕೆಲಸ ಮಾಡೋದೆ ಒಂದು ಚಾಲೆಂಜಿAಗ್. ಟೇಕ್‌ನಲ್ಲಿ ಅವರು ಎಲ್ಲೆಲ್ಲಿ ಕ್ಯಾಮರಾ ಇಟ್ಟರ‍್ತಾರೆ ಅಂತಾ ಗೊತ್ತಾಗೋದೆ ಇಲ್ಲ. ಕೆಲವೊಮ್ಮೆ ಮಾನಿಟರ್ ಶಾಟ್‌ಗಳನ್ನೇ ಓಕೆ ಮಾಡಿ ಬಿಡ್ತಾರೆ ಅಂತ ಅಚ್ಚರಿ ವ್ಯಕ್ತಪಡಸಿದ್ರ‍್ರು ಶಾನ್ವಿ.
ತಮ್ಮ ವೈಯಕ್ತಿಕ ಹವ್ಯಾಸದ ಕುರಿತು ಮಾತನಾಡಿದ ಶಾನ್ವಿ, …ಥರಾವರಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದು ನನ್ನ ಹವ್ಯಾಸ. ಈ ವಿಚಾರದಲ್ಲಿ ನಾನು ಎಷ್ಟು ಕ್ರೇಜಿ ಅಂದ್ರೆ.. ಅಳುವಾಗ್ಲೂ ಸೆಲ್ಫಿ ತಗೋತಿನಿ..! ಆಮೇಲೆ ಯಾವಾಗ್ಲೋ ಒಮ್ಮೆ ಈ ಸೆಲ್ಫಿ ನೋಡಿ..ಎಷ್ಟೊಂದ್ ಚೆನ್ನಾಗಿ ಅಳ್ತಾ ಇದ್ನಲ್ಲ ಅಂತ ನಗ್ತೀನಿ.. ಅಂತಾ ನಕ್ಕಿದ್ಲು ಶಾನ್ವಿ. ಹಾಗೆ ನನಗೆ ಚಾಕಲೇಟ್ ಅಂದ್ರೆ ತುಂಬಾ ಇಷ್ಟ. ಗುಲಾಬ್ ಜಮಾನ್ ಅಂದ್ರೆ ಪಂಚಪ್ರಾಣ. ಮೂಲತಃ ನಾನು ಕ್ರೀಡಾಪಟು. ನನಗೆ ಸ್ಪೋರ್ಟ್ಸ್ ನಲ್ಲಿ ಆಸಕ್ತಿ ಜಾಸ್ತಿ. ಅದರಲ್ಲೂ ವಿಶೇಷವಾಗಿ ಬ್ಯಾಟ್‌ಮಿಂಟನ್ ಅಂದ್ರೆ ಇಷ್ಟ. ಪ್ರವಾಸ ನನ್ನ ನೆಚ್ಚಿನ ಹವ್ಯಾಸ.
ಇವಿಷ್ಟೂ ಶಾನ್ವಿ ಜೊತೆ ನಡೆಸಿದ ಸಂಕ್ಷೀಪ್ತ ಮಾತುಕತೆ.
ಶಾನ್ವಿ ಸಿಂಪ್ಲಿಸಿಟಿಗೆ ನಮ್ಮ ಸೂಪರ್‌ಸ್ಟಾರ್ ತಂಡದಿ0ದ ಆಲ್ ದ ಬೆಸ್ಟ್…

Leave a Comment