ಜಮಾಲಿಗುಡ್ಡದಲ್ಲಿ ಧನಂಜಯ ಸಿಂಪಲ್ ಪಾತ್ರ
ಸ್ಯಾಂಡಲ್‌ವುಡ್‌ನಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಬಲ್ಲಂತಹ ಕಲಾವಿದರಾಗಿರುವ ಧನಂಜಯ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ದಲ್ಲಿ ಸಿಂಪಲ್ ಪಾತ್ರವನ್ನು ಮಾಡಿದ್ದಾರೆ. ಕುಶಾಲ್‌ಗೌಡ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಧನಂಜಯ ಲುಕ್ ಕೂಡ ವಿಭಿನ್ನವಾಗಿದ್ದು, ಅವರ ಪಾತ್ರದ ಹೆಸರು ಹಿರೋಷಿಮಾ ಎಂದು ತಿಳಿದು ಬಂದಿದೆ. ಅವರು ಈ ಚಿತ್ರದಲ್ಲಿ ಬಾರ್ ಸಪ್ಲೆöÊಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ಮಾಪಕ ಶ್ರೀಹರಿ ಅವರಿಗೆ ಸಿನಿಮಾದ ಬಗ್ಗೆ ಆಸಕ್ತಿಯಿದೆ. ಇದರ ಜತೆಗೆ ಕಾರ್ತಿಕ್ ಎಂಬ ಸಿನಿಮಾಟೋಗ್ರಾಫರ್ ಸೇರಿದಂತೆ ಒಂದೊಳ್ಳೆ ತಂಡವನ್ನು ಹೊಂದಿದ್ದು, ಈ ರೀತಿಯ ಪ್ರಯತ್ನಗಳನ್ನು ಯಾಕೆ ಮಾಡಬಾರದು ಎಂದು ಮಾಡಿದ ಚಿತ್ರವಿದು.
`ಪ್ರತಿ ನಿರ್ದೇಶಕರು ಬೇರೆ ಬೇರೆ ಜಾನರ್‌ನಲ್ಲಿ ಕೆಲಸ ಮಾಡುತ್ತಾರೆ. ಕಲಾವಿದರು ಸಹ ಬೇರೆ ಬೇರೆ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಿರಬೇಕು. ಒಂದೇ ಪಾತ್ರಕ್ಕೆ ಅಂಟಿಕೊಳ್ಳದೇ ವಿವಿಧ ರೀತಿಯ ಪಾತ್ರಗಳನ್ನು ಮಾಡಬೇಕು. ಜಮಾಲಿಗುಡ್ಡದಲ್ಲಿ ತನ್ನ ಪಾತ್ರ ಮುಗ್ದ ಯುವಕನ ಪಾತ್ರ. ತಾನು, ತನ್ನವರನ್ನು ಬಿಟ್ಟರೆ ಆತನಿಗೆ ಬೇರೆ ಬದುಕೇ ಗೊತ್ತಿರುವುದಿಲ್ಲ. ಒಬ್ಬ ವ್ಯಕ್ತಿ ಹೀಗೂ ಯೋಚಿಸಬಹುದಾ, ಮಗುವಿನ ರೀತಿ ಒಬ್ಬ ಮನುಷ್ಯ ಇರಬಹುದೇ ಎಂದು ಪ್ರೇಕ್ಷಕರು ಅಂದುಕೊಳ್ಳುವAತಹ ಪಾತ್ರವಿದು’ ಎಂದಿದ್ದಾರೆ ಧನಂಜಯ.
ಮಾಸ್ ಅಭಿಮಾನಿಗಳಿಗೆ ಮಾಡಿರುವಂತಹ ಚಿತ್ರವಲ್ಲ. ಒಳ್ಳೆಯ ಪರ್ಫಾರ್ಮೆನ್ಸ್ ಇದೆ. ವಿಶೇಷವಾದ ನಿರೂಪಣೆಯನ್ನು ನಿರ್ದೇಶಕರು ಮಾಡಿದ್ದಾರೆ. ರೆಗ್ಯುಲರ್ ಫಾರ್ಮ್ಯಾಟ್ ಸಿನಿಮಾ ಇದಲ್ಲ. ಇಂತಹ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ರಿಸ್ಕ್ ಎನಿಸುತ್ತಿದೆ. ಆದರೆ, ಆ ರಿಸ್ಕ್ ತೆಗೆದುಕೊಂಡು ಚಿತ್ರವನ್ನು ಮಾಡಿರುವುದಾಗಿ ಡಾಲಿ ಧನಂಜಯ ತಿಳಿಸಿದ್ದಾರೆ.