ರೆಕಿಟ್ ಮತ್ತು ಪೆಹೆಲ್ 5 ಹೊಸ ರಾಜ್ಯಗಳಲ್ಲಿ ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜ್ ಸ್ಥಾಪಿಸಿದೆ. 2021 ರಲ್ಲಿ 7000 ನೈರ್ಮಲ್ಯ ಕಾರ್ಮಿಕರಿಗೆ ತರಬೇತಿ ಮತ್ತು ಉತ್ತಮ ಜೀವನೋಪಾಯದ ಅವಕಾಶ

Share

ರೆಕಿಟ್, ವಿಶ್ವದ ಪ್ರಮುಖ ಗ್ರಾಹಕ ಆರೋಗ್ಯ ಮತ್ತು ನೈರ್ಮಲ್ಯ ಕಂಪನಿಯಾಗಿದ್ದು ಅದು ಅದರ ಪಾಲುದಾರ ಜಾಗ್ರನ್ ಪೆಹೆಲ್ ಸಹಯೋಗದೊಂದಿಗೆ ಪಂಜಾಬ್, ಉತ್ತರಾಖಂಡ್, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ 5 ಭಾರತೀಯ ರಾಜ್ಯಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಸಿದ್ಧವಾಗಿದೆ. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಈಗಿರುವ ಕೇಂದ್ರವನ್ನು ಹೊರತುಪಡಿಸಿ. ಈ ವಿಸ್ತರಣೆಯ ಮೂಲಕ, 1 ವರ್ಷದಲ್ಲಿ 7,000 ನೈರ್ಮಲ್ಯ ಕಾರ್ಮಿಕರನ್ನು ಘನತೆ ಮತ್ತು ಆರೋಗ್ಯಕರ ಜೀವನ ನಡೆಸಲು ಸಬಲೀಕರಣಗೊಳಿಸುವ ಮತ್ತು ಸಜ್ಜುಗೊಳಿಸುವ ಗುರಿಯನ್ನು ಕಾಲೇಜು ಹೊಂದಿದೆ.

ನೈರ್ಮಲ್ಯ ಕಾರ್ಮಿಕರು ಕಾಲೇಜಿನಲ್ಲಿ ಪಡೆಯುವ ತರಬೇತಿಯು ಅವರಿಗೆ ಸರಿಯಾದ ಜ್ಞಾನ ಮತ್ತು ಕೌಶಲ್ಯಗಳಿಂದ ಸಜ್ಜುಗೊಳಿಸುತ್ತವೆ. ಬಳಸುವ ಯಂತ್ರಗಳು, ತಡೆಗಟ್ಟುವ ತಂತ್ರಗಳು, ಅವರ ಹಕ್ಕುಗಳು ಮತ್ತು ಹಕ್ಕುಗಳನ್ನು ಅರ್ಥಮಾಡಿಕೊಳ್ಳುವ ಕುರಿತು ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತದೆ. ಇದುಅವರಿಗೆ ಪ್ರತಿಷ್ಠಿತ ಮತ್ತು ಮಾನ್ಯತೆ ಪಡೆದ ಜಾಗತಿಕ, ರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಉಪಕ್ರಮದ ಒಂದು ಭಾಗವಾಗಿ, ಕಾಲೇಜು 50 ಸ್ವಸಹಾಯ ಗುಂಪುಗಳಿಗೆ ಬೆಂಬಲವನ್ನು ನೀಡಲಿದೆ, ಅವರು ಲಾಸ್ಟ್-ಮೈಲ್ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸುತ್ತಾರೆ. ಈ ಗುಂಪುಗಳನ್ನು ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್‌ಗಳೊಂದಿಗೆ ಜೋಡಿಸಲಾಗುತ್ತದೆ ಮತ್ತು ಅವರಿಗೆ ಸಂಭಾವ್ಯ ಸಹಕಾರ ಮಾದರಿಗಾಗಿ ಕಾರ್ಯತಂತ್ರದ ಬೆಂಬಲವನ್ನು ಒದಗಿಸಲಾಗುತ್ತದೆ. ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜಿನ ಮುಖ್ಯ ಉದ್ದೇಶವೆಂದರೆ ನೈರ್ಮಲ್ಯ ಕಾರ್ಮಿಕರಿಗೆ ಘನವಾದ ಮತ್ತು ಸಮಗ್ರ ತರಬೇತಿ ಮತ್ತು ಪೋಸ್ಟ್ ಪ್ಲೇಸ್‌ಮೆಂಟ್ ಬೆಂಬಲದ ಮೂಲಕ ಪರ್ಯಾಯ ಜೀವನೋಪಾಯಕ್ಕಾಗಿ ಅವಕಾಶಗಳನ್ನು ಒದಗಿಸುವುದು ಮತ್ತು ಈ ಮೂಲಕಕಾರ್ಮಿಕರಿಗೆ ಘನತೆಯ ಜೀವನವನ್ನು ನಡೆಸಲುಅವರಿಗೆ ಸಹಾಯ ಮಾಡುವುದಾಗಿದೆ.

ಸ್ವಚ್ಛತಾ ಕಾರ್ಮಿಕರು ಎದುರಿಸುತ್ತಿರುವ ತೀವ್ರ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯದ ಸವಾಲುಗಳನ್ನು ಗಮನಿಸಿದರೆ, ಭಾರತದಲ್ಲಿ ನೈರ್ಮಲ್ಯ ಕಾರ್ಮಿಕರನ್ನು ರಕ್ಷಿಸುವ ಮತ್ತು ಉನ್ನತೀಕರಿಸುವ ಅವಶ್ಯಕತೆ ಹೆಚ್ಚಾಗಿದೆ. ಡಾಲ್ಬರ್ಗ್ ಅವರ ‘ಭಾರತದಲ್ಲಿ ನೈರ್ಮಲ್ಯ ಕಾರ್ಮಿಕರ ಸುರಕ್ಷತೆ ಮತ್ತು ಜೀವನೋಪಾಯ’ ವರದಿಯ ಪ್ರಕಾರ ಭಾರತದಲ್ಲಿ 5 ಮಿಲಿಯನ್ (ಅಂದಾಜು) ಪೂರ್ಣ ಸಮಯದ ನೈರ್ಮಲ್ಯ ಕಾರ್ಮಿಕರಿದ್ದಾರೆ. ಇವುಗಳಲ್ಲಿ 1 ಮಿಲಿಯನ್ ನಗರ ಪ್ರದೇಶಗಳಲ್ಲಿ, ಚರಂಡಿ ಮತ್ತು ಸಮುದಾಯ ಸ್ವಚ್ಛತೆಗಾಗಿ ಕೆಲಸ ಮಾಡುತ್ತಿದ್ದು, 600 ಸಾವಿರ ಮಂದಿ ಶೌಚಾಲಯ ಸ್ವಚ್ಛತೆಯಲ್ಲಿ ತೊಡಗಿದ್ದಾರೆ.

ಭಾರತದಲ್ಲಿ ಪ್ರಸ್ತುತ ನೈರ್ಮಲ್ಯ ಮೂಲಸೌಕರ್ಯದ ಪರಿಸ್ಥಿತಿಯು ನಿಯಮಿತವಾಗಿ ಕಾರ್ಮಿಕರನ್ನು ಅಪಾಯಕಾರಿ ಸ್ಥಿತಿಯಲ್ಲಿ ಇರಿಸುವುದನ್ನು ನಾವು ಕಾಣುತ್ತಲಿದ್ದೇವೆ; ಉಪಕರಣಗಳು ಮತ್ತು ಗೇರ್ ಅಸುರಕ್ಷಿತ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ತಗ್ಗಿಸುವುದಿಲ್ಲ. ಕೋವಿಡ್ ಸಾಂಕ್ರಾಮಿಕ ರೋಗವು ಸ್ವಚ್ಛತಾ ಕಾರ್ಮಿಕರು ಈಗಾಗಲೇ ಎದುರಿಸುತ್ತಿರುವ ಅಪಾಯಗಳನ್ನು ಉಲ್ಬಣಗೊಳಿಸಿದೆ. ಈ ಸಮಯದಲ್ಲಿ ರಕ್ಷಣಾತ್ಮಕ ಗೇರ್ ಮತ್ತು ಔಪಚಾರಿಕ ತರಬೇತಿಯ ಕೊರತೆಯು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಸೂಕ್ತ ವ್ಯವಸ್ಥೆಯನ್ನು ಹೊಂದಿರದ ವ್ಯವಸ್ಥೆಯ ಅಡಿಯಲ್ಲಿ ನೈರ್ಮಲ್ಯ ಕಾರ್ಮಿಕರು ಹಾಟ್ ಸ್ಪಾಟ್‌ಗಳನ್ನು ಸೋಂಕು ರಹಿತಗೊಳಿಸುವ ಕೋವಿಡ್ ಸೋಂಕಿತ ರೋಗಿಗಳ ಶವಗಳನ್ನು ಸಾಗಿಸುವ ಮತ್ತು ಸೋಂಕಿತ ಜೈವಿಕ ತ್ಯಾಜ್ಯವನ್ನು ನಿರ್ವಹಿಸುವಂತಹ ಅಪಾಯಕಾರಿ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಮಹಿಳಾ ನೈರ್ಮಲ್ಯ ಕಾರ್ಮಿಕರು ಇಂತಹ ಕೋವಿಡ್ ಸಮಯದಲ್ಲಿ ಸಾರ್ವಜನಿಕರೊಂದಿಗೆ ನಿರಂತರ ಸಂವಹನದ ಕಾರಣದಿಂದ ಅಸುರಕ್ಷಿತ ಕೆಲಸದ ವಾತಾವರಣವನ್ನು ಎದುರಿಸುತ್ತಾರೆ ಮತ್ತು ಸಮಸ್ಯೆಯನ್ನು ಪ್ರಸ್ತಾಪಿಸಲು ಕಾರ್ಯವಿಧಾನದ ಕೊರತೆಯನ್ನು ಎದುರಿಸುತ್ತಾರೆ. ಇವೆಲ್ಲವೂ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಆಗಾಧವಾದ ಪರಿಣಾಮವನ್ನು ಬೀರುತ್ತದೆ.

ಗೌರವ್ ಜೈನ್, ದಕ್ಷಿಣ ಏಷ್ಯಾದ ರೆಕ್ಕಿಟ್‌ನ ಹಿರಿಯ ಉಪಾಧ್ಯಕ್ಷರು ಈ ರೀತಿಯಾಗಿ ಹೇಳುತ್ತಾರೆ,“ರೆಕಿಟ್‌ನಲ್ಲಿ, ಉತ್ತಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶದ ಮೂಲಕ ಜನರು ಸ್ವಚ್ಛ, ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡಲು ಮತ್ತು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ದೇಶದಲ್ಲಿ ನೈರ್ಮಲ್ಯ ಕಾರ್ಮಿಕರ ಸ್ಥಿತಿ ಶೋಚನಿಯವಾಗಿದೆ ಮತ್ತು ಗೌರವಯುತ ಜೀವನ ನಡೆಸಲು ಅವರನ್ನು ಸಕ್ರಿಯಗೊಳಿಸುವ ಮತ್ತು ಸಶಕ್ತಗೊಳಿಸುವ ಅಗತ್ಯವನ್ನು ನಾವು ಅರಿತುಕೊಂಡಿದ್ದೇವೆ. ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜಿನಲ್ಲಿ ನಾವು ನೈರ್ಮಲ್ಯ ಕಾರ್ಮಿಕರಿಗೆ ಸರಿಯಾದ ಕೌಶಲ್ಯವನ್ನು ಒದಗಿಸುವ ಮೂಲಕ ತರಬೇತಿಯನ್ನು ನೀಡುತ್ತಿದ್ದೇವೆ ಅದು ಅವರಿಗೆ ಉದ್ಯೋಗಗಳನ್ನು ಭದ್ರವಾಗಿ ಮತ್ತು ಘನತೆಯಿಂದ ಜೀವನ ನಡೆಸಲು ಸಹಾಯ ಮಾಡುತ್ತದೆ. ನಾವು ಇಲ್ಲಿಯವರೆಗೆ 7,700 ಕಾರ್ಮಿಕರಿಗೆ ತರಬೇತಿಯನ್ನು ನೀಡಿದ್ದೇವೆ. ಈಗ ನಾವು ಈ ಯೋಜನೆಯನ್ನು ಇನ್ನೂ 5 ರಾಜ್ಯಗಳಿಗೆ ವಿಸ್ತರಿಸುತ್ತಿದ್ದೇವೆ.ಇದು ಹೆಚ್ಚು ಹೆಚ್ಚು ನೈರ್ಮಲ್ಯ ಕೆಲಸಗಳು ಅವರ ಜೀವನವನ್ನು ಉನ್ನತಿಗೇರಿಸಲು ಮತ್ತು ಘನತೆಯಿಂದ ಬದುಕಲು ಸಹಾಯ ಮಾಡುತ್ತದೆ.”

ರವಿ ಭಟ್ನಾಗರ್, ನಿರ್ದೇಶಕರು, ವಿದೇಶಾಂಗ ವ್ಯವಹಾರಗಳು ಮತ್ತು ಪಾಲುದಾರಿಕೆಗಳು, SOA, ರೆಕಿಟ್, ಈ ರೀತಿಯಾಗಿ ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ “ಸ್ವಚ್ಛತಾ ಕೆಲಸಗಾರರು ನಮ್ಮ ದೇಶದ ನೈರ್ಮಲ್ಯ ವ್ಯವಸ್ಥೆಯ ಬೆನ್ನೆಲುಬು. ದುರದೃಷ್ಟವಶಾತ್, ಅವರಲ್ಲಿ ಹಲವರು ಅಪಾಯಕಾರಿ ಕೆಲಸದ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.ಇದು ನಿರ್ಣಾಯಕ ರೋಗಗಳು ಮತ್ತು ಆರೋಗ್ಯ ತೊಡಕುಗಳಿಗೆ ಕಾರಣವಾಗುತ್ತದೆ. ಸಂಘಟನೆಯಾಗಿ ನಾವು ಸಮುದಾಯಗಳನ್ನು ಬೆಂಬಲಿಸಲು ಮತ್ತು ಜನರಿಗೆ ಆರೋಗ್ಯಕರ ಮತ್ತು ಘನತೆಯ ಜೀವನ ನಡೆಸಲು ಸಹಾಯ ಮಾಡಲು ಬದ್ಧರಾಗಿದ್ದೇವೆ. ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜನ್ನು 5 ಹೊಸ ರಾಜ್ಯಗಳಿಗೆ ವಿಸ್ತರಿಸುವ ಮೂಲಕ, 7,000 ನೈರ್ಮಲ್ಯ ಕಾರ್ಮಿಕರ ಜೀವನವನ್ನು ಪರಿವರ್ತಿಸುವುದು ಮತ್ತು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವುದು ನಮ್ಮ ಪ್ರಯತ್ನವಾಗಿದೆ.”

ಹಾರ್ಪಿಕ್ ವರ್ಲ್ಡ್ ಟಾಯ್ಲೆಟ್ ಕಾಲೇಜ್ ನ್ನು ಆಗಸ್ಟ್ 2018 ರಲ್ಲಿ, ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಐದು ದಿನಗಳ ತರಗತಿಯ ತರಬೇತಿ ಮಾಡ್ಯೂಲ್ ನೊಂದಿಗೆಆರಂಭಿಸಲಾಯಿತು. ಕೋವಿಡ್-19 ಔಟ್ ಬ್ರೇಕ್, ಎಲ್ಲಾ ತರಬೇತಿ ಕಾರ್ಯಾಗಾರಗಳನ್ನು ಆಪ್ ಆಧಾರಿತ ಕಾರ್ಯಕ್ರಮದ ಮೂಲಕ ನಡೆಸಲಾಗುತ್ತದೆ.ಪ್ರಾರಂಭವಾದಾಗಿನಿಂದಲೂ, ಕಾಲೇಜು ಪರಿವರ್ತನೆಯ ಬದಲಾವಣೆಯನ್ನು ತರುವತ್ತ ಗಮನಹರಿಸುತ್ತಿದೆ ಮತ್ತು ಕಳೆದ 3 ವರ್ಷಗಳಲ್ಲಿ 7,700 ಕ್ಕಿಂತ ಹೆಚ್ಚು ನೈರ್ಮಲ್ಯ ಕಾರ್ಮಿಕರಿಗೆ ಯಶಸ್ವಿಯಾಗಿ ತರಬೇತಿಯನ್ನು ನೀಡಲಾಗಿದೆ.ಇಲ್ಲಿಯವರೆಗೆ ತರಬೇತಿ ಪಡೆದ 100% ನೈರ್ಮಲ್ಯ ಕಾರ್ಮಿಕರು ಸುಸ್ಥಿರ ಉದ್ಯೋಗಗಳನ್ನು ಪಡೆಯಲು ಸಮರ್ಥರಾಗಿದ್ದಾರೆ. ಇವರು ಉನ್ನತ ಕಾರ್ಪೊರೇಟ್‌, ಆತಿಥ್ಯ ವಲಯ, ಚಿತ್ರಮಂದಿರಗಳು, ಆಟೋ ಮತ್ತು ಆಸ್ಪತ್ರೆ ವಲಯಗಳಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿದ್ದಾರೆ. ಈ ಉಪಕ್ರಮವು ನೈರ್ಮಲ್ಯ ಕೆಲಸಗಾರರಿಗೆ ಹೊಸ ಉದ್ಯೋಗಗಳನ್ನು ನಿಭಾಯಿಸಲು, ನಿರ್ವಹಿಸಲು ಮತ್ತು ಸರಿಹೊಂದಿಸಲು ಸಹಾಯ ಮಾಡಲು ಪೋಸ್ಟ್ ಪ್ಲೇಸ್‌ಮೆಂಟ್ ಬೆಂಬಲವನ್ನು ಒದಗಿಸುತ್ತದೆ.

Leave a Comment