ಈವೆಂಟ್ ಸ್ಟೂಡಿಯೋ ಅರ್ಪಿಸುವ “ಮಿನಿ ಮಾಡೆಲ್” ಸೀಸನ್ 2 ಫ್ಯಾಷನ್ ಶೋ ..!!

Share

ಬೆಂಗಳೂರಿನ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ” ಆಯೋಜನೆಯ ಅಡಿ 4 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಏರ್ಪಡಿಸಿದ್ದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಇದೀಗ 5 ವರ್ಷದ ಪುಟಾಣಿ ಯೂವಿಕಾ ಅವರು ‘ಫೇಸ್ ಆಫ್ ಮಿನಿ ಮಾಡೆಲ್ ಆಗಿದ್ದಾರೆ.

ಸಂಜನಾ ಹಾಗೂ ಮಂಜುನಾಥ್ ರವರ ಮುಂದಾಳತ್ವದಲ್ಲಿ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ”

ಈವೆಂಟ್ಸ್ ಸ್ಟೂಡಿಯೋ ಫೌಂಡರ್ ಮತ್ತು ಡೈರೆಕ್ಟರ್ ಆದ ಸಂಜನಾ ಹಾಗೂ ಮಂಜುನಾಥ್ ರವರ ಮುಂದಾಳತ್ವದಲ್ಲಿ “ಇವೆಂಟ್ಸ್ ಸ್ಟುಡಿಯೋ” ಮತ್ತು “ಯುವಿ ಬ್ಯೂಟಿ ಸ್ಟುಡಿಯೋ” ಪ್ರಸ್ತುತತೆಯಿಂದ ಆಯೋಜನೆ ಮಾಡಲಾದ ಮಿನಿ ಮಾಡೆಲ್ – 2022 ಸೀಸನ್ 02 ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 80 ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಆಡಿಷನ್ ಮೂಲಕ ಅಂತಿಮವಾಗಿ 30 ಮಕ್ಕಳನ್ನು ಮಿನಿ ಮಾಡೆಲ್ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

ತೀರ್ಪುಗಾರರಾಗಿ “ಡ್ಯಾನಿ”, “ಶುಭಾ ಶ್ರೀರಾಮ್” ಮತ್ತು “ಪ್ರಿಯಾ ಪ್ರಕಾಶ್”

ಸ್ಪರ್ಧೆಗೆ ಜ್ಯೂರಿ ಆಗಿ ನಟ & ಡಾನ್ಸ್ ಕೊರಿಯೋಗ್ರಾಫರ್ ಆದ “ಡ್ಯಾನಿ”, ‘2016 ರ ಮಿಸ್ಸೆಸ್ ಇಂಡಿಯಾ ಕರ್ನಾಟಕ’ ಆದಂತಹ “ಶುಭಾ ಶ್ರೀರಾಮ್” ಮತ್ತು “ಪ್ರಿಯಾ ಪ್ರಕಾಶ್” ರವರು ಮಿನಿ ಮಾಡೆಲ್ ಕಾರ್ಯಕ್ರಮದ ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದರು.

ವಿಜೇತರಾಗಿ,,,,,!

“ಯೂವಿಕಾ.ಎಂ (5 ವರ್ಷ) ಅವರು ಪೇಸ್ ಆಪ್ ಮಿನಿ ಮಾಡೆಲ್ ಆಗಿದ್ದಾರೆ. ಜೀವಿಕಾ (6ವರ್ಷ) ಅವರು ಮೊದಲ ಪ್ರಶಸ್ತಿ ಪಡೆದುಕೊಂಡಿದ್ದಾರೆ, ಎರಡನೆಯ ಸ್ಥಾನ “ಲೋಚನ್” (16 ವರ್ಷ) ಮತ್ತು ಮೂರನೇ ಸ್ಥಾನಕ್ಕೆ ‘ನೌರಿನ್ ಬಾನು” (16 ವರ್ಷ ) ಅವರು ವಿಜೇತರಾಗಿ ಆಯ್ಕೆಯಾಗಿ ಹೊರಹೊಮ್ಮಿದರು.

ಸಿನೆಮಾ, ವೆಬ್ ಸೀರೀಸ್, ಸೀರಿಯಲ್ಸ್ ಹಾಗೇ ಆಲ್ಬಮ್ ಸಾಂಗ್ ಗಳಿಗೆ ಪ್ರವೇಶ ಮಾಡುವ ಬಹಳಷ್ಟು ಅವಕಾಶ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ , ಪೋಷಕರು ತಮ್ಮ ಮಕ್ಕಳನ್ನತೆರೆ ಕಾಣಬೇಕೆಂಬ ಆಸೆ ಉಳ್ಳವರಿಗೆ ಇಂತಹ ಇವೆಂಟ್ಸ್ ಗಳ ಮೂಲಕ ಸಿನೆಮಾ, ವೆಬ್ ಸೀರೀಸ್, ಸೀರಿಯಲ್ಸ್ ಹಾಗೇ ಆಲ್ಬಮ್ ಸಾಂಗ್ ಗಳಿಗೆ ಪ್ರವೇಶ ಮಾಡುವ ಬಹಳಷ್ಟು ಅವಕಾಶ ಸಿಗಬೇಕೆಂಬುವ ನಿಟ್ಟಿನಲ್ಲಿ ಸಂಜನಾ ಮತ್ತು ಮಂಜುನಾಥ್ ಅವರು ಸೇರಿ ಈ ಕಾರ್ಯಕ್ರಮವನ್ನು ಕಳೆದ 1 ವರ್ಷದಿಂದ ಈ ಆಯೋಜನೆಯನ್ನು ಮಾಡುತ್ತ ಬಂದಿದ್ದಾರೆ.

“ಮಿನಿ ಮಾಡೆಲ್ – ಸೀಸನ್ 2 ಕಾರ್ಯಕ್ರಮದಲ್ಲಿ ರಾಜ್ಯದ 80ಕ್ಕೂ ಹೆಚ್ಚು ಮಕ್ಕಳು

ಕಾರ್ಯಕ್ರಮದ ಆಯೋಜಕಿ ಸಂಜನಾ ಮಾತನಾಡಿ, ” ಮಿನಿ ಮಾಡೆಲ್ – ಸೀಸನ್ 2 ಕಾರ್ಯಕ್ರಮದಲ್ಲಿ ರಾಜ್ಯದ 80ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುವುದು ಖುಷಿ ತಂದಿದೆ. ಈ ಮಿನಿ ಮಾಡೆಲ್ – ಸೀಸನ್ 3 ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಶೀಘ್ರವೇ ಆಯೋಜನೆ ಮಾಡಲಾಗುವುದು. ಆಸಕ್ತಿ ಉಳ್ಳವರು ಮತ್ತೆ ಭಾಗವಹಿಸಬಹುದು, ಹಾಗೇ “ಇವೆಂಟ್ಸ್ ಸ್ಟುಡಿಯೋ” ಪೇಜ್ ಫಾಲೋ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ಪಡೆಯಬಹುದು” ಎಂದು ತಿಳಿಸಿದರು.

Leave a Comment