‘ಪದವಿ ಪೂರ್ವ’ ಯೂತ್‌ಫುಲ್ ಲವ್ ಸ್ಟೋರಿ

Share

ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್‌ಭಟ್ ಶಿಷ್ಯ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಪದವಿ ಪೂರ್ವ ಯೂತ್‌ಫುಲ್ ಲವ್‌ಸ್ಟೋರಿಯನ್ನು ಹೊಂದಿದ್ದು, ಡಿಸೆಂಬರ್ ೩೦ರಂದು ಚಿತ್ರ ಬಿಡುಗಡೆ ಆಗಲಿದೆ. ಪದವಿ ಪೂರ್ವ ಎಂದರೆ ಪಿಯುಸಿಯಲ್ಲಿ ನಡೆಯುವ ಕಥೆ. ೯೬-೯೭ರ ಕಾಲಘಟ್ಟದಲ್ಲಿ ಸಿನಿಮಾದ ಕಥೆ ನಡೆಯುತ್ತದೆ. ಪಿಯುಸಿ ಎನ್ನುವುದು ಮೊದಲುಗಳ ಹುಟ್ಟು, ಮೊದಲ ಪ್ರೀತಿ, ಮೊದಲ ಜಗಳ, ಮೊದಲ ಬ್ರೇಕಪ್ ಜತೆಗೆ ನಾವು ಮುಂದೆ ಏನಾಗುತ್ತೇವೆ ಎಂಬುದು ಆಗಲೇ ನಿರ್ಧಾರ ಮಾಡಿಕೊಳ್ಳುವಂತಹ ಸಮಯ. ಈ ಎಲ್ಲ ಮೊದಲುಗಳ ಸಂಗಮ ಪದವಿ ಪೂರ್ವ ಚಿತ್ರವಾಗಿದೆ.

ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂತೋಷ್ ರೈ ಪಾತಾಜಿ ಛಾಯಾಗ್ರಾಹಕರಾಗಿ ಆಗಿ ಕೆಲಸ ಮಾಡಿದ್ದಾರೆ. ಈ ಚಿತ್ರದ ಮೂಲಕ ಪೃಥ್ವಿ ಶ್ಯಾಮನೂರು ಎಂಬ ಯುವಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆತನಿಗೆ ಜೋಡಿಯಾಗಿ ಅಂಜಲಿ ಅನೀಶ್ ಮತ್ತು ಎರಡನೇ ನಾಯಕಿಯಾಗಿ ಯಶಾ ಶಿವಕುಮಾರ್ ನಟಿಸುತ್ತಿದ್ದಾರೆ.

Leave a Comment