ಜ.೨೬ರಂದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆ

Share

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿಯ ವಿವಾಹ ಜನವರಿ ೨೬ರಂದು ಮೈಸೂರಿನಲ್ಲಿ ನಡೆಯಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿರುವ ವಿವಾಹ ಸಮಾರಂಭದಲ್ಲಿ ಎರಡೂ ಕುಟುಂಬದ ಬಂಧುಗಳು, ಸ್ನೇಹಿತರು ಹಿತೈಷಿಗಳಿಗೆ ಆಮಂತ್ರಣ ನೀಡಲಾಗಿದೆ. ವಿವಾಹದ ಎರಡು ದಿನಗಳ ಬಳಿಕ ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಆರತಕ್ಷತೆ ಸಮಾರಂಭ ಏರ್ಪಡಿಸಲಾಗಿದ್ದು, ಚಿತ್ರರಂಗ, ರಾಜಕೀಯ ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ನೂತನ ವಧುವರರಿಗೆ ಶುಭ ಹಾರೈಸಲಿದ್ದಾರೆ.

ವಸಿಷ್ಠ ಸಿಂಹ ಸದ್ಯಕ್ಕೆ ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ಬಿಝಿಯಾಗಿದ್ದಾರೆ. ಹರಿಪ್ರಿಯಾ ಕೈಯಲ್ಲೂ ಒಂದಷ್ಟು ಸಿನಿಮಾಗಳಿದ್ದು, ಅದರಲ್ಲಿ ಕೆಲವು ಬಿಡುಗಡೆಗೆ ರೆಡಿಯಾಗಿವೆ. ಆದರೆ ಮದುವೆಯ ಬಳಿಕ ಇಬ್ಬರಿಗೂ ಕೊಂಚ ಬ್ರೇಕ್ ಬೇಕು ಎಂಬುದು ಸಿಂಹಪ್ರಿಯಾ ಜೋಡಿಯ ಒಕ್ಕೂರಲ ಮಾತಾಗಿದೆ. ಹರಿಪ್ರಿಯಾರವರ ಪ್ರಕಾರ ಮದುವೆಯ ನಂತರ ಒಳ್ಳೆ ಕಥೆ ಬಂದ್ರೆ, ಖಂಡಿತ ಸಿನಿಮಾ ಮಾಡುತ್ತಾರೆ. ಮೊದಲು ಹೆಂಡತಿಯಾಗಿ ತಾನು ಸಕ್ಸಸ್ ಆಗಬೇಕು. ಮದುವೆ ಆದ ಮೇಲೆ ಚಿಕ್ಕ ಬ್ರೇಕ್ ತನಗೆ ಬೇಕು. ಸದ್ಯಕ್ಕೆ ತಾನು ಮದುವೆ, ಸಂಸಾರವನ್ನು ಎಂಜಾಯ್ ಮಾಡಬೇಕು ಎನ್ನುತ್ತಾರೆ.

Leave a Comment