ಅಜ್ಜಿಯ ಕನಸನ್ನು ನನಸಾಗಿಸ ಹೊರಟ ಪುಟ್ಟ ಪ್ರತಿಭೆ “ಸೃಷ್ಠಿ . ಎಸ್ “…..!!!!

Share
www.nammasuperstars.com

ಅಜ್ಜ ಪಿ.ಏಕನಂದ ಹಾಗೂ ಅಜ್ಜಿ ಶೀಲಾದೇವಿಯ ಮುದ್ದಿನ ಮೊಮ್ಮಗಳು ಸೃಷ್ಠಿ ಎಸ್. ಸೃಷ್ಠಿ ತನ್ನ ತಾಯಿಗಿಂತ ಹೆಚ್ಚಾಗಿ ತನ್ನ ಸಾಕಷ್ಟು ಸಮಯವನ್ನು ಅಜ್ಜ ಅಜ್ಜಿಯ ಜೊತೆ ಕಳೆಯುತ್ತಾಳೆ ಎನ್ನುತ್ತಾರೆ ಸೃಷ್ಠಿಯ ತಾಯಿ ಸಂಗೀತಾ ಎಸ್. ಮಾಡೆಲಿಂಗ್, ಜಾಹೀರಾತು, ರ್ಯಾಂಪ್ ವಾಕ್ ಹೀಗೆ ಸಾಕಷ್ಟು ಸ್ಟೇಜ್ ಶೋಗಳಲ್ಲಿ ಭಾಗವಹಿಸಿ, ತನ್ನ ಐದನೇ ವಯಸ್ಸಿನಲ್ಲಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾಳೆ.

ಪ್ರಿಯಾಂಕ ಉಪೇಂದ್ರ ರವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಸಿನಿಮಾಕ್ಕೂ ಸೃಷ್ಠಿ ಸಹಿ ಮಾಡಿದ್ದಾರೆ.

ಲೀಟಲ್ ಮಿಲೇನಿಯಂ ಸ್ಕೂಲ್ ನಲ್ಲಿ ಯುಕೆಜಿಯಲ್ಲಿ ಓದುತ್ತಿರುವ ಸೃಷ್ಟಿ ಓದಿನಲ್ಲೂ ಮುಂದಿದ್ದಾಳೆ. ಮೊಮ್ಮಗಳನ್ನು ಟಿವಿ ಸ್ಕ್ರೀನ್ ಮೇಲೆ ನೋಡಬೇಕೆಂದು ಕನಸುಕಂಡಿದ್ದ ಅಜ್ಜಿಯ ಆಸೆ ಈಡೇರುವ ಮುಂಚೇಯೇ ಅವರು ಇವರಿಂದ ದೂರವಾದರೂ, ಅದರೆ ಅಜ್ಜಿ ಅವರ ಆಸೆಯಂತೆ ಸೃಷ್ಠಿಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಒದಗಿಬಂತು. ಶಶಾಂಕ್ ನಿರ್ದೇಶನದ ಪ್ರಿಯಾಂಕ ಉಪೇಂದ್ರ ರವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಸಿನಿಮಾಕ್ಕೂ ಸೃಷ್ಠಿ ಸಹಿ ಮಾಡಿದ್ದಾರೆ. ಕೆಲವೊಂದು ಅವಕಾಶಗಳು ಬರುತ್ತಿವೆಯಂತೆ.

ಮುದ್ದು ಮುದ್ದಾಗಿ ಮಾತನಾಡುವ ಈ ಮುದ್ದು ಪ್ರತಿಭೆ ಸೃಷ್ಠಿಗೆ ಫ್ಯಾಶನ್ ಲೋಕದಲ್ಲಿ ತನ್ನದೇ ಆದ ಗುರಿ, ಛಲವನ್ನು ಹೊಂದಿದ್ದಾಳೆ.

ಅಕ್ಟಿಂಗ್ ನಲ್ಲೂ ಯಾವ ಪಾತ್ರವನ್ನು ನಿಭಾಯಿಸಬಲೇ ಎಂಬ ಧೈರ್ಯ ಈ ಪುಟಾಣಿಯಲ್ಲಿದೆ. ಯಾವುದೇ ಭಯ , ಆತಂಕವಿಲ್ಲದೇ ಸ್ಟೇಜ್ ನಲ್ಲಿ ಕಾಣಿಸಿಕೊಳ್ಳುವ ಸೃಷ್ಠಿ ಎಲ್ಲರ ಮೆಚ್ಚುಗೆ ಯನ್ನು ಗಳಿಸುವುದರ ಜೊತೆಗೆ ಸಾಕಷ್ಟು ಅವಾರ್ಡ್ಸ್ ಗಳನ್ನು ಬಾಚಿಕೊಂಡಿದ್ದಾಳೆ. ಮುದ್ದು ಮುದ್ದಾಗಿ ಮಾತನಾಡುವ ಈ ಮುದ್ದು ಪ್ರತಿಭೆ ಸೃಷ್ಠಿಗೆ ಫ್ಯಾಶನ್ ಲೋಕದಲ್ಲಿ ತನ್ನದೇ ಆದ ಗುರಿ, ಛಲವನ್ನು ಹೊಂದಿದ್ದಾಳೆ. ಅದರ ಜೊತೆ ಜೊತೆಗೆ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ಅಭ್ಯಾಸ ವನ್ನು ಮಾಡುತ್ತಿದ್ದಾಳೆ. ಈ ಪುಟ್ಟ ಪ್ರತಿಭೆ ಸೃಷ್ಠಿ ಇನ್ನಷ್ಟು ಅವಕಾಶಗಳು, ಪ್ರಶಸ್ತಿಗಳು ಬರುವಂತಾಗಲಿ.

Kid Model Srushti’s Achievements and Awards

Leave a Comment