” ಛತ್ರಿವಾಲಿ ” ಚಿತ್ರದಲ್ಲಿ ಕಾಂಡೋಮ್” ಹಿಡಿದು ಬಂದ ನಟಿ ರಾಕುಲ್ ಪ್ರೀತ್ ಸಿಂಗ್…!

Share

ಬಾಲಿವುಡ್ ನ ಬಹುಬೇಡಿಕೆಯ ನಟಿ ರಾಕುಲ್ ಪ್ರೀತ್ ಸಿಂಗ್ ಈಗಾಗಲೇ ಹಲವಾರು ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿದ್ದು, ತಮ್ಮ ಮುಂಬರುವ ಸಿನಿಮಾ” “ಛತ್ರಿವಾಲಿ” ಚಿತ್ರದ ಫಸ್ಟ್ ಲುಕ್ ನಲ್ಲಿ “ಕಾಂಡೋಮ್” ಹಿಡಿದುಕೊಂಡು ಬರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಛತ್ರಿವಾಲಿ ಸಿನಿಮಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಕಾಂಡೋಮ್ ಪರೀಕ್ಷೆ ಮಾಡುವ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿ ಪ್ರಿಯರಿಗೆ ಅಚ್ಚರಿ ಹುಟ್ಟಿಸಿದ್ದಾರೆ.

ಛತ್ರಿವಾಲಿ ಸಿನಿಮಾ ಸಾಮಾಜಿಕ ಕೌಟುಂಬಿಕ ಕಾಮಿಡಿ ಸಿನಿಮಾವಾಗಿದೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ಯುವತಿಯಾಗಿ ರಕುಲ್, ತನಗೆ ಕೆಲಸವಿಲ್ಲದೇ ನಿರಾಸೆಗೊಳಗಾದಾಗ ಕರ್ನಲ್ ಎಂಬ ಪುಟ್ಟ ಊರಿನಲ್ಲಿ ಕಾಂಡೋಮ್ ಪರೀಕ್ಷೆ ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾಳೆ. ಕಾಂಡೋಮ್ ಪರೀಕ್ಷಳಾಗಿ ಹೇಗೆ ಕೆಲಸ ಮಾಡುತ್ತಾಳೆ ಎಂಬ ಕಥಾ ಹಂದರ ಛತ್ರಿವಾಲಿ ಸಿನಿಮಾದ್ದಾಗಿದೆ. ಛತ್ರಿವಾಲಿಯಾಗಿ ರಕುಲ್ ಸಿನಿ ಪ್ರಿಯರಿಗೆ ಎಂಟರ್ಟೈನ್ಮೆಂಟ್ ಕೊಡಲು ಸಜ್ಜಾಗಿದ್ದಾಳೆ.

Leave a Comment