“ರೀಬೊಕ್‌”ನಿಂದ ತನ್ನ ‘ವಾಕಿಂಗ್ ಪೋರ್ಟ್ಫೋಲಿಯೊ’ಗೆ ಸದೃಢತೆ, ಜನರಿಗೆ `ಎದ್ದು ನಿಲ್ಲಲು, ಹೆಚ್ಚು ಚಲಿಸಲು, ಫಿಟ್ ಆಗಿರಲು’ ಉತ್ತೇಜನ

Share

ಭಾರತದ ಫಿಟ್‌ನೆಸ್ ಬ್ರಾಂಡ್ ರೀಬೊಕ್ ಎಲ್ಲ ಗ್ರಾಹಕರಿಗೂ ಫಿಟ್‌ನೆಸ್ ಆಯ್ಕೆಯನ್ನು ಅನುಸರಿಸುವ ಬದ್ಧತೆಗೆ ಅನುಗುಣವಾಗಿ ತನ್ನ ವಾಕಿಂಗ್ ಫುಟ್‌ವೇರ್ ಶ್ರೇಣಿಯಲ್ಲಿ ಹೊಸ ಸ್ಟೈಲ್ ಗಳನ್ನು ಬಿಡುಗಡೆ ಮಾಡಿದೆ. ಈ ವಿಭಾಗವು ತಾಂತ್ರಿಕ ಪುರುಷ ಮತ್ತು ಮಹಿಳೆಯರಿಗೆ ತಾಂತ್ರಿಕ ಅಪ್‌ಗ್ರೇಡ್‌ಗಳೊಂದಿಗೆ ಹೊಸ ಸೇರ್ಪಡೆ ಕಂಡಿದ್ದು ನಡೆಯುವಾಗ ಗರಿಷ್ಠ ಸೌಖ್ಯ ಮತ್ತು ಬೆಂಬಲ ನೀಡುತ್ತದೆ. ಈ ಪ್ರಕಟಣೆಯು ತನ್ನ ಗ್ರಾಹಕರಿಗೆ ಫಿಟ್‌ನೆಸ್ ಪಾರ್ಟ್ನರ್ ಆಗುವ ರೀಬೊಕ್‌ನ ಬದ್ಧತೆಯನ್ನು ಮರು ದೃಢೀಕರಿಸುವ ಗುರಿ ಹೊಂದಿದೆ ಮತ್ತು ಪ್ರತಿನಿತ್ಯದ ಜೀವನಶೈಲಿಯಲ್ಲಿ ಫಿಟ್‌ನೆಸ್‌ನ ಪ್ರಾಮುಖ್ಯತೆಯನ್ನು ಮತ್ತಷ್ಟು ವಿಸ್ತರಿಸುತ್ತದೆ. ಹಲವು ವರ್ಷಗಳಿಂದ ರೀಬೊಕ್ ವಾಕಿಂಗ್ ಅನ್ನು ದೇಹದಾರ್ಢ್ಯತೆ ಕಾಪಾಡಿಕೊಳ್ಳುವ ಚಟುವಟಿಕೆಯಾಗಿ ಕಂಡಿದ್ದಾರೆ. ಈ ಪ್ರವೃತ್ತಿಯನ್ನು ಉತ್ತೇಜಿಸಲು ಮತ್ತು ಹೊಸ ಜನರಿಗೆ ವಾಕಿಂಗ್‌ಗೆ ಪರಿಚಯಿಸಲು ರೀಬೊಕ್‌ನ ಹೊಸ ಸಂಗ್ರಹವು ಉನ್ನತ ಗುಣಮಟ್ಟ, ಸೌಖ್ಯ ಮತ್ತು ತಂತ್ರಜ್ಞಾನವನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ. ಹೊಸ ಉತ್ಪನ್ನಗಳು ರೀಬೊಕ್ ಡೈಲಿಫಿಟ್ ಡಿಎಂಎಕ್ಸ್, ಎವರ್ ರೋಡ್ 4.0, ಎವರ್ ರೋಡ್ ಡಿಎಂಎಕ್ಸ್ ಸ್ಲಿಪ್ ಆನ್, ವಾಕ್ ವೇ ಕಂಫಿ 2.0 ಮತ್ತು ದ್ರುಹಾನ್ ಮತ್ತಿತರೆ ಒಳಗೊಂಡಿದ್ದು ವಾಕಿಂಗ್ ವಿಭಾಗದಲ್ಲಿ ರೀಬೊಕ್‌ನ ಸ್ಥಾನವನ್ನು ಸದೃಢಗೊಳಿಸಲಿವೆ.

ರೀಬೊಕ್‌ನ ವಾಕಿಂಗ್ ಶೂಗಳ ವಿಶೇಷವಾದ ಡಿಎಂಎಕ್ಸ್ ಮೂವಿಂಗ್ ಏರ್ ಟೆಕ್ನಾಲಜಿ ನೈಸರ್ಗಿಕ ಕುಷನಿಂಗ್ ಅನ್ನು ಹಿಮ್ಮಡಿಯಿಂದ ಬೆರಳತುದಿಯವರೆಗೆ ಮಿಡ್‌ಸೋಲ್ಸ್ನಲ್ಲಿ ಗಾಳಿ ಚಲನೆ ಉತ್ತೇಜಿಸಿ ಅನುಕೂಲಕರ ವಾಕಿಂಗ್ ಅನುಭವ ನೀಡುತ್ತದೆ. ಹೊಸ ಡೈಲಿಫಿಟ್ ಡಿಎಂಎಕ್ಸ್ ಸುಧಾರಿತ ಮತ್ತು ಅತ್ಯಾಧುನಿಕ ಡಿಎಂಎಕ್ಸ್ ಟ್ರಿಪಲ್‌ಮ್ಯಾಕ್ಸ್ ಏರ್ ಮೂವಿಂಗ್ ಟೆಕ್ನಾಲಜಿಯೊಂದಿಗೆ ಇಡೀ ದಿನದ ಅನುಕೂಲಕ್ಕೆ ಹೆಚ್ಚುವರಿ ಕಮಾನಿನ ಬೆಂಬಲ ನೀಡುತ್ತದೆ. ರೀಬೊಕ್ ಪ್ರಶಸ್ತಿ ಪುರಸ್ಕೃತ ಡೈಲಿಫಿಟ್ ಡಿಎಂಎಕ್ಸ್ ವಾಕಿಂಗ್ ಶೂ ವಿಸ್ತಾರ ಹೊಸ ಬಣ್ಣಗಳನ್ನು ಕೂಡಾ ತರುತ್ತಿದೆ. ಡೈಲಿಫಿಟ್ ಡಿಎಂಎಕ್ಸ್ ಮಹಿಳೆಯರಿಗೆ ವಿಸ್ತಾರ ಮತ್ತು ಕೈಗೆಟುಕುವ ವಾಕಿಂಗ್ ಶೂ ಆಯ್ಕೆಯನ್ನು ಸಕ್ರಿಯ ಜೀವನಶೈಲಿಗೆ ಬೆಂಬಲಿಸಲು ನೀಡುತ್ತಿದೆ. ಹೊಸ ಡೈಲಿಫಿಟ್ ಡಿಎಂಎಕ್ಸ್ ಬಣ್ಣಗಳಲ್ಲಿ ಬಿಳಿ/ಕಪ್ಪು/ಪಿಂಕ್ ಟೈ-ಡೈ/ಗ್ರೇ ಒಳಗೊಂಡಿವೆ.

ವಾಕಿಂಗ್ ಶ್ರೇಣಿಯ ಕುರಿತು ರೀಬೊಕ್‌ನ ಬ್ರಾಂಡ್ ರಾಯಭಾರಿ ಕತ್ರಿನಾ ಕೈಫ್, “ನನಗೆ ರೀಬೊಕ್‌ನೊಂದಿಗೆ ದೀರ್ಘಾವಧಿ ಸಹಯೋಗವಿದೆ, ಮತ್ತು ಇದು ಬ್ರಾಂಡ್‌ಗೆ ಮತ್ತೊಂದು ಬಲವಾದ ಅಭಿಯಾನದ ಭಾಗವಾಗಲು ನನಗೆ ಅಪಾರ ಸಂತೋಷ ನೀಡುತ್ತದೆ. ತನ್ನ ವಾಕಿಂಗ್ ವಿಭಾಗದ ಶೂಗಳಲ್ಲಿ ಹೊಸ ಸ್ಟೈಲ್ ಗಳ ಬಿಡುಗಡೆಯು ಫಿಟ್‌ನೆಸ್ ಕುರಿತಾಗಿ ರೀಬೊಕ್‌ನ ಬದ್ಧತೆಯನ್ನು ತೋರಿಸುತ್ತದೆ ಅದು ಹೇಗೆ ನಡೆಯುವಂತಹ ವ್ಯಾಯಾಮವು ದೊಡ್ಡ ವ್ಯತ್ಯಾಸ ಸೃಷ್ಟಿಸಬಲ್ಲದು ಎಂದು ಸೂಚಿಸುತ್ತದೆ. ವಾಕಿಂಗ್ ಪ್ರತಿನಿತ್ಯ ಯಾರು ಬೇಕಾದರೂ ಕೈಗೊಳ್ಳಬಲ್ಲ ಚಟುವಟಿಕೆಯಾಗಿದೆ. ರೀಬೊಕ್‌ನ ಉಪಕ್ರಮವು ಅನುಕೂಲಕರ, ಗುಣಮಟ್ಟ ಮತ್ತು ದೀರ್ಘಬಾಳಿಕೆಯನ್ನು ಉಳಿಸಿಕೊಂಡೇ ಹೆಚ್ಚು ಲಭ್ಯವಿರುವಂತೆ ಮಾಡುತ್ತದೆ ಇದು ದೇಶಾದ್ಯಂತ ಹೆಚ್ಚು ಸದೃಢ ಮತ್ತು ಉತ್ತಮ ಜೀವನಶೈಲಿ ನಡೆಸಲು ಜನರಿಗೆ ಹೆಚ್ಚು ಉತ್ತೇಜಿಸುತ್ತದೆ” ಎಂದರು.
ಹೊಸ ವಾಕಿಂಗ್ ವಿಭಾಗದಲ್ಲಿ ಪರಿಚಯಿಸಲಾದ ಕೆಲ ಉತ್ಪನ್ನಗಳು ಹೀಗಿವೆ:


• ಡೈಲಿಫಿಟ್ ಡಿಎಂಎಕ್ಸ್-ರೂ.6,599
• ಎವರ್ ರೋಡ್ ಡಿಎಂಎಕ್ಸ್ 4.0-ರೂ.5,999
• ಎವರ್ ರೋಡ್ ಡಿಎಂಎಕ್ಸ್ ಸ್ಲಿಪ್ ಆನ್ 4-ರೂ.5,599
• ವಾಕ್-ವೇ ಕಂಫಿ 2.0-ರೂ.4,599ಸದ್ಯದಲ್ಲೇ ಬಿಡುಗಡೆ
• ದ್ರುಹಾನ್- ರೂ.3999 ಸದ್ಯದಲ್ಲೇ ಬಿಡುಗಡೆ

ಹೊಸ ವಾಕಿಂಗ್ ಶ್ರೇಣಿ ಈಗ ಪುರುಷರು ಹಾಗೂ ಮಹಿಳೆಯರಿಗೆ shop4reebok.com ನಲ್ಲಿ ಲಭ್ಯವಿದೆ ಮತ್ತು ಆಯ್ದ ರೀಟೇಲ್ ಮಳಿಗೆಗಳಲ್ಲಿ ಲಭ್ಯ. ಇತರೆ ಫ್ಯಾಷನ್ ರೀಟೇಲರ್‌ಗಳಾದ ಅಮೆಜಾ಼ನ್, ಫ್ಲಿಪ್‌ಕಾರ್ಟ್, ಅಜಿಯೊ, ಮಿಂತ್ರಾ ಮತ್ತು ಟಾಟಾಕ್ಲಿಕ್‌ಗಳಲ್ಲಿ ಕೂಡಾ ವಿಸ್ತಾರ ಶ್ರೇಣಿಯ ಹೊಸ ವಾಕಿಂಗ್ ಸ್ಟೈಲ್ ಗಳನ್ನು ಕಾಣಬಹುದು. ದ್ರುಹಾನ್ ಸೆಪ್ಟೆಂಬರ್ ಮಧ್ಯದಲ್ಲಿ ಬಿಡುಗಡೆಯಾಗಲಿದೆ ಮತ್ತು ವಾಕ್-ವೇ ಕಂಫಿ 2.0 ಹೊಸ ವಾಕಿಂಗ್ ಶ್ರೇಣಿಯು ಅಕ್ಟೋಬರ್‌ನ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.


ಹೆಚ್ಚಿನ ಮಾಹಿತಿಗೆ ದಯವಿಟ್ಟು ಇನ್ಸ್ಟಾಗ್ರಾಂ ಹ್ಯಾಂಡಲ್ @reebokindia ಭೇಟಿ ಕೊಡಿ

Leave a Comment