“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ‘ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ‘ ಗ್ರ್ಯಾಂಡ್ ಫಿನಾಲೆ ಶೋ

Share

ಬೆಂಗಳೂರಿನ ಡಾ.ಅಂಬರೀಷ್ ಆಡಿಯೋಟೋರಿಯಮ್ ನಲ್ಲಿ ಎಲೈಟ್ ಸ್ಟಾರ್ ಈವೆಂಟ್ಸ್ ವತಿಯಿಂದ ಆಯೋಜಿಸಲಾದ ಅದ್ದೂರಿ ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ಶೋ ಉದಯೋನ್ಮುಖ ಮಾಡೆಲ್ ಗಳಿಗೆ ಉತ್ತಮ ವೇದಿಕೆ ಒದಗಿಸಿತು.

ಎಲೈಟ್ ಸ್ಟಾರ್ ಈವೆಂಟ್ಸ್ ನ ಗ್ರ್ಯಾಂಡ್ ಫಿನಾಲೆಗಾಗಿ ರಾಜ್ಯಾದ್ಯಂತ 35 ಮಾಡೆಲ್ ಗಳನ್ನು ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು. 2021ರ ಸಾಲಿನ ಮಿಸ್ಟರ್ ವಿಭಾಗದಲ್ಲಿ ನಂದನ್ ಶಿವಮೊಗ್ಗ ಅವರು ವಿಜೇತರಾದರು. ಮೊದಲ ರನ್ನರ್ ಅಪ್ ಆಗಿ ಪ್ರೇಮ್, ಎರಡನೇ ರನ್ನರ್ ಅಪ್ ಆಗಿ ವಿಷ್ಣು ಕುಲಕರ್ಣಿ ಹೊರಹೊಮ್ಮಿದರು.

ಮಿಸ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ಜರ್ನ ಪಡೆದರು. ಮೊದಲ ರನ್ನರ್ ಅಪ್ ಆಗಿ ನಿಸರ್ಗ, ಎರಡನೇ ರನ್ನರ್ ಅಪ್ ಆಗಿ ಅನಿಶಾ ಆಯ್ಕೆಯಾದರು. ಮಿಸ್ಸೆಸ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಂಪಿ ಕುಮಾರ್ ಅವರು ಪಡೆದರು. ಮೊದಲ ರನ್ನರ್ ಅಪ್ ಆಗಿ ಮೇಘನಾ, ಎರಡನೇ ರನ್ನರ್ ಅಪ್ ಆಗಿ ಅಮೂಲ್ಯ ಹೊರ ಹೊಮ್ಮಿದರು.

ಮಾಡಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿರುವ ರೂಪದರ್ಶಿ ಗುಣಲಕ್ಷ್ಮೀ ಅವರು ಎಲೈಟ್ ಸ್ಟಾರ್ ಈವೆಂಟ್ಸ್ ಸಂಸ್ಥೆಯ ಸ್ಥಾಪಕರಾಗಿದ್ದು ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಗ್ರ್ಯಾಂಡ್ ಫಿನಾಲೆಯ ಸೆಲೆಬ್ರಿಟಿ ಜ್ಯೂರಿಗಳಾಗಿ ಲಕ್ಷ್ಮಿ ಕೃಷ್ಣ, ಆದಮ್ ಪಾಷಾ ಮತ್ತು ಮೀರಾ ಅರುಣ್ ಕಾರ್ಯ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಬ್ರಾಂಡ್ ಅಂಬಾಸಿಡರ್ ಗಳಾದ ನಟಿ, ರೂಪದರ್ಶಿ ಶುಭ ರಕ್ಷಾ, ಪ್ರಜ್ವಲ್ ರವಿ, ಕಿಡ್ ಅಂಬಾಸಿಡರ್ ಸೃಷ್ಥಿ ಮತ್ತು ಕಲ್ಪಿತ್ ಕುಮಾರ್ ಪ್ರಮುಖ ಆಕರ್ಷಣೆಯಾಗಿದ್ದರು.

ಕ್ಯಾಡ್ ನೆಸ್ಟ್ ಸಂಸ್ಥೆಯು ಬ್ರಾಂಡ್ ಅಂಬಾಸಿಡರ್ ಪಾರ್ಟ್ನರ್ ಆಗಿ ವಿಜೇತರಿಗೆ ತಮ್ಮ ಸಂಸ್ಥೆಯ ಜಾಹೀರಾತುಗಳಿಗೆ ಸುವರ್ಣಾವಕಾಶ ಒದಗಿಸಿತು.

ಎಲೈಟ್ ಸ್ಟಾರ್ ಸಂಸ್ಥೆ ನಡೆಸಿದ ಈ ಕಾರ್ಯಕ್ರಮ ಕೇವಲ ಮನರಂಜನೆಗೆ ಸೀಮಿತವಾಗದೆ ಮಾನವೀಯತೆಯ ಹಸ್ತವನ್ನೂ ಕೂಡ ಚಾಚಿತ್ತು. ಮುಂದಿನ ಶೋ ಶಿವಮೊಗ್ಗದಲ್ಲಿ ನಡೆಯುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಇನ್ಸ್ಟ್ ಪೇಜ್ ಫಾಲೋ ಮಾಡಲು ಗುಣಲಕ್ಷ್ಮೀ ಕೋರಿದ್ದಾರೆ.

Leave a Comment