ಕನ್ನಡ ಚಿತ್ರರಂಗಕ್ಕೆ ಕಡೂರಿನ ಯುವ ಪ್ರತಿಭೆ “ಅಜಯ್ ಸೂರ್ಯ “

Share

ಕಡೂರಿನ ಯುವ ಪ್ರತಿಭೆ ಅಜಯ್ ಸೂರ್ಯ ಮೊಟ್ಟ ಮೊದಲಬಾರಿಗೆ ನಾಯಕ ನಟನಾಗಿ ಹಾಗೂ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಆರಿದ್ರಾ.

ಭೈರವಿ ಕ್ರಿಯೆಷನ್ಸ್ ಅರ್ಪಿಸಿರುವ ಈ ಚಿತ್ರದಲ್ಲಿ
ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಅಜಯ್ ಸೂರ್ಯ ಹಾಗೂ ತಂಡದ ಜೊತೆಗೆ ಸಹ ನಿರ್ಮಾಪಕರಾಗಿ ಗೀತ ಎ ವಿ ರವರು ಕೈ ಜೋಡಿಸಿದ್ದಾರೆ. ಅಜಯ್ ಸೂರ್ಯ ಫಿಲ್ಮ್ಸ್ ತಂಡದಲ್ಲಿ ಅಜಯ್ ಸೂರ್ಯ, ಯೋಗೀಶ್, ದೀಪಕ್ ಕ್ಷತ್ರಿಯ, ಹರೀಶ್, ವೆಂಕಟ್ ಬಾಬು, ಗೋಪಿ ರಾಮ್ ಇವರು ತಂಡದ ಸದಸ್ಯರಾಗಿದ್ದಾರೆ. ಈ ತಂಡದ ಮೊದಲ ಪ್ರಯತ್ನವೇ “ಆರಿದ್ರಾ “.

ಅರಿದ್ರಾ ಚಿತ್ರಕ್ಕೆ ಛಾಯಾಗ್ರಹಣ ಮೋಹನ್ ಎಂ ಎಸ್, ಸಂಗೀತ & ಸಾಹಿತ್ಯ ಸಮರ್ಥ್ ಅವರದ್ದು, ನೃತ್ಯ ಸಂಯೋಜನೆ ಮಂಜೇಶ್ , ಈ ಚಿತ್ರಕ್ಕೆ ನಾಯಕ ನಟಿಯಾಗಿ ನವ್ಯ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಹಾಸ್ಯ ನಟರಾಗಿ ಯೋಗೀಶ್ ಅಚ್ಚು ಹಾಗೂ ನಾಯಕನ ಗೆಳೆಯನ ಪಾತ್ರದಲ್ಲಿ ದೀಪಕ್ ಕ್ಷತ್ರಿಯ ಹಾಗೂ ಹರೀಶ್, ವೆಂಕಟ್ ಬಾಬು, ಗಿಣಿರಾಮ ಖ್ಯಾತಿಯ ಬಾಲ ನಟಿ ಭೈರವಿ, ಗೋಪಿ ರಾಮ್, ಭರತ್ ಯಾಧವ್ ಹಾಗೂ ಇನ್ನಿತರು ಸಹ ಕಲಾವಿದರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್
ಈಗಾಗಲೇ ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. YouTube Link ಕಾಣಬಹುದು.

ನಿರ್ದೇಶನ ತಂಡದಲ್ಲಿ ಸಿಂಧು ರಾಜ್, ಶ್ರೀಧರ್ ರೆಡ್ಡಿ, ಕಲ್ಯಾಣ್ ರವರಿದ್ದು, ಈ ಚಿತ್ರ ತಂಡಕ್ಕೆ ಟಗರು ಖ್ಯಾತಿಯ ಕಾಕ್ರೋಚ್ ಸುದಿ, ಪತ್ರಕರ್ತ ನಿರ್ವಾಹಕರಾದ ಹುಲುಕುಂಟೆ ಮಹೇಶ್, ಬೆಂಗಳೂರು ಗ್ರಾಮಾಂತರ ಅಖಿಲ ಕರ್ನಾಟಕ ಯುವಜನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಅಂಕಿತ್ ಹಾಗೂ ಸಿರಿ ಮ್ಯೂಸಿಕ್ ತಂಡದವರು ಅರಿದ್ರಾ ಚಿತ್ರಕ್ಕೆ ಸಾತ್ ನೀಡಿದ್ದಾರೆ.

“ಆರಿದ್ರಾ” ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.

ಈ ಚಿತ್ರದ ಹೊಸ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶಗಳು ಹಾಗೂ ಯಶಸ್ಸು ಸಿಗಲೆಂದು ನಮ್ಮ ಸೂಪರ್ ಸ್ಟಾರ್ಸ್ ತಂಡ ಕೂಡ ಶುಭ ಹಾರೈಸುತ್ತದೆ.

Leave a Comment