ಟೆರರ್ ಲುಕ್ ನ ಸಾಫ್ಟ್ ಪ್ರತಿಭೆ “ಇಮ್ರಾನ್” ತುಮಕೂರು
ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ
ವಿದ್ಯಾಭ್ಯಾಸದ ಸಮಯದಿಂದಲೂ ಅಭಿನಯದ ಕಡೆಗೆ ಒಲವು ಬೆಳೆಸಿಕೊಂಡು, ಚಂದನವನದ ಹಲವಾರು ಖ್ಯಾತ ನಿರ್ದೇಶಕರನ್ನು ಭೇಟಿ ನೀಡಿ ಅವಕಾಶ ಗಿಟ್ಟಿಸಿಕೊಂಡು ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ಇಮ್ರಾನ್ ತುಮಕೂರು , ಮೂಲತಃ ತುಮಕೂರಿನವರು. ಸದ್ಯ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು
ಮೂಲತಃ ಶೋಯೆಬ್ ಇಮ್ರಾನ್ ಅಹಮದ್ ಇವರ ಹೆಸರು ಆಗಿದ್ದು, ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು ಹಿಡಿಸಿಕೊಂಡ ಇವರು ಸುದೀಪ್ ಅವರಂತೆ ದೊಡ್ಡ ನಟ ಆಗಬೇಕು ಎಂದು ಬಯಸಿ ಆ ನಿಟ್ಟಿನಲ್ಲಿ ಯತ್ನಿಸಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾದ ಬ್ರಹ್ಮಾಸ್ತ್ರ, ಕಣ್ಮಣಿ, ಕಲರ್ಸ್ ಟಿವಿಯಲ್ಲಿ ಪ್ರಸಾರವಾದ ಅಗ್ನಿಸಾಕ್ಷಿ, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಅಮೃತವರ್ಷಿಣಿ ಧಾರಾವಾಹಿಯಲ್ಲಿ ಇವರು ನಟಿಸಿದ್ದಾರೆ.
ವಿಲನ್ ರೋಲ್ ತನಗೆ ಒಗ್ಗಿದೆ ಎನ್ನುವುದು ಇಮ್ರಾನ್ ಅಭಿಮತ
ಸುಮಾರು 18 ಧಾರಾವಾಹಿ, 4- 5 ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಸದ್ಯ ಆತಂಕ ಸಿನೆಮಾದಲ್ಲಿ ಸುರೇಶ್ ರೈ ಅವರ ಜೊತೆ ನಟಿಸುತ್ತಿದ್ದಾರೆ. ಅಶೋಕ್ ಕಡಬ ನಿರ್ದೇಶನದ ‘ಸತ್ಯಂ’ ಹೆಸರಿನ ಕನ್ನಡ, ತೆಲುಗು, ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಇವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ, ಕಾಂಚಿ ಹೆಸರಿನ ಚಿತ್ರದಲ್ಲೂ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುರೇಶ್ ರೈ ಅವರು ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ. ವಿಲನ್ ಪಾತ್ರದಲ್ಲಿ ಇವರು ಹೆಚ್ಚಾಗಿ ನಟಿಸುತ್ತಿದ್ದಾರೆ. ವಿಲನ್ ರೋಲ್ ತನಗೆ ಒಗ್ಗಿದೆ ಎನ್ನುವುದು ಇಮ್ರಾನ್ ಅಭಿಮತ. ಇವರ ತಾಯಿ ಟೀಚರ್ ಆಗಿದ್ದು ಇವರನ್ನು ಪ್ರೋತ್ಸಾಹ ಮಾಡುತ್ತಿದ್ದಾರೆ.
ಸಿನಿಮಾದಲ್ಲಿ ಬಹು ಎತ್ತರಕ್ಕೆ ಬೆಳೆಯಬೇಕು ಎನ್ನುವುದು ಇವರ ಕನಸಾಗಿದೆ
ಜೈ ಕರ್ನಾಟಕ ಜನಪರ ವೇದಿಕೆಯಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ತುಮಕೂರು ನಗರದ ಬಿಜೆಪಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಆಗಿಯೂ ಇವರು ಕೆಲಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಬಹು ಎತ್ತರಕ್ಕೆ ಬೆಳೆಯಬೇಕು ಎನ್ನುವುದು ಇವರ ಕನಸಾಗಿದೆ. ಚಂದನವನದಲ್ಲಿ ತಮ್ಮ ಪ್ರತಿಭೆ ಮೂಲಕ ಮನೆ ಮಾತಾಗಬೇಕು ಎಂದು ಕನಸನ್ನು ಹೊಂದಿರುವ ಉದಯೋನ್ಮುಖ ಪ್ರತಿಭೆ ಇಮ್ರಾನ್ ತುಮಕೂರು ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿ.