ಭಯ ಹುಟ್ಟಿಸುವ `ಸ್ಪೂಕಿ ಕಾಲೇಜ್’ ಟ್ರೇಲರ್

Share

ದಿಯಾ ಖ್ಯಾತಿಯ ನಟಿ ಖುಷಿ ರವಿ ಮತ್ತು ವಿವೇಕ್ ಸಿಂಹ ಒಟ್ಟಿಗೆ ನಟಿಸಿರುವ ಸ್ಪೂಕಿ ಕಾಲೇಜ್ ಸಿನಿಮಾದ ಟ್ರೇಲರ್ ಬಿಡುಗಡೆ ಗೊಂಡಿದೆ. ಟ್ರೇಲರ್ ಭಯ ಹುಟ್ಟಿಸುವಂತಿದೆ. ಈ ಚಿತ್ರವನ್ನು ರಂಗಿತರAಗ ಸಿನಿಮಾ ಖ್ಯಾತಿಯ ನಿರ್ಮಾಪಕ ಎಚ್.ಕೆ. ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಹೊಸ ಪ್ರತಿಭೆ ಭರತ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಭರತ್ ಪ್ರಕಾರ ‘ ಸ್ಪೂಕಿ ಎಂದರೆ ಭಯ ಎಂದರ್ಥ. ಈ ಭಯವನ್ನು ನಮ್ಮ ಚಿತ್ರದಲ್ಲಿ ಸ್ವಲ್ಪ ಭಿನ್ನವಾಗಿ ತೋರಿಸಲಾಗಿದೆ. ಧಾರವಾಡದ ನೂರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಇರುವ ಕಾಲೇಜ್‌ವೊಂದರಲ್ಲಿ ನಮ್ಮ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ. ದಾಂಡೇಲಿ ಅಭಿಯಾರಣ್ಯದಲ್ಲೂ ಚಿತ್ರೀಕರಣ ಮಾಡಿದ್ದೇವೆ. ವಿವೇಕ್ ಸಿಂಹ ಮತ್ತು ಖುಷಿ ರವಿ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿ ಮೂಡಿ ಬಂದಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಈ ಸಿನಿಮಾದ ಮತ್ತೊಂದು ಹೈಲೈಟ್ ಎನ್ನಬಹುದು.

೬೦ರ ದಶಕದಲ್ಲಿ ತೆರೆಕಂಡ ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಅಭಿನಿಯಸಿದ್ದ ವೀರಕೇಸರಿ’ ಚಿತ್ರದಮೆಲ್ಲುಸಿರೆ ಸವಿಗಾನ ’ ಹಾಡು ದೊಡ್ಡ ಹಿಟ್ ಆಗಿತ್ತು. ಇದೇ ಹಾಡನ್ನು ಸ್ಪೂಕಿ ಕಾಲೇಜ್ ಚಿತ್ರಕ್ಕಾಗಿ ಮರುಬಳಕೆ ಮಾಡಿಕೊಳ್ಳಲಾಗಿದೆ. ಈ ಹಾಡಿನಲ್ಲಿ `ಏಕ್‌ಲವ್ ಯಾ’ ಚಿತ್ರದ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಜನವರಿ ೬ರಂದು ಬಿಡುಗಡೆ ಆಗಲಿದೆ.

Leave a Comment