“ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಶಹನಾಯ್ ನುಡಿಸಿದ್ದು ನಾನೋ ಅವರೋ ಗೊತ್ತಾಗ್ತಾಯಿಲ್ಲ ಅಂದರು, “ಬಿಸ್ಮಿಲ್ಲಾಖಾನ್ “

Share

ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ, ಅವಳ ಮೇಲೆ ಊರಿನ ಸಾಹಿಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ದೇವಾಲಯದಲ್ಲಿ ಮಂಗಳ ಕಾರ್ಯಗಳಲ್ಲಿ ಸನಾದಿ ನುಡಿಸುವದು ಅವನ ಪ್ರೀತಿಯ ಕೆಲಸ, ಈ ಕಾರಣದಿಂದಲೇ ಊರ ತುಂಬ ಆತ ಸನಾದಿ ಅಪ್ಪಣ್ಣ ಎಂದೇ ಹೆಸರುವಾಸಿಯಾಗಿರುತ್ತಾನೆ. ಅವನ ಸನಾದಿಯ ನೀನಾದಕ್ಕೆ ತಲೆದೂಗದವರೇ ಇರುವದಿಲ್ಲ. ಹೀಗಿದ್ದಾಗಲೇ ಅಪ್ಪಣ್ಣನ ಸನಾದಿಯ ನೀನಾದದ ಜೊತೆಯಲ್ಲಿ ನೃತ್ಯ ಮಾಡಬೇಕು ಎಂಬ ಹಿರಿಯಾಸೆ ಬಸಂತಿಗೆ ಬರುತ್ತದೆ. ಆಕೆ ಅದನ್ನೇ ತನ್ನ ಮನೆಯಲ್ಲಿ ಹೇಳುತ್ತಾಳೆ. ಈ ಮಾತು ಕೇಳಿಸಿಕೊಂಡ ಸಾಹುಕಾರ ಸೀದಾ ಅಪ್ಪಣ್ಣನ ಬಳಿ ಬಂದು ನೋಡಪ್ಪಾ ನಾನು ಎಲ್ಲ ರೀತಿಯ ಸಂಗೀತ ಕೇಳಿದ್ದೀನಿ. ಆದರೆ ನಿನ್ನ ಕಹಳೆ ಸಂಗೀತ ಕೇಳಿಲ್ಲ. ನಮ್ಮ ಬಸಂತಿ ಗೊತ್ತು ತಾನೆ, ಅವಳ ನಾಟ್ಯಕ್ಕೆ ನೀನು ಸನಾದಿ ನುಡಿಸು, ಆಗ ನಿನ್ನ ಖ್ಯಾತಿ ಕೀರ್ತಿ ಶಿಖರ ತಲುಪುತ್ತೆ. ಅದು ಬಿಟ್ಟು ಯಾವಾಗಲೂ ದೇವಸ್ಥಾನದಲ್ಲಿ ನುಡಿಸ್ತಾ ಇದ್ರೆ ಏನ್ ಪ್ರಯೋಜನ ಎನ್ನುತ್ತಾನೆ.

ಅದಕ್ಕೆ ಅಪ್ಪಣ್ನ ನನ್ನ ವಾದ್ಯ ಮಂಗಳ ಕಾರ್ಯಕ್ಕೆ ಮಾತ್ರ ಮೀಸಲು. ನಾನು ನಾಟ್ಯಕ್ಕೆ ಸನಾದಿ ಬಾರಿಸುವದಿಲ್ಲ. ಕ್ಷಮಿಸಿ ಎನ್ನುತ್ತಾನೆ. ಈ ನಿರಾಕರಣೆಯಿಂದ ಸಿಟ್ಟಾದ ಬಸಂತಿ ಓಹ್ ನನ್ನ ನಾಟ್ಯಕ್ಕೆ ನುಡಿಸಿದರೆ ಸೋತು ಹೋಗುವ ಭಯ ಅವರಿಗೆ ಇರಬಹುದು. ಅದಕ್ಕೆ ಅವರು ಹಿಂಜರಿದಿರಬಹುದು ಎಂದು ವ್ಯಂಗ್ಯವಾಡುತ್ತಾಳೆ. ಈ ಚುಚ್ಚು ಮಾತಿನಿಂದ ಅಪ್ಪಣ್ಣನು ಸಹಜವಾಗಿಯೇ ಯಾರು ಸೋಲುತ್ತಾರೋ ನೋಡೇ ಬಿಡೋಣ ಎಂಬರ್ಥದ ಮಾತಾಡುತ್ತಾನೆ. ಪರಿಣಾಮವಾಗಿ ಊರಿನ ಈಶ್ವರ ದೇವಸ್ಥಾನದ ಅಂಗಳದಲ್ಲಿ ಬಸಂತಿಯ ನೃತ್ಯಕ್ಕೆ ಅಪ್ಪಣ್ಣ ಸನಾದಿ ನುಡಿಸುವ ಸ್ಪರ್ಧೆ ಶುರುವಾಗುತ್ತದೆ. ಆಗ ಬಸಂತಿ ಅಪ್ಪಣ್ಣನನ್ನು ಕಣ್ಣಲ್ಲೇ ಕೆಣಕುತ್ತ ಹಾಡುತ್ತಾಳೆ ಕರೆದರೂ ಕೇಳದೆ ಸುಂದರನೇ, ಏಕೆ ನನ್ನಲ್ಲಿ ಈ ಮೌನ….

ಸನಾದಿ ಅಪ್ಪಣ್ಣ , ‘ರಾಜ್ ಕುಮಾರ್’ ರವರು ತುಂಬ ಆಸೆಪಟ್ಟು ಮಾಡಿದ ಚಿತ್ರ. ಇದು ಕೃಷ್ಣಪೂರ್ತಿ ಪುರಾಣಿಕರ ಕಾದಂಬರಿ ಆಧಾರಿಸಿದ ಚಿತ್ರ..!!!!

ಸನಾದಿ ಅಪ್ಪಣ್ಣ ಚಿತ್ರ ನೋಡಿರುವ ಎಲ್ಲರಿಗೂ ಈ ದೃಶ್ಯ ನೆನಪಿರುತ್ತದೆ. ಈ ಚಿತ್ರದ ಒಂದೆರಡು ವಿಶೇಷಗಳನ್ನು ನಡೆದಿವೆ. ಏನೆಂದರೆ, ಸನಾದಿ ಅಪ್ಪಣ್ಣ ರಾಜ್ ಕುಮಾರ್ ತುಂಬ ಆಸೆಪಟ್ಟು ಮಾಡಿದ ಚಿತ್ರ. ಇದು ಕೃಷ್ಣಪೂರ್ತಿ ಪುರಾಣಿಕರ ಕಾದಂಬರಿ ಆಧಾರಿಸಿದ ಚಿತ್ರ. ನಿಮ್ಮ ಕಾದಂಬರಿಯನ್ನು ಆಧಾರಿಸಿ ಸಿನಿಮಾ ಮಾಡಬೇಕೆಂದು ನಿರ್ಮಾಪಕರು ಕೇಳಿದಾಗ ಪುರಾಣಿಕರು ನಾಯಕನ ಪಾತ್ರದಲ್ಲಿ ರಾಜ್ ಕುಮಾರ್ ನಟಿಸಬೇಕು, ಹಾಗಿದ್ರೆ ಮಾತ್ರ ಒಪ್ಪಿಗೆ ಕೊಡುತ್ತೇನೆ, ಇಲ್ಲವಾದರೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರಂತೆ.

ಎಲ್ಲರನ್ನೂ ಕನಸಿನಲ್ಲೂ ಕಾಡುವ “ಕರೆದರೂ ಕೇಳದೆ” ಹಾಡಿಗೆ ಜತೆಯಾಗಿ ಸನಾದಿಯ ನಾದ ಇದೆಯಲ್ಲ ಅದು ‘ಬಿಸ್ಮಿಲ್ಲಾಖಾನ್ ರವರ ದಮನಿ ದಮನಿ ಯಿಂದ ಮೂಡಿ ಬಂದದ್ದು..!!!!

ಇನ್ನೊಂದು ವಿಶೇಷವೆಂದರೆ, ಈ ಚಿತ್ರಕ್ಕೆ ಶಹನಾಯ್ ನುಡಿಸಿದವರು ಉಸ್ತಾದ್ ಬಿಸ್ಮಿಲ್ಲಾಖಾನ್. ಎಲ್ಲರನ್ನೂ ಕನಸಿನಲ್ಲೂ ಕಾಡುವ ಕರೆದರೂ ಕೇಳದೆ ಹಾಡಿಗೆ ಜತೆಯಾಗಿ ಸನಾದಿಯ ನಾದ ಇದೆಯಲ್ಲ ಅದು ಬಿಸ್ಮಿಲ್ಲಾಖಾನ್ ರವರ ದಮನಿ ದಮನಿಯಿಂದ ಮೂಡಿ ಬಂದದ್ದು. ಅಂದ ಹಾಗೆ ಈ ಚಿತ್ರಕ್ಕೆ ಬಿಸ್ಮಲ್ಲಾಖಾನ್ ಅವರನ್ನು ಕರೆಸಬೇಕು ಎಂಬ ಪ್ರಸ್ತಾಪ ಬಂದದ್ದು, ಈ ಪ್ರಸ್ತಾಪಕ್ಕೆ ಖಾನ್ ಸಾಹೇಬರು ಒಪ್ಪಿಕೊಂಡಿದ್ದೂ ಆಕಸ್ಮಿಕವೇ.

ಸನಾದಿ ಅಪ್ಪಣ್ಣ ಸಿನಿಮಾದ ಚಿತ್ರಕಥೆ, ಸಂಭಾಷಣೆ, ಗೀತೆ ರಚನೆಯ ಕೆಲಸ ಶುರುವಾಯಿತಲ್ಲ ಆಗ ಉದಯ ಶಂಕರ್ ಹೇಳಿದ್ದರಂತೆ ದೇವಾಲಯದ ಅಂಗಳದಲ್ಲಿ ಅಪ್ಪಣ್ಣ ಬಸಂತಿಯ ಮಧ್ಯೆ ಸ್ಪರ್ಧೆ ಶುರುವಾಗುತ್ತದಲ್ಲ, ಆ ಸಂದರ್ಭದಲ್ಲಿ ಅಯ್ಯೋ ಪೆದ್ದಾ ನಿನಗೆ ಇದೆಲ್ಲ ಬೇಕಿತ್ತಾ, ಸುಮ್ಮನೆ ನಾನು ಕರೆದಾಗಲೇ ಬಂದು ಸನಾದಿ ನುಡಿಸಿದ್ರೆ ಆಗ್ತಾ ಇರಲಿಲ್ವಾ ಎಂಬುದನ್ನೇ ಬಸಂತಿ ವ್ಯಂಗ್ಯವಾಗಿ ಹೇಳುವ ಧಾಟಿಯಲ್ಲಿ ಹಾಡು ಇರಲಿ ಹೀಗೆ ಹೇಳಿದ್ದಷ್ಟೆ ಅಲ್ಲ ನಂತರದ ಹತ್ತೇ ನಿಮಿಷದಲ್ಲಿ ಕರೆದರೂ ಕೇಳದೇ ಹಾಡನ್ನು ಸಹ ಬರೆದು ಮುಗಿಸಿದರಂತೆ.

‘ನಿಮ್ಮ ಶಹನಾಯಿ ಧ್ವನಿ ನಮಗೆ ಬೇಕೇ ಬೇಕು. ನೀವು ಬರೋದೆ ಇಲ್ಲ ಅಂತ ಹಠ ಹಿಡಿದರೆ, ನಾನು ನಿಮ್ಮ ಮನೆಯ ಮುಂದೆ ಉಪವಾಸ ಕೂರುತ್ತೇನೆ. ಅಗತ್ಯ ಬಿದ್ರೆ ಇಲ್ಲೇ ಪ್ರಾಣ ಬಿಡುತ್ತೇನೆ ಹೊರತು ಊರಿಗಂತೂ ಹೋಗಲ್ಲ ಅಂತ ಅಂದರು’, ಚಿತ್ರದ ನಿರ್ಮಾಪಕರು…!

ಈ ಚಿತ್ರಕ್ಕೆ ಬಿಸ್ಮಿಲ್ಲಾಖಾನ್ ರವರು ಶಹನಾಯಿ ನುಡಿಸಿದರೆ ಚೆನ್ನಾಗಿರುತ್ತೇ ಅಂದವರು ಬೇರೆ ಯಾರೂ ಅಲ್ಲ ಡಾ: ರಾಜ್ ಕುಮಾರ್. ಸರಿ ಬಿಸ್ಮಿಲ್ಲಾ ಖಾನ್ ರವರನ್ನು ಒಪ್ಪಿಸಲು ನಿರ್ಮಾಪಕರಾದ ವಿಕ್ರಂ ಶ್ರೀನಿವಾಸ ರವರು ಕೊಲಕತ್ತಾಗೆ ಹೊಗಿ ಎಂಟು ದಿನ ತಂಗಿದ್ದರು. ಬಿಸ್ಮಿಲ್ಲಾಖಾನ್ ರವರನ್ನು ನೋಡುವ ಆಸೆಯಿಂದಲೇ ದಿನವೂ ಅವರ ಮನೆಗೆ ಹೋಗುತ್ತಿದ್ದರಂತೆ. ಆದರೆ ಬಿಸ್ಮಿಲ್ಲಾಖಾನರು ನಸುಕಿನಲ್ಲಿ ಎದ್ದು, ಶಹನಾಯಿ ಜೊತೆಯಲ್ಲಿ ಕಾಶಿ ವಿಶ್ವನಾಥನ ದೇವಾಲಯಕ್ಕೆ ಹೋಗಿಬಿಟ್ಟಿರುತ್ತಿದ್ದರಂತೆ. ಮುಂಜಾನೆಯೇ ದೇವರ ಸನ್ನಿಧಿಯಲ್ಲಿ ಶಹನಾಯಿ ನುಡಿಸಿ ಬರುವದು ಅವರ ದಿನಚರಿ.

ಹೀಗಿದ್ದಾಗಲೇ ಅದೊಂದು ದಿನ ಸಂದರ್ಭ ನೋಡಿ, ಬಿಸ್ಮಿಲ್ಲಾಖಾನ್ ರವರನ್ನು ಬೇಟಿಯಾದ ಶ್ರೀನಿವಾಸ್ ರವರು ವಿಷಯ ತಿಳಿಸಿದಾಗ, ಇವರ ಮಾತನ್ನೆಲ್ಲ ಕೇಳಿದ ಬಿಸ್ಮಿಲ್ಲಾಖಾನ್ ಹೇಳಿದರಂತೆ. ಈ ಹಿಂದೆ ನಾನು ಗೂಂಜ್ ಉಠೀ ಶಹನಾಯ್ ಅಂತ ಒಂದು ಸಿನಿಮಾ ಬಂದಿತ್ತು. ಅದಕ್ಕು ನನ್ನ ಶಹನಾಯಿ ವಾದನ ಬಳಸಿಕೊಂಡರು. ಆದರೆ ನನಗೆ ಆ ಸಿನಿಮಾ ತಂಡದಿಂದ ಬೇಸರ ಆಗುವಂತ ಸಂದರ್ಭಗಳು ಒದಗಿ ಬಂದವು. ಹಾಗಾಗಿ ಸಿನಿಮಾದವರ ಸಹವಾಸವೇ ಬೇಡ ಎಂದು ನಿರ್ಧರಿಸಿದ್ದೇನೆ, ನಾನು ಸಿನಿಮಾಕ್ಕೆ ಶಹನಾಯಿ ನುಡಿಸುವದಿಲ್ಲ ಕ್ಷಮಿಸಿ ಎಂದರಂತೆ.

ಬಿಸ್ಮಿಲ್ಲಾ ಖಾನ್ ರವರು ಸಿನಿಮಾಕ್ಕೆ ಶಹನಾಯಿ ನುಡಿಸುವದಿಲ್ಲ ಅಂತ ಹೇಳಿದರೂ, ನಂತರವೂ ನಿರ್ಮಾಪಕರು 3-4 ದಿನ ನೀವು ಬರಲೇ ಬೇಕು ಸಾರ್ ಎಂದು ಒತ್ತಾಯಿಸುತ್ತಲೇ ಬಂದರು. ಅದಕ್ಕೆ ಬಿಸ್ಮಿಲ್ಲಾಖಾನ್ ರವರು ಒಪ್ಪದಿದ್ದಾಗ, ವಿಕ್ರಂ ಶ್ರೀನಿವಾಸ್ ರವರು ಒಂದು ದಿನ ಕಾಶಿ ವಿಶ್ವನಾಥನ ದೇವಸ್ಥಾನದ ಎದುರಿಗೆ ಅಂಗಿ, ಬನೀಯನ್ನ ತೆಗೆದು ಜನಿವಾರ ತೋರಿಸಿ ಸರ್ ನಾನು ಬ್ರಾಹ್ಮಣ,ನಿಮ್ಮನ್ನು ಕರೆದುಕೊಂಡು ಹೋಗಬೇಕು ಅಂತ ಬಂದಿದ್ದೀನಿ. ಸನಾದಿ ಊದುವವನ ಪಾತ್ರವನ್ನು ರಾಜ್ ಕುಮಾರ್ ಮಾಡ್ತಾರೆ. ನಿಮ್ಮ ಶಹನಾಯಿ ಧ್ವನಿ ನಮಗೆ ಬೇಕೇ ಬೇಕು. ನೀವು ಬರೋದೆ ಇಲ್ಲ ಅಂತ ಹಠ ಹಿಡಿದರೆ, ನಾನು ನಿಮ್ಮ ಮನೆಯ ಮುಂದೆ ಉಪವಾಸ ಕೂರುತ್ತೇನೆ. ಅಗತ್ಯ ಬಿದ್ರೆ ಇಲ್ಲೇ ಪ್ರಾಣ ಬಿಡುತ್ತೇನೆ ಹೊರತು ಊರಿಗಂತೂ ಹೋಗಲ್ಲ ಅಂತ ಅಂದರು.

‘ನನಗೆ ಈ ಸಿನಿಮಾ ಸಂಗೀತ ಅಷ್ಟಾಗಿ ಒಗ್ಗಿ ಬರೋಲ್ಲ. ನಾನು ಇಲ್ಲೇ ಎಂಟು ದಿನ ಇರುತ್ತೇನೆ, ದಿನವೂ ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ 09-00 ಗಂಟೆಯವರೆಗೆ ಸತತವಾಗಿ ಶಹನಾಯಿ ನುಡಿಸುತ್ತೇನೆ. ನಂತರ ಈ ಟ್ಯೂನ್ ಗಳನ್ನು ಸಿನಿಮಾದಲ್ಲಿ ನಿಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳಿ ಅಂದರಂತೆ’…..!

ಈ ಮಾತಿಗೆ ಕರಗಿದ ಬಿಸ್ಮಿಲ್ಲಾ ಖಾನರು ಅದರೊಂದು ದಿನ ಒಂಭತ್ತು ಜನರ ತಂಡದೊಂದಿಗೆ ಮದರಾಸಿನ ಪ್ರಸಾದ್ ಸ್ಟುಡಿಯೋಗೆ ಬಂದರು. ಆಗ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ ಸಿನಿಮಾದ ಸಂದರ್ಭ ಹಾಗೂ ಶಹನಾಯಿ ರಾಗ ಹೇಗೆ ಬಂದರೆ ಚೆಂದ ಎಂಬುದನ್ನು ಬಿಸ್ಮಲ್ಲಾಖಾನರಿಗೆ ಸೂಕ್ಷ್ಮವಾಗಿ ಹೇಳಿದರು. ಅದಕ್ಕೆ ಬಿಸ್ಮಿಲ್ಲಾಖಾನ್ ರು ನೋಡಿ ನನಗೆ ಈ ಸಿನಿಮಾ ಸಂಗೀತ ಅಷ್ಟಾಗಿ ಒಗ್ಗಿ ಬರೋಲ್ಲ. ನಾನು ಇಲ್ಲೇ ಎಂಟು ದಿನ ಇರುತ್ತೇನೆ, ದಿನವೂ ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ 09-00 ಗಂಟೆಯವರೆಗೆ ಸತತವಾಗಿ ಶಹನಾಯಿ ನುಡಿಸುತ್ತೇನೆ. ನಂತರ ಈ ಟ್ಯೂನ್ ಗಳನ್ನು ಸಿನಿಮಾದಲ್ಲಿ ನಿಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳಿ ಅಂದರಂತೆ. ಈ ಮಾತಿಗೆ ಒಪ್ಪಿದ ಜಿ.ಕೆ. ವೆಂಕಟೇಶ್ ಎಂಟು ದಿನಗಳ ಕಾಲ ಶಹನಾಯ್ ನುಡಿಸಿದ ಮೇಲೆ, ಕರೆದರೂ ಕೇಳದೇ ಹಾಡಿಗೂ ಟ್ಯೂನ್ ಹಾಕಿಕೊಟ್ಟು ಬಿಸ್ಮಿಲ್ಲಾ ಖಾನ್ ರವರು ಊರಿನ ವಾಪಾಸ್ ಹೋದರು.

‘ನಾನು ಇಷ್ಟು ವರ್ಷ ಸತತವಾಗಿ ಅಭ್ಯಾಸ ಮಾಡಿದೆ. ಪ್ರಯತ್ನಪಟ್ಟೆ. ಆದರೆ ರಾಜ್ ಕುಮಾರ್ ರವರು ಕೇವಲ ಒಂದು ಗಂಟೆಯೊಳಗೆ ಇದನ್ನೆಲ್ಲ ಸಾಧಿಸಿಬಿಟ್ಟರು. ಈ ಚಿತ್ರಕ್ಕೆ ಶಹನಾಯಿ ನುಡಿಸಿರೋರು ನಾನೋ ಅಥವಾ ರಾಜ್ ಕುಮಾರ್ ರವರೋ ಅರ್ಥವಾಗುತ್ತಿಲ್ಲ…..‌!

ಇಲ್ಲೇ ಒಂದು ಅತಿ ಮುಖ್ಯವಾದ ವಿಷಯ. ಆ ಎಂಟು ದಿನಗಳ ಕಾಲವೂ ನಮ್ಮ ಅಣ್ಣಾವ್ರು ದೇವರ ಮುಂದೆ ನಿಲ್ಲುವ ಮಾತಿಲ್ಲದ ಭಕ್ತನಂತೆ ಅಮ್ಮನ ಮುಂದೆ ಕೂರುವ ಕಂದನಂತೆ ಬಿಸ್ಮಿಲ್ಲಾಖಾನ್ ಸಾಹೇಬರ ಮುಂದೆ ಕೂತಿದ್ದರು. ಈ ಅವಧಿಯಲ್ಲಿ ನಮ್ಮ ಅಣ್ಣಾವ್ರು ಶಹನಾಯ್ ಹಿಡಿಯು ರೀತಿ, ರಾಗದ ಏರಿಳಿತಕ್ಕೆ ಮುಖ, ಕೆನ್ನೆ, ಹಣೆಯ ನೆರಿಗೆ ಅದುರಬೇಕಾದ ಸಂದರ್ಭಕ್ಕೆ ತುಟಿ ಚಲನೆ ಹೊಂದಿಕೊಳ್ಳುವ ಪರಿ, ಕೈ ಬೆರಳುಗಳನ್ನು ನಿಯಮಿತವಾಗಿ ಚಲಿಸುವ ತಂತ್ರವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಿದ್ದರು.

ಕೆಲ ದಿನಗಳ ನಂತರ ಯಾವುದೋ ಕಾರ್ಯಕ್ರಮದ ನಿಮಿತ್ಯ ಮೈಸೂರಿಗೆ ಬಂದಿದ್ದರು ಬಿಸ್ಮಿಲ್ಲಾ ಖಾನರು. ಆಗ ಸನಾದಿ ಅಪ್ಪಣ್ಣ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಈ ಸುದ್ದಿ ಕೇಳಿದ ಬಿಸ್ಮಿಲ್ಲಾ ಖಾನರು ನಾನು ಒಮ್ಮೆ ಚಿತ್ರತಂಡದವರನ್ನು ನೋಡಬೇಕು ಎಂದು ನಿರ್ಮಾಪಕ ವಿಕ್ರಂ ಶ್ರೀನಿವಾಸ್ ರವರಿಗೆ ಫೋನ್ ಮಾಡಿದರು. ತಕ್ಷಣವೇ ವಿಕ್ರಂ ಶ್ರೀನಿವಾಸ್ ರವರು ಬಿಸ್ಮಿಲ್ಲಾ ಖಾನ್ ರವರನ್ನು ಕರೆಸಿಕೊಂಡರು. ನಂತರ ಅದುವರೆಗೆ ನಡೆದಿದ್ದ ಚಿತ್ರೀಕರಣದ ಭಾಗವನ್ನೆಲ್ಲ ತೋರಿಸಿದರು. ಎಲ್ಲವನ್ನೂ ನೊಡಿದ ಬಿಸ್ಮಿಲ್ಲಾಖಾನ್ ರವರು ನಾನು ಇಷ್ಟು ವರ್ಷ ಸತತವಾಗಿ ಅಭ್ಯಾಸ ಮಾಡಿದೆ. ಪ್ರಯತ್ನಪಟ್ಟೆ. ಆದರೆ ರಾಜ್ ಕುಮಾರ್ ರವರು ಕೇವಲ ಒಂದು ಗಂಟೆಯೊಳಗೆ ಇದನ್ನೆಲ್ಲ ಸಾಧಿಸಿಬಿಟ್ಟರು. ಈ ಚಿತ್ರಕ್ಕೆ ಶಹನಾಯಿ ನುಡಿಸಿರೋರು ನಾನೋ ಅಥವಾ ರಾಜ್ ಕುಮಾರ್ ರವರೋ ಅರ್ಥವಾಗುತ್ತಿಲ್ಲ. ಅದರಲ್ಲೂ ಅವರು ಕರೆದರೂ ಕೇಳದೇ ಹಾಡಿಗೆ ನಾನು ನುಡಿಸಿಯೇ ಇಲ್ಲ ಅನ್ನಬೇಕು, ಅಷ್ಟರಮಟ್ಟಿಗೆ ಆ ದೃಶ್ಯದಲ್ಲಿ ರಾಜ್ ಕುಮಾರ್ ರವರು ಶ್ರದ್ಧೆ, ತಲ್ಲೀನತೆ ಸಾಧಿಸಿದ್ದಾರೆ.

ಈಗ ಇನ್ನೊಮ್ಮೆ ಕರೆದರೂ ಕೇಳದೆ ಹಾಡನ್ನು ನೋಡಿ, ಆ ಹಾಡಿನಲ್ಲಿ ಎಸ್. ಜಾನಕಿ ಅಮ್ಮನವರ ಗಾಯನ, ಜಯಪ್ರದಾ ರವರ ನೃತ್ಯವನ್ನು ಮೀರಿಸುವಂತಹ ರಾಜ್ ರವರು ನುಡಿಸುವ ಶಹನಾಯಿ ವಾದನ ಹಾಡು ಮುಗಿದಾಗ ಬಿಸ್ಮಿಲ್ಲಾಖಾನ್ ರವರ ಥರಾನೇ ಉದ್ಗರಿಸದಿದ್ದರೆ ಕೇಳಿ.

= = = = =

Leave a Comment