ಜ.೮ರಂದು ಯಶ್ ಹೊಸ ಸಿನಿಮಾ ಘೋಷಣೆ ಸಾಧ್ಯತೆ

Share

ಕೆಜಿಎಫ್ ಮತ್ತು ಕೆಜಿಎಫ್-೨ ಪ್ಯಾನ್ ಇಂಡಿಯಾ ಸಿನಿಮಾಗಳ ನಂತರ ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರದ ಘೋಷಣೆ ಮಾಡಿಲ್ಲ. ಅವರ ಹುಟ್ಟು ಹಬ್ಬ ಜನವರಿ ೮ರಂದು ಬರುವುದರಿಂದ ಅಂದೇ ಹೊಸ ಚಿತ್ರದ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮಗಳ ಹೆಸರಿನಲ್ಲಿ ಬ್ಯಾನರ್ ಶುರು ಮಾಡುವ ಇಂಗಿತವನ್ನು ಯಶ್ ವ್ಯಕ್ತಪಡಿಸಿದ್ದು, ಮುಂದಿನ ಚಿತ್ರ ಸ್ವಂತ ಬ್ಯಾನರ್‌ನಲ್ಲಿ ಮಾಡುತ್ತಾರೋ ಅಥವಾ ಬೇರೆಯವರ ಬ್ಯಾನರ್‌ನಲ್ಲಿ ಮಾಡುತ್ತಾರೆ ಎಂಬ ಕುತೂಹಲ ಹಲವರಲ್ಲಿದೆ. ಯಾವ ಭಾಷೆಯಲ್ಲಿ ಅವರು ಸಿನಿಮಾ ಮಾಡಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಯಶ್‌ಗೆ ನಿರ್ದೇಶನ ಮಾಡುವವರು ಯಾರು ಎಂಬುದನ್ನು ಇಲ್ಲಿಯವರೆಗೆ ಖಚಿತ ಪಡಿಸಲಾಗಿಲ್ಲ. ಹಲವಾರು ನಿರ್ಮಾಣ ಸಂಸ್ಥೆಗಳು ಮತ್ತು ನಿರ್ದೇಶಕರ ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ತಳಕು ಹಾಕಿಕೊಂಡಿವೆ. ಈ ಎಲ್ಲ ವಿಚಾರಗಳಿಗೆ ಜನವರಿ ೮ರಂದು ತೆರೆ ಬೀಳುವ ಸಂಭವವಿದೆ.

Leave a Comment