‘ರೆಡ್‌ರಮ್’ಚಾಲೆಂಜಿ0ಗ್ ಪಾತ್ರದಲ್ಲಿ ಮಧುರ ಗೌಡ

Share

ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರೋ ಕಾಲಘಟ್ಟದಲ್ಲಿ ಮತ್ತೊಂದು ರೋಚಕ ಕಥಾ ಹಂದರದ `ರೆಡ್‌ರಮ್’ ಚಿತ್ರ ಸೇರ್ಪಡೆಯಾಗುತ್ತಿದೆ.
ಕೌಟಿಲ್ಯ ಸಿನಿಮಾ ಹಾಗೂ ಎಚ್‌ಸಿ ಫಿಲ್ಮ್÷್ಸ ಲಾಂಛನದಲ್ಲಿ ಅಶೋಕ್ ದೇವನಾಂಪ್ರಿಯ, ಮೋಹನ್ ಮತ್ತು ಹನಿ ಚೌಧರಿ ನಿರ್ಮಾಣದ ಈ ಚಿತ್ರವೂ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.

ಕೂರ್ಗಿ ಚೆಲುವೆ, ಅಭಿನಯ ಚತುರೆ ಮಧುರ ಗೌಡ ಈ ಚಿತ್ರದ ನಾಯಕಿ. ದುಂಡು ಮುಖದ ಮುದ್ದು ಮುದ್ದಾದ ಬೆಡಗಿ. ಮಧುರ ಮಾಡಲಿಂಗ್ ಹಾಗೂ ನಟನಾ ತರಬೇತಿಯನ್ನು ಪಡೆದು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಧುರ ತನ್ನ ಅಭಿನಯದ ಪ್ರತಿಭೆಯನ್ನು ಮೊದಲ ಚಿತ್ರ ರೆಡ್‌ರಮ್‌ನಲ್ಲಿ ಸಾಬೀತು ಪಡಿಸಿದ್ದಾರೆ. ಯಾವ ಅನುಭವಿ ನಾಯಕಿಗೂ ಕಡಿಮೆಯಿಲ್ಲದೆ ಅಭಿನಯಿಸುವ ನಟನಾ ಕೌಶಲ್ಯ ಮಧುರಳಿಗಿದೆ ಎಂದು ರೆಡ್‌ರೆಮ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ಸೂಪರ್‌ಸ್ಟಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಸೆಟ್‌ನಲ್ಲೂ ಸಹ ತುಂಬಾ ಸಿಂಪಲ್ಲಾಗಿ ಹೇಳಿದ ಪಾತ್ರವನ್ನು ಗ್ರಹಿಸಿ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಅಭಿನಯಿಸುವ ಕೌಶಲ್ಯ ಮಧುರಳಿಗಿದೆ ಎಂದರು.
ಕ್ರೆöÊಮ್ ಥ್ರಿಲ್ಲರ್ ಕಥೆ ಒಂದು ರೋಚಕ ಕತೆಯನ್ನು ಸೃಷ್ಟಿ ಮಾಡುತ್ತದೆ. ಸಿನಿಜಗತ್ತಿನಲ್ಲಿ ಹಿಂದೆ0ದೂ ಬಂದಿರದ0ತಹ ಪಾತ್ರ ನಿರ್ವಹಿಸಿದ್ದೇನೆ. ಮುಂದಿನ ಚಿತ್ರದಲ್ಲಿ ಹೆಸರಾಂತ ಸ್ಟಾರ್‌ನೊಂದಿಗೆ ಅಭಿನಯಿಸುತ್ತಿದ್ದೇನೆ ಎಂದರು.

ಈ ಚಿತ್ರವನ್ನು ಪ್ರಮೋದ್ ಜೋಯಿಸ್ ನಿರ್ದೇಶಿಸಿದ್ದು, ಚೇತನ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.
ನಮ್ಮ ಸೂಪರ್‌ಸ್ಟಾರ್‌ನಿಂದ `ರೆಡ್‌ರಮ್’ ಚಿತ್ರ ತಂಡಕ್ಕೆ ಆಲ್ ದ ಬೆಸ್ಟ್..

Leave a Comment